ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದ ನಟಿ ವಿದ್ಯಾ ಬಾಲನ್! ಶಾಕಿಂಗ್ ವಿಡಿಯೋ ವೈರಲ್
ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದ ನಟಿ ವಿದ್ಯಾ ಬಾಲನ್! ಮುಂದೇನಾಯ್ತು ನೋಡಿ... ಶಾಕಿಂಗ್ ವಿಡಿಯೋ ವೈರಲ್
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೂಲ್ ಭುಲೈಯಾ 3 ಚಿತ್ರದ ಹಾಡು ಅಮಿ ಜೆ ತೋಮರ್ಗೆ ನೃತ್ಯ ಮಾಡುತ್ತಿರುವ ಸಂದರ್ಭದಲ್ಲಿ ನಟಿ ವಿದ್ಯಾ ಬಾಲನ್ ಆಯ ತಪ್ಪಿಬಿದ್ದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ವಿದ್ಯಾ ಬಾಲನ್ ಅವರು ಮಾಧುರಿ ದೀಕ್ಷಿತ್ ಜೊತೆ ಈ ಹಾಡಿಗೆ ನೃತ್ಯ ಮಾಡುತ್ತಿದ್ದರು. ಅದ್ಭುತ ನೃತ್ಯದ ಮೂಲಕ ಇಬ್ಬರೂ ತಾರೆಯರು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಏಕಾಏಕಿ ವಿದ್ಯಾ ಅವರು ಆಯ ತಪ್ಪಿ ಬಿದ್ದುಬಿಟ್ಟರು. ಆದರೆ ಅದೇ ವೇಳೆ ಸಮಯ ಪ್ರಜ್ಞೆ ಮೆರೆದ ನಟಿ, ಕೂಡಲೇ ಕುಳಿತಲ್ಲಿನಿಂದಲೇ ನೃತ್ಯಕ್ಕೆ ಸ್ಟೆಪ್ ಹಾಕಿ, ಏನೂ ಆಗಿಲ್ಲ ಎನ್ನುವಂತೆ ಎದ್ದುನಿಂತು ನೃತ್ಯ ಮುಂದುವರೆಸಿ ಜನರ ಮನಸ್ಸನ್ನು ಗೆದ್ದುಬಿಟ್ಟರು. ಇವರು ಬಿದ್ದರೂ ಮಾಧುರಿ ದೀಕ್ಷಿತ್ ವಿಚಲಿತಗೊಳ್ಳದೇ ತಮ್ಮ ನೃತ್ಯವನ್ನು ಮುಂದುವರೆಸಿದ್ದರು.
ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಈ ಪರಿಯ ಡಾನ್ಸ್ ಮಾಡುವಾಗ ನಟಿಯರು ಸಿಕ್ಕಾಪಟ್ಟೆ ಸಂಭಾವನೆ ಪಡೆದಿರುತ್ತಾರೆ. ಅವರು ಸ್ವಲ್ಪ ಜಾಗರೂಕರಾಗಿ ಇರಬೇಕಾಗುತ್ತದೆ ಎಂದು ಕೆಲವರು ಹೇಳಿದರೆ, ವಿದ್ಯಾ ಬಾಲನ್ ಅವರ ಸಮಯ ಪ್ರಜ್ಞೆಯನ್ನು ನಿಜಕ್ಕೂ ಮೆಚ್ಚಬೇಕು. ಒಂದು ಕ್ಷಣವೂ ವಿಚಲಿತರಾಗದೇ ಅವರು, ಇದು ಕೂಡ ನೃತ್ಯದ ಒಂದು ಭಾಗ ಎನ್ನುವಂತೆ ಕುಳಿತಲ್ಲಿಯೇ ಆ್ಯಕ್ಷನ್ ಮಾಡಿ ನೃತ್ಯ ಮುಂದುವರೆಸಿರುವುದು ಶ್ಲಾಘನೀಯ ಎಂದು ಹಲವರು ಹೇಳಿದ್ದಾರೆ.ಮತ್ತೆ ಕೆಲವರು, ಪಕ್ಕದಲ್ಲಿಯೇ ವಿದ್ಯಾ ಬಿದ್ದರೂ ಮಾಧುರಿ ಆ ಕಡೆ ತಿರುಗಿಯೂ ನೋಡದೇ ಇರುವುದು ವಿಚಿತ್ರ ಎಂದು ಹೇಳಿದರೆ, ಮತ್ತೆ ಕೆಲವರು ಮಾಧುರಿ ಆ ರೀತಿ ಮಾಡಿದ್ದರೆ ಅದು ಅಸಭ್ಯವಾಗುತ್ತಿತ್ತು. ವೇದಿಕೆಯ ಮೇಲೆ ಇಬ್ಬರೂ ನಟಿಯರ ಮರ್ಯಾದೆ ಹೋಗುತ್ತಿತ್ತು. ಮಾಧುರಿ ಮಾಡಿರುವುದು ಸರಿಯಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋಗೆ ಸಾಕಷ್ಟು ಕಮೆಂಟ್ಸ್ ಸುರಿಮಳೆಯಾಗುತ್ತಿದೆ..
ವೇದಿಕೆಗೆ ಬರುವಾಗ ಪ್ಯಾಂಟ್ ಕಳಚಿ ಬಿತ್ತಾ? ನಟಿ ತಾನಿಯಾ ಶ್ರಾಫ್ ಒಳ ಉಡುಪು ವಿಡಿಯೋ ನೋಡಿ ಫ್ಯಾನ್ಸ್ ಸುಸ್ತು
ಈ ಕಾರ್ಯಕ್ರಮದ ಬಳಿಕ, ವಿದ್ಯಾ ಬಾಲನ್ ಅವರು ಮಾಧುರಿ ದೀಕ್ಷಿತ್ ಅವರನ್ನು ಹೊಗಳಿದರು. ತೇಜಾಬ್‌ನ ಏಕ್ ದೋ ತೀನ್ ಹಿಟ್ ಟ್ರ್ಯಾಕ್‌ನಲ್ಲಿ ಮಾಧುರಿಯ ಡಾನ್ಸ್ ನೋಡಿದ ದಿನದಿಂದಲೂ ನಾನು ಅವರ ಫ್ಯಾನ್ ಆಗಿದ್ದೇನೆ. ಆಗಿನಿಂದಲೂ ಆಕೆಯ ಜೊತೆ ಡಾನ್ಸ್ ಮಾಡುವುದು ನನ್ನ ಕನಸಾಗಿತ್ತು, ಇಂದು ಅದು ಈಡೇರಿದೆ ಎಂದು ಹೇಳಿದರು. ನಾನು ಏಕ್ ದೋ ತೀನ್ ಅನ್ನು ನೋಡಿದಾಗ, ಮಾಧುರಿ ಅವರಂತೆಯೇ ನೃತ್ಯ ಮಾಡಲು ಬಯಸಿದ್ದೆ. ಅವರ ನೃತ್ಯಕ್ಕೆ ಅವರೇ ಸಾಟಿ ಎಂದು ಶ್ಲಾಘಿಸಿದರು.
ಅಂದಹಾಗೆ ಭೂಲ್ ಭುಲೈಯಾ 3 ಚಿತ್ರವನ್ನು ಅನೀಸ್ ಬಾಜ್ಮೀ ನಿರ್ದೇಶಿಸಿದ್ದಾರೆ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರವು ಭಯಾನಕ ಮತ್ತು ಹಾಸ್ಯದ ಸಂಯೋಜನೆಯಾಗಿದೆ. ಮಾಧುರಿ ದೀಕ್ಷಿತ್ ಹೊರತುಪಡಿಸಿ, ವಿದ್ಯಾ ಬಾಲನ್, ಕಾರ್ತಿಕ್ ಆರ್ಯನ್, ತೃಪ್ತಿ ಡಿಮ್ರಿ, ರಾಜ್‌ಪಾಲ್ ಯಾದವ್ ಮತ್ತು ಸಂಜಯ್ ಮಿಶ್ರಾ ಇತರರು ಈ ಚಿತ್ರದಲ್ಲಿ ಇದ್ದಾರೆ. ನವೆಂಬರ್ 1ರಂದು ಚಿತ್ರ ಬಿಡುಗಡೆಯಾಗಲಿದೆ, ಭೂಲ್ ಭುಲೈಯಾ 3 ರೋಹಿತ್ ಶೆಟ್ಟಿಯವರ ಸಿಂಗಮ್ ಎಗೇನ್‌ನಿಂದ ಗಮನಾರ್ಹವಾದ ಬಾಕ್ಸ್ ಆಫೀಸ್ ಸವಾಲನ್ನು ಎದುರಿಸುತ್ತಿದೆ.
ಹೋಟೆಲ್ ಬಿಲ್ ವಿಚಾರಕ್ಕೆ ಆರು ಮಂದಿ ಬಾಯ್ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ್ರಾ ಶ್ರುತಿ ಹಾಸನ್?