ಮದುವೆ ಬಳಿಕ ಹೊಸ ಸಿನಿಮಾ ಮೂಲಕ ನಟಿ ಮೇಘನಾ ರಾಜ್ ಸ್ಯಾಂಡಲ್‌ವುಡ್‌ಗೆ | ಸೃಜನ್ ಲೋಕೇಶ್ ಜೊತೆ ನಾಯಕಿಯಾಗಿ ಮೇಘನಾ ರಾಜ್
ಮದುವೆ ನಂತರ ಒಂದಷ್ಟು ಕಾಲ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ನಟಿ ಮೇಘನಾ ರಾಜ್ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ. ಮೇಘನಾ ರಾಜ್ ಯಾವಾಗ ಮರಳುತ್ತಾರೆ ಎಂದು ಕಾಯುತ್ತಿದ್ದವರಿಗೆ ಖುಷಿ ವಿಚಾರವನ್ನು ನೀಡಿದ್ದಾರೆ.
ಅಮ್ಮಂದಿರ ದಿನಕ್ಕೆ ಎಲ್ಲಾ ಅಮ್ಮಂದಿರಿಗೂ ರ್ಯಾಪಿಡ್ ರಶ್ಮಿ ಗಿಫ್ಟ್
ಸಿನಿಮಾಗೆ ಮರಳುತ್ತಿರುವ ವಿಚಾರವನ್ನು ಟ್ವೀಟ್ ನಲ್ಲಿ ಅಧಿಕೃತಪಡಿಸುತ್ತಾ, ‘ ಯಾವಾಗ ಫಿಲ್ಮ್ ಗೆ ಮರಳುತ್ತೀರಾ ಎಂದು ಕೇಳುವವರಿಗೆ ಗುಡ್ ನ್ಯೂಸ್. ನನ್ನ ಬೆಸ್ಟ್ ಫ್ರೆಂಡ್ ಸೃಜನ್ ಲೋಕೇಶ್ ಜೊತೆ ಸಿನಿಮಾ ಮಾಡುತ್ತಿದ್ದೇನೆ. ಇನ್ನೂ ಚಿತ್ರಕ್ಕೆ ಹೆಸರಿಟ್ಟಿಲ್ಲ. ನಿನ್ನೆಯಿಂದ ಶೂಟಿಂಗ್ ಶುರುವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಸೃಜಲ್ ಲೋಕೇಶ್ ತಮ್ಮದೇ ಬ್ಯಾನರ್ ನಲ್ಲಿ ಮೇಘನಾ ರಾಜ್ ಜೊತೆ ಚಿತ್ರ ಮಾಡುತ್ತಿದ್ದಾರೆ. ರವಿ ಹಿಸ್ಟರ್ ಖ್ಯಾತಿಯ ಮಧುಚಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
