ವಿದ್ಯಾ ಬಾಲನ್ ಯಾವಾಗಲೂ ಒಂದೇ ರೀತಿಯ ಪಾತ್ರಗಳಿಗೆ ಅಂಟಿಕೊಳ್ಳುವವರಲ್ಲ. ವಿಭಿನ್ನವಾದ, ಸವಾಲೆನಿಸುವ ಪಾತ್ರಗಳಿಂದ ಪ್ರೇಕ್ಷಕರಿಗೆ ಆಪ್ತ ಎನಿಸುತ್ತಾರೆ. ಇದೀಗ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. 

ಮದುವೆ ಬಳಿಕ ಮೇಘನಾ ರಾಜ್ ಹೊಸ ಸಿನಿಮಾ

ಭಾರತೀಯ ಗಣಿತಶಾಸ್ತ್ರದ ಪರಿಣಿತೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿಯವರ ಬಯೋಪಿಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ವಿಚಾರವನ್ನು ವಿದ್ಯಾ ಬಾಲನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಅನು ಮೆನನ್ ನಿರ್ದೇಶಿಸುತ್ತಿದ್ದು, ಅಬುಂದಂಟಿಯಾ ನಿರ್ಮಾಣ ಮಾಡುತ್ತಿದ್ದಾರೆ. 

‘ಫನಿ’ ಸಂತ್ರಸ್ತರಿಗೆ ಅಕ್ಷಯ್ ಕುಮಾರ್ ಆರ್ಥಿಕ ನೆರವು

ಗಣಿತ ಶಾಸ್ತ್ರದ ಪರಿಣಿತೆ ಶಕುಂತಲಾ ದೇವಿ ಪಾತ್ರ ಮಾಡುತ್ತಿರುವುದು ಖುಷಿ ವಿಚಾರ. ಅವರ ಜೀವನ ಚರಿತ್ರೆಯನ್ನು ತೆರೆ ಮೇಲೆ ತರುತ್ತಿರುವುದು ಖುಷಿಯ ವಿಚಾರ. ಒಂದು ಪುಟ್ಟ ಹಳ್ಳಿಯಿಂದ ಬಂದ ಹೆಣ್ಣು ಮಗಳೊಬ್ಬಳು ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡಿದಳು ಎಂದು ವಿದ್ಯಾ ಬಾಲನ್ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

 

ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದೇ ಖ್ಯಾತರಾದವರು.  ಗಣಿತದಲ್ಲಿ ಅದೆಷ್ಟೇ ಕ್ಲಿಷ್ಟವಾದ ಸಮಸ್ಯೆ ಇರಲಿ ಫಟಾಫಟ್ ಎಂದು ಬಗೆಹರಿಸುತ್ತಿದ್ದರು. ಇವರ ನೆನಪಿನ ಶಕ್ತಿ ಅದ್ಭುತ. ಗಣಿತ ಶಾಸ್ತ್ರಜ್ಞೆ ಜೊತೆಗೆ ಇವರೊಬ್ಬ ಜ್ಯೋತಿಷ್ಯೆ, ಕಾದಂಬರಿಗಾರ್ತಿ, ಲೇಖಕಿ.