ಬಾಲಿವುಡ್ ನಟ ಭೂಪೇಶ್ ಕುಮಾರ್ ಪಾಂಡ್ಯಾ ಶ್ವಾಸಕೋಶದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ವಿಕ್ಕಿ ಡೋನರ್ ಸಿನಿಮಾದಲ್ಲಿ ನಟಿಸಿದ್ದ ಭೂಪೇಶ್ ಸಾವನನ್ನು  ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ದೃಢಪಡಿಸಿದೆ.

ಭೂಪೇಶ್ ಕುಮಾರ್ ಪಾಂಡ್ಯ ಮೃತಪಟ್ಟಿರುವುದು ಬೇಸರ ತಂದಿದೆ. ಅವರಿಗೆ ಎನ್‌ಎಸ್‌ಡಿ ಕುಟುಂಬದ ನಮನ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು  ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಟ್ವೀಟ್ ಮಾಡಿದೆ.

ಶೂಟಿಂಗ್‌ ಸೆಟ್‌ನಲ್ಲಿ ಹೃದಯಾಘಾತ: ಹಿರಿಯ ನಟ ರಾಕ್‌ಲೈನ್‌ ಸುಧಾಕರ್‌ ಇನ್ನಿಲ್ಲ

ಭೂಪೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮನೋಜ್ ಹಿಂದಿಯಲ್ಲಿ ಬರೆದಿದ್ದು, ಗಜರಾಜ್ ಕೈಮುಗಿದ ಎಮೋಜಿ ಕಮೆಂಟ್ ಮಾಡಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆಗೆ ಹಣವಿಲ್ಲದೆ ಬಳಲುತ್ತಿದ್ದ ನಟನಿಗೆ ನೆರವು ನೀಡುವಂತೆ ನಟನ ಗೆಳೆಯ ಕೇಳಿಕೊಂಡಿದ್ದರು. ಗುನೀತ್ ಮೋಂಗಾ ಅವರ ಸಿಖ್ಯ ಎಂಟರ್‌ಟೈನ್‌ಮೆಂಟ್ 2 ಲಕ್ಷ ನಟನ ಚಿಕಿತ್ಸೆಗಾಗಿ ಕೊಟ್ಟಿತ್ತು.

ನನ್ನ ಪತಿ 4ನೇ ಸ್ಟೇಜ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ನಟನ ಪತ್ನಿ ಛಾಯಾ ಪಾಂಡ್ಯಾ ತಿಳಿಸಿದ್ದಾರೆ. ಭೂಪೇಶ್ ವಿಕ್ಕಿ ಡೋನರ್, ಹಝಾರೋ ಕ್ವಾಯಿಂಶೇ ಐಸಿ ಸಿನಿಮಾದಲ್ಲಿ ನಟಿಸಿದ್ದರು.