ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ, ತಮ್ಮ ಅಭಿನಯ, ಸೌಂದರ್ಯ ಮತ್ತು ಎತ್ತರದಿಂದ ಹೆಸರುವಾಸಿಯಾಗಿದ್ದಾರೆ. ಸುಮಾರು 5.10 ಅಡಿ ಎತ್ತರವಿರುವ ಇವರನ್ನು "ಅರೇಬಿಯನ್ ಕುದುರೆ" ಎಂದು ಕರೆಯುತ್ತಾರೆ. ಅನುಷ್ಕಾ ಅವರ ಎತ್ತರದ ಬಗ್ಗೆ ಅನೇಕ ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ (Anushka Shetty). ಅನುಷ್ಕಾ ಶೆಟ್ಟಿ ತಮ್ಮ ಮನೋಜ್ಞ ಅಭಿನಯದ ಮೂಲಕ ಮಾತ್ರ ಅಲ್ಲ, ತಮ್ಮ ಸೌಂದರ್ಯ, ಹೈಟ್ ನಿಂದಲೂ ಜನಪ್ರಿಯತೆ ಪಡೆದಿದ್ದಾರೆ. ಅನುಷ್ಕಾ ಶೆಟ್ಟಿ ನಟಿಸಿದ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಈ ಮಂಗಳೂರು ಬೆಡಗಿ ಸ್ವೀಟಿಯ ಅಭಿನಯಕ್ಕೆ ಕಳೆದು ಹೋಗದವರು ಯಾರೂ ಇಲ್ಲ. ಹಾಗಾಗಿಯೇ ನಟಿಗೆ ವಯಸ್ಸು 40 ದಾಟಿದರೂ ಇಂದಿಗೂ ಬಹುಬೇಡಿಕೆಯ ನಟಿಯಾಗಿ ಉಳಿದಿದ್ದಾರೆ.
ಬಲವಂತದಿಂದ ಮದುವೆಯಾಗಲು ಇಷ್ಟವಿಲ್ಲ,ಕರೆಕ್ಟ್ ಟೈಮ್‌ಗೆ ಮಗು ಮಾಡ್ಕೋತ್ತೀನಿ: ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಹೈಟ್ ಎಷ್ಟು ಗೊತ್ತಾ?
ಬಾಹುಬಲಿ, ಭಾಗಮತಿ, ಅರುಂಧತಿಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಅನುಷ್ಕಾ ಶೆಟ್ಟಿ, ಹೆಚ್ಚು ಚರ್ಚೆಯಲ್ಲಿರೋದು ಅವರ ಹೈಟ್ ನಿಂದಾಗಿ. ಅನುಷ್ಕಾ ಶೆಟ್ಟಿ ಎತ್ತರ (Anushka Shetty Height) ಬರೋಬ್ಬರಿ 5.10 ಅಥವಾ 5.11 ಅಡಿ ಎತ್ತರ ಇರಬಹುದು. ಇವರ ಹೈಟ್ ಗೆ ಸರಿಸಾಟಿಯಾಗಿರುವ ನಾಯಕಿಯರು ಯಾಕೆ, ನಾಯಕರೂ ಕೂಡ ಇರೋದು ತುಂಬಾನೆ ಕಡಿಮೆ ಅಂತಾನೆ ಹೇಳಬಹುದು. ತೆಲುಗು ಸಿನಿಮಾ ಇಂಡಷ್ಟ್ರಿಯಲ್ಲಿ ಪ್ರಭಾಸ್, ರಾಣಾ ದಗ್ಗುಭಾಟಿ ಮೊದಲಾದ ನಟರು 6 ಅಡಿ ಇದ್ದಾರೆ. ಅವರ ಎತ್ತರಕ್ಕೆ ಅನುಷ್ಕಾ ಎತ್ತರ ಸರಿಯಾಗಿಯೇ ಮ್ಯಾಚ್ ಆಗುತ್ತೆ, ಆದರೆ ತಮಿಳು ಸಿನಿಮಾ ರಂಗದಲ್ಲಿ ನಟರ ಹೈಟ್ ಅಷ್ಟೊಂದೇನು ಇಲ್ಲ. ಹಾಗಾಗಿಯೇ ಸಿನಿಮಾ ಶೂಟಿಂಗ್ ವೇಳೆ ಕಸರತ್ತು ಮಾಡಿಯೇ ಅನುಷ್ಕಾ ಜೊತೆ ಶೂಟ್ ಮಾಡಬೇಕಾಗುತ್ತೆ. ಸಿಂಗಂ ಸಿನಿಮಾದಲ್ಲಿ ಅನುಷ್ಕಾ, ನಾಯಕ ಸೂರ್ಯನಿಗೆ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಳಿಕ ಸೂರ್ಯ ಹೈಟ್ ಬಗ್ಗೆ ತಮಾಷೆ ಮಾಡಿ ಕೆಲವು ಜನ ಬಾಡಿ ಶೇಮಿಂಗ್ ಕೂಡ ಮಾಡಿದ್ದರು.
ಬರ್ತ್ಡೇ ಸಂಭ್ರಮದಲ್ಲಿ ಸ್ವೀಟಿ ಅನುಷ್ಕಾ ಶೆಟ್ಟಿ; ಘಾಟಿ ಅವತಾರದಲ್ಲಿ ಮಾಸ್ ಎಂಟ್ರಿ!
ಅನುಷ್ಕಾ ಶೆಟ್ಟಿಯನ್ನು ಕರೆಯುತ್ತಾರೆ ಅರೇಬಿಯನ್ ಕುದುರೆ
ಅನುಷ್ಕಾ ಅವರನ್ನು ಅರೇಬಿಯನ್ ಕುದುರೆ ಎಂದು ಕರೆಯುತ್ತಾರೆ. ಇವರ ಹೈಟ್ ನಿಂದಾಗಿಯೇ ಇವರನ್ನು ಅರೇಬಿಯನ್ ಕುದುರೆ (Arabian horse) ಎನ್ನುತ್ತಾರೆ. ಅನುಷ್ಕಾ ಸುಮಾರು 6 ಅಡಿ ಎತ್ತರವಿದ್ದು, ದಕ್ಷಿಣದ ಹಲವು ನಟ-ನಟಿಯರಿಗಿಂತ ಎತ್ತರವಾಗಿದ್ದಾರೆ. ಇನ್ನು ಅರೇಬಿಯನ್ ಕುದುರೆಗಳು ತಮ್ಮ ಶಕ್ತಿ ಮತ್ತು ಫಿಟ್ನೆಸ್‌ಗೆ ಹೆಸರುವಾಸಿ. ಅನುಷ್ಕಾ ಕೂಡ ಬಲವಾದ ಮತ್ತು ಸದೃಢ ದೇಹವನ್ನು ಹೊಂದಿದ್ದು, ಅನುಷ್ಕಾ ಜೊತೆ ನಟಿಸುವ ಹೆಚ್ಚಿನ ಪುರುಷ ನಟರಿಗಿಂತ ಅನುಷ್ಕಾ ತುಂಬಾ ಸ್ಟ್ರಾಂಗ್ ಆಗಿ ಕಾಣಿಸ್ತಾರೆ . ಇದಲ್ಲದೇ ಅರೇಬಿಯನ್ ಕುದುರೆಗಳು ದೊಡ್ಡ ಮತ್ತು ಎತ್ತರವಾದ ಕಾಲುಗಳನ್ನು ಹೊಂದಿವೆ. ಅದೇ ರೀತಿ ಅನುಷ್ಕಾ ಕಾಲುಗಳು ತುಂಬಾನೆ ಉದ್ದವಾಗಿದ್ದು, ಕಾಲುಗಳು ಟೋಂಡ್ ಮತ್ತು ಸ್ಟ್ರಾಂಗ್ ಆಗಿವೆ.. ಇದೇ ಕಾರಣಕ್ಕೆ ಅನುಷ್ಕಾರನ್ನು ಅರೇಬಿಯನ್ ಕುದುರೆ ಎನ್ನುತ್ತಾರೆ.
ಅನುಷ್ಕಾ ಶೆಟ್ಟಿಯನ್ನು ಅರೇಬಿಯನ್ ಕುದುರೆ ಅಂತ ಕರೆಯೋದ್ಯಾಕೆ?
ಸ್ಟಾರ್ ನಟರು ಅನುಷ್ಕಾ ಹೈಟ್ ಬಗ್ಗೆ ಏನು ಹೇಳಿದ್ದಾರೆ ನೋಡೋಣ…
ಅನುಷ್ಕಾ ಶೆಟ್ಟಿ ಹೈಟ್ ಕುರಿತು ಹಲವು ಸೆಲೆಬ್ರಿಟಿಗಳು ಮಾತನಾಡಿದ್ದು, ನಟ ಆರ್ ಮಾಧವನ್ (R Madhavan) ಮಾತನಾಡಿ, ಅನುಷ್ಕಾ ತುಂಬಾನೆ ಉದ್ದ, ಟವರ್ ರೀತಿ ಇದ್ದಾರೆ. ಜೊತೆಗೆ ತುಂಬಾನೆ ಸುಂದರವಾಗಿದ್ದಾರೆ ಎಂದಿದ್ದಾರೆ. ಬಾಹುಬಲಿ ನಟ ಪ್ರಭಾಸ್ ಅನುಷ್ಕಾ ಶೆಟ್ಟಿ ಅಂದ್ರೆ ಟಾಲ್, ಸೂಪರ್ ಸ್ಟಾರ್ ಎಂದಿದ್ದಾರೆ. ಇನ್ನು ರಾಣಾ ದಗ್ಗುಭಾಟಿ (Rana Daggubati) ಮಾತನಾಡಿ, ನನ್ನ ಜೊತೆ ನಟಿಸುವ ನಟಿಯರೆಲ್ಲಾ ಸ್ಟೂಲ್ ಮೇಲೆ ನಿಲ್ಲಬೇಕಾಗುತ್ತೆ, ಅಥವಾ ನಾನೇ ಕಾಲನ್ನು ಸ್ಪ್ರೆಡ್ ಮಾಡಿ ನಿಲ್ಲಬೇಕಾಗುತ್ತೆ. ಆದರೆ ನನ್ನ ಹೈಟ್ ಗೆ ಸರಿಯಾಗಿ ನಿಲ್ಲುವ ನಟಿ ಅಂದ್ರೆ ಅದು ಅನುಷ್ಕಾ ಎಂದಿದ್ದಾರೆ. ನಟ ವಿಕ್ರಮ್ (Actor Vikram) ಅವರು ಮಾತನಾಡಿ, ನನಗೆ ಮಾತ್ರ ಅಲ್ಲ, ತಮಿಳು ಇಂಡಷ್ಟ್ರಿಯಲ್ಲಿ ಇರುವ ಎಲ್ಲರಿಗೂ ಅನುಷ್ಕಾ ಹೈಟ್ ಬಗ್ಗೆ ಯೋಚನೆ ಇದೆ. ತ್ಯಾಗರಾಜನ್ ಎನ್ನುವವರು ತುಂಬಾನೆ ಹೈಟ್ ಅವರ ಜೊತೆ ಅನುಷ್ಕಾ ನಿಲ್ಲುವಾಗ ಶಾರ್ಟ್ ಆಗಿ ಕಾಣುತ್ತಾರೆ. ಹಾಗಾಗಿ ನಾವು ಅನುಷ್ಕಾ ಅವರನ್ನು ಅವರ ಜೊತೆ ನಿಲ್ಲುವಂತೆ ಹೇಳಿ ಸಂತೋಷ ಪಡುತ್ತಿದ್ದೆವು ಎಂದಿದ್ದಾರೆ. ಇನ್ನು ನಟ ಸಂತಾನಂ ಮಾತನಾಡಿ ಯಾರಿಗೂ ಟವರ್ ಸಿಗದಿದ್ದರೂ, ಅನುಷ್ಕಾಗೆ ಟವರ್ ಸಿಗುತ್ತೆ, ಯಾಕಂದ್ರೆ ಅವರು ತುಂಬಾನೆ ಹೈಟ್ ಇದ್ದಾರಲ್ಲ ಎಂದು ಹೇಳಿದ್ದಾರೆ.
