Asianet Suvarna News Asianet Suvarna News

ಹಿರಿಯ ನಟ ಶ್ರೀಕಾಂತ್ ನಿಧನ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಮಿಳು ಹಿರಿಯ ನಟ ಶ್ರೀಕಾಂತ್ (82) ಕೊನೆ ಉಸಿರೆಳೆದಿದ್ದಾರೆ.

Veteran tamil actor Srikanth passes away at 82 in Chennai vcs
Author
Bangalore, First Published Oct 14, 2021, 5:18 PM IST
  • Facebook
  • Twitter
  • Whatsapp

ತೆಲುಗು ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ನಾಯಕನಾಗಿ, ವಿಲನ್‌ನಾಗಿ, ಪೋಷಕ ನಟನಾಗಿ ಮಿಂಚಿದ ನಟ ಶ್ರೀಕಾಂತ್ ಮಂಗಳವಾರ (October 12th) ರಾತ್ರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ. 

ಹಿರಿಯ ನಟ ಉಮೇಶ್ ಹೆಗ್ಡೆ ಇನ್ನಿಲ್ಲ

ಶ್ರೀಕಾಂತ್ ನಿಧನದ ವಿಚಾರ ತಿಳಿದು ಗಣ್ಯರು ಮತ್ತು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ' ಆತ್ಮೀಯ ಸ್ನೇಹಿತನ ಸಾವು ತುಂಬಾ ದುಃಖಕರವಾಗಿದೆ,' ಎಂದು ತಲೈವಾ ರಜನೀಕಾಂತ್ ಟ್ಟೀಟ್ ಮಾಡಿದ್ದಾರೆ. 'ನಾಯಕ, ಕ್ಯಾರೆಕ್ಟರ್ ಆರ್ಟಿಸ್ಟ್‌ ಆಗಿ ಸರ್ವತೋಮುಖ ಪ್ರತಿಭೆ ಶ್ರೀಕಾಂತ್ ಅವರ ನಿಧನ ವಾರ್ತೆ ಕೇಳಿ ಹೃದಯ ಭಾರವಾಗಿದೆ,' ಎಂದು ನಟ ಕಮಲ್ ಹಾಸನ್ ಟ್ಟೀಟ್ ಮಾಡಿದ್ದಾರೆ. 

Veteran tamil actor Srikanth passes away at 82 in Chennai vcs

ಜಯಲಲಿತಾ ನಟನೆಯ 'ವೆನ್ರಿಯಾ ಅಡೈ' ಚಿತ್ರದ ಮೂಲಕ ಕಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀಕಾಂತ್ ಅವರು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಸಿನಿಮಾ ಭೈರವಿ. ಭಾಮ ವಿಜಯಂ, ಪೂರ್ವ ತಲಯ, ಎತ್ತಿರ್ ನಿಚಲ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀಕಾಂತ್ ಅವರ ಕೊನೆ ಸಂದರ್ಶನದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಬೇಕು, ಎಂಬ ಆಸೆ ಹೇಳಿಕೊಂಡಿದ್ದರು. ಆದರೆ ಅವರ ಆಸೆ ಈಡೇರುವ ಮುನ್ನವೇ ವಿದಾಯ ಹೇಳಿದ್ದಾರೆ.  

ಕನ್ನಡದ ಹಿರಿಯ ನಟ ಸತ್ಯಜೀತ್ ಇನ್ನಿಲ್ಲ

ಬಣ್ಣದ ಬದುಕಿಗೆ ಕಾಲಿಡುವ ಮುನ್ನ ಶ್ರೀಕಾಂತ್ ಅವರು ಅಮೆರಿಕನ್ ಕಾನ್ಸೊಲೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿತ್ರರಂಗದಲ್ಲಿ ಅವರನ್ನು ವೆನ್ನಿರ ಆದೈ ಶ್ರೀಕಾಂತ್ ಎಂದು ಗುರುತಿಸುತ್ತಿದ್ದರು. ಶ್ರೀಕಾಂತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

Follow Us:
Download App:
  • android
  • ios