ಇತ್ತ ಕನ್ನಡದವರು ಕೂಡ ವಸಿಷ್ಠ ಸಿಂಹ ಅವರ ತೆಲುಗು ಪಯಣಕ್ಕೆ ಶುಭ ಹಾರೈಸುತ್ತಿದ್ದಾರೆ. ಹೀಗೆ ಎರಡೂ ಭಾಷೆಯ ಪ್ರೇಕ್ಷಕರನ್ನು ಹಾಗೂ ಚಿತ್ರರಂಗದ ಗಮನ ಸೆಳೆಯುತ್ತಿರುವುದು ‘ಒದೆಲ್ಲ ರೈಲ್ವೆ ಸ್ಟೇಷನ್‌’ ಚಿತ್ರದ ಮೂಲಕ.

‘ಈ ಚಿತ್ರದಲ್ಲಿ ತಿರುಪತಿ ಎನ್ನುವುದು ನನ್ನ ಪಾತ್ರದ ಹೆಸರು. ಮೃದು ಮನಸಿನ ಸಾಧಾರಣ ಯುವಕ, ಹಳ್ಳಿ ಹೈದ, ಓರ್ವ ಧೋಬಿ ಆಗಿರುತ್ತಾನೆ. ಇದು ನನ್ನ ಚೊಚ್ಛಲ ತೆಲುಗು ಚಿತ್ರದ ಪಾತ್ರ ಪರಿಚಯ. ನಾನಿದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ ಈ ಚಿತ್ರದಲ್ಲಿ ದಕ್ಕಿದೆ. ತೆಲುಗು ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಎನ್ನುವ ಕಾರಣಕ್ಕೆ ಈ ಚಿತ್ರದಲ್ಲಿ ಪಾತ್ರ ಮಾಡುತ್ತಿಲ್ಲ. ಈ ಚಿತ್ರದ ಕತೆ ಕೇಳಿ ನಟಿಸಲು ಒಪ್ಪಿದೆ. ಕತೆ ಮತ್ತು ನನ್ನ ಪಾತ್ರಕ್ಕೆ ಆ ಮಟ್ಟಿಗೆ ಖದರ್‌ ಇದೆ.- ವಸಿಷ್ಠ ಸಿಂಹ

Happy Birthday ವಸಿಷ್ಠ ಸಿಂಹ: ಮಾಲಿವುಡ್‌, ಟಾಲಿವುಡ್‌ನಲ್ಲೂ ಕನ್ನಡ ನಟನ ಕಂಪು 

ಈ ಚಿತ್ರದಲ್ಲಿ ವಸಿಷ್ಠ ಸಿಂಹ ಅವರದ್ದು ಧೋಬಿ ಪಾತ್ರ. ಟಾಲಿವುಡ್‌ನಲ್ಲಿ ಸಿಂಹ, ಕೈಯಲ್ಲಿ ಮಚ್ಚು ಹಿಡಿದು ನಿಲ್ಲುತ್ತಾರೆ ಎಂದೇ ಎಲ್ಲರು ಊಹೆ ಮಾಡಿದ್ದರು. ಹೀಗೆ ಐರನ್‌ ಬಾಕ್ಸ್‌ ಜತೆ ಫಸ್ಟ್‌ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಊಹೆಗಳನ್ನು ಉಲ್ಟಾಮಾಡಿದ್ದು, ಸಿನಿಮಾದಲ್ಲೂ ಇಂಥದ್ದೇ ಸಪ್ರೈಸ್‌ಗಳು ಇರುತ್ತವೆ ಎಂಬುದು ಚಿತ್ರತಂಡ ಫಸ್ಟ್‌ ಲುಕ್‌ ಮೂಲಕ ಬಿಟ್ಟುಕೊಟ್ಟಿದೆ.

 

 
 
 
 
 
 
 
 
 
 
 
 
 
 
 

A post shared by Vasishta N Simha (@imsimhaa)

ಶರಣ್‌ ಜತೆಗೆ ‘ಅಧ್ಯಕ್ಷ’ ಚಿತ್ರದಲ್ಲಿ ನಾಯಕಿಯಾಗಿದ್ದ ಹೆಬ್ಬಾ ಪಟೇಲ್‌ ‘ಒದೆಲ್ಲ ರೈಲ್ವೆ ಸ್ಟೇಷನ್‌’ ಚಿತ್ರದ ನಾಯಕಿಯಾಗಿದ್ದಾರೆ. ಆಂಧ್ರದ ಕರೀಮ್‌ ನಗರ ಜಿಲ್ಲೆಯ ಒದೆಲ್ಲಾ ರೈಲ್ವೆಸ್ಟೇಷನ್‌ನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ತೆಲುಗು ನಿರ್ದೇಶಕ ಸಂಪತ್‌ ನಂದಿ ಈ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದಾರೆ. ಅಶೋಕ್‌ ತೇಜ ನಿರ್ದೇಶನ, ಕೆಕೆ ರಾಧಾ ಮೋಹನ್‌ ನಿರ್ಮಾಣದ ಚಿತ್ರವಿದು. ಅನೂಪ್‌ ರುಬಿನ್ಸ್‌ ಸಂಗೀತ, ಸೌಂದರ್‌ ರಾಜನ್‌ ಕ್ಯಾಮೆರಾ ಚಿತ್ರಕ್ಕಿದೆ.

ತೆಲುಗಿನ ಎವರು ಕನ್ನಡಕ್ಕೆ ತಂದರು;ಪ್ರಮುಖ ಪಾತ್ರದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ