ನಟಿ ವಿದ್ಯಾ ಬಾಲನ್ ಬಾಲಿವುಡ್ ಗೆ ಬಂದು 20 ವರ್ಷ ಕಳೆದಿದೆ. ಸಾಕಷ್ಟು ಹಿಟ್ ಸಿನಿಮಾ ನೀಡಿದ ನಟಿ, ತಮ್ಮ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. 

ಯಾವ್ದೆ ವಿಷ್ಯ ಇರಲಿ ಅದನ್ನು ನೇರವಾಗಿ ಹೇಳುವ ಬಾಲಿವುಡ್ ನಟಿ ವಿದ್ಯಾ ಬಾಲನ್. ಮುಲಾಜಿಲ್ಲದೆ ತಮ್ಮ ಅಭಿಪ್ರಾಯವನ್ನು ಅವರು ಎಲ್ಲರ ಮುಂದಿಡ್ತಾರೆ. ಝೀರೋ ಫಿಗರ್ ಗೆ ಗಮನ ನೀಡ್ದೆ, ನಟನೆ ಇಂಪಾರ್ಟೆಂಟ್ ಎನ್ನುವ ನಟಿ ಈಗ ಇಂಟಿಮೇಟ್ ಸೀನ್ ನಲ್ಲಾದ ಇಂಟರೆಸ್ಟಿಂಗ್ ವಿಷ್ಯವನ್ನು ಎಲ್ಲರ ಮುಂದೆ ಹೇಳ್ಕೊಂಡಿದ್ದಾರೆ.

ವಿದ್ಯಾ ಬಾಲನ್ ಸಂದರ್ಶನವೊಂದರಲ್ಲಿ ನಟ- ನಟಿಯರು ಸ್ವಚ್ಛತೆಗೆ ಎಷ್ಟು ಮಹತ್ವ ನೀಡ್ಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. ಆಕ್ಟಿಂಗ್ ಮಾಡುವ ಸಂದರ್ಭದಲ್ಲಿ ಕಲಾವಿದರು ಬಹಳ ಹತ್ತಿರ ಇರ್ತಾರೆ. ಅದ್ರಲ್ಲೂ ಇಂಟಿಮೇಟ್ ಸೀನ್ ಗಳಲ್ಲಿ ಮತ್ತಷ್ಟು ಹತ್ತಿರಕ್ಕೆ ಬರ್ಬೇಕು. ಆಗ ಕಲಾವಿದರ ಮೈನಿಂದ ಮಾತ್ರವಲ್ಲ ಬಾಯಿಯಿಂದ ಬರುವ ಕೆಟ್ಟ ವಾಸನೆ, ನಟನೆಯ ಮೂಡ್ ಹಾಳು ಮಾಡುತ್ತೆ. ಈ ಹಿಂದೆ ಅನೇಕರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಈಗ ವಿದ್ಯಾ ಬಾಲನ್ ತಮ್ಮ ಅನುಭವ ಹೇಳಿದ್ದಾರೆ.

ಇಂಟಿಮೇಟ್ ಸೀನ್ ನಲ್ಲಿ ಏನಾಯ್ತು? : ವಿದ್ಯಾ ಬಾಲನ್ ಹಾಗೂ ಸಹ ನಟನ ಮಧ್ಯೆ ಇಂಟಿಮೇಟ್ ಸೀನ್ ನಡೆಯುತ್ತಿತ್ತು. ಮೊದಲೇ ವಿದ್ಯಾ ಸ್ವಲ್ಪ ನರ್ವಸ್ ಆಗಿದ್ರು. ಅವರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದು ಸಹ ನಟನ ವರ್ತನೆ. ಆತ ಚೈನೀಸ್ ಆಹಾರ ತಿಂದು ಬಂದಿದ್ನಂತೆ. ಆದ್ರೆ ಹಲ್ಲು ಉಜ್ಜಿರಲಿಲ್ಲ. ಬಾಯಿ ತೊಳೆದಿರಲಿಲ್ಲ. ಇದ್ರಿಂದ ವಿದ್ಯಾ ಬಾಲನ್ ಗೆ ಆಕ್ಟಿಂಗ್ ಮಾಡೋದು ಕಷ್ಟವಾಗಿತ್ತು. ಆದ್ರೆ ಇದನ್ನು ನಟನಿಗೆ ಹೇಳುವ ಸ್ಥಿತಿಯಲ್ಲಿ ವಿದ್ಯಾ ಬಾಲನ್ ಇರಲಿಲ್ಲ. ತನ್ನನ್ನು ತಾನೇ ಸಂಭಾಳಿಸಿಕೊಂಡ ವಿದ್ಯಾ ಬಾಲನ್, ಅವನು ನಿನ್ನ ಸಂಗಾತಿ ಅಲ್ಲ, ನೀನು ಬಂದಿರೋದು ಆಕ್ಟಿಂಗ್ ಮಾಡೋಕೆ ಅಂತ ಮನಸ್ಸಿನಲ್ಲೇ ಹೇಳಿಕೊಂಡಿದ್ರಂತೆ. ಆ ಟೈಂನಲ್ಲಿ ನಾನು ಸ್ವಲ್ಪ ಹೆದರಿದ್ದೆ. ಆತನಿಗೆ ಮಿಂಟ್ ನೀಡಲಿಲ್ಲ ಅಂತ ವಿದ್ಯಾ ಬಾಲನ್ ಹೇಳಿದ್ದಾರೆ.

ಇದ್ರ ಜೊತೆ ವಿದ್ಯಾ ನಾನು ಅಸುರಕ್ಷಿತ ನಟಿ ಎಲ್ಲ ಎಂಬ ವಿಷ್ಯವನ್ನೂ ಸ್ಪಷ್ಟಪಡಿಸಿದ್ದಾರೆ. ನಾನು ನಾಚಿಕೆಯಿಲ್ಲದ ಆಶಾವಾದಿ ಅಂತ ವಿದ್ಯಾ ಬಾಲನ್ ಹೇಳಿದ್ದಾರೆ. ನನ್ನ ಕೆಲಸಲ್ಲಿ 100 ಪರ್ಸೆಂಟ್ ನೀಡಿದ್ದೇನೆ ಅಂತ ವಿದ್ಯಾ ಹೇಳ್ಕೊಂಡಿದ್ದಾರೆ.

ಕಲಾವಿದರಿಗೆ ಸ್ವಚ್ಛತೆ ಮುಖ್ಯ : ವಿದ್ಯಾ ಬಾಲನ್ ಪ್ರಕಾರಮ ಎಷ್ಟೇ ಕೆಲಸದ ಒತ್ತಡ ಇರಲಿ, ಕಲಾವಿದರು ಸ್ವಚ್ಛವಾಗಿರಬೇಕು. ಹಲ್ಲುಜ್ಜಿರಬೇಕು. ಬಾಯಿ ಹಾಗೂ ದೇಹದ ವಾಸನೆ ಬಗ್ಗೆ ಗಮನ ನೀಡ್ಬೇಕು. ಸುಹಾಸನೆಯುಳ್ಳ ಸೆಂಟ್ ಬಳಕೆ ಮಾಡ್ಬೇಕು. ವಿಶೇಷವಾಗಿ ಇಂಟಿಮೇಟ್ ಸೀನ್ ಮಾಡುವ ಸಂದರ್ಭದಲ್ಲಿ ಇದು ಬಹಳ ಮುಖ್ಯ ಅಂತ ವಿದ್ಯಾ ಬಾಲನ್ ಹೇಳಿದ್ದಾರೆ.

ವಿದ್ಯಾ ಬಾಲನ್ ಮೊದಲ ಇಂಟಿಮೆಟ್ ದೃಶ್ಯ ಯಾವುದು? : ವಿದ್ಯಾ ಬಾಲನ್, ಸಹ ನಟನ ಹೆಸರು ಹೇಳಿಲ್ಲ. ಅವರು ತಮ್ಮ ಮೊದಲ ಇಂಟಿಮೆಟ್ ದೃಶ್ಯದ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿದ್ಯಾ ಬಾಲನ್ 2005ರಲ್ಲಿ ತೆರೆಗೆ ಬಂದ ಪರಿಣೀತಾ ಸಿನಿಮಾದಲ್ಲಿ ಮೊದಲ ಬಾರಿ ಇಂಟಿಮೇಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಈ ಟೈಂನಲ್ಲಿ ನನಗೆ ಭಯವಾಗಿತ್ತು ಅಂತ ವಿದ್ಯಾ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಸೀನ್ ಗೆ ಮೊದಲು ವಿದ್ಯಾ ಬಳಿ ಬಂದ ಸಂಜಯ್ ದತ್, ನನಗೆ ಭಯವಾಗ್ತಿದೆ ಎಂದಿದ್ದರಂತೆ. ಇದನ್ನು ಕೇಳಿ ನಕ್ಕಿದ್ದ ವಿದ್ಯಾ ಬಾಲನ್, ಅನುಭವಿ ಸಂಜಯ್ ದತ್ ಗೆ ಭಯವಾ ಅಂತ ಆಶ್ಚರ್ಯಪಟ್ಟಿದ್ದರು. ಸಂಜಯ್, ನನ್ನ ಹಣೆ ಮೇಲೆ ಮುತ್ತಿಟ್ಟು ಸಮಾಧಾನ ಮಾಡಿದ್ರು. ನಂತ್ರ ಶೂಟಿಂಗ್ ಆರಾಮವಾಗಿ ನಡೀತು ಅಂತ ವಿದ್ಯಾ ಬಾಲನ್ ಹೇಳಿದ್ದಾರೆ.