ತೆಲುಗಿನಲ್ಲಿ 2 ಸಿನಿಮಾ ನಿರ್ದೇಶಿಸಿರುವ ಅಶೋಕ್‌ತೇಜ ಈ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ನಿರ್ದೇಶಕ ಯೋಗರಾಜ ಭಟ್ಟರು ಮುಖ್ಯ ಅತಿಥಿಗಳಾಗಿ ಚಿತ್ರತಂಡಕ್ಕೆ ಶುಭ ಕೋರಿದರು.

ಹೊಸ ಸಿನಿಮಾ ರಿಲೀಸಾಗದೆ ಜನ ಬರಲ್ಲ;ಥೇಟರ್‌ ಮತ್ತೆ ಮುಚ್ಚಿದರೂ ಅಚ್ಚರಿ ಇಲ್ಲ! 

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದ ಕತೆ ಒಂದು ಕೊಲೆಯ ಸುತ್ತ ಸಾಗುತ್ತದೆ. ಪೊಲೀಸ್‌ ಅಧಿಕಾರಿ, ಮಾಡೆಲ್‌ ಹಾಗೂ ತನಿಖಾಧಿಕಾರಿ ಹೀಗೆ ಮೂರು ಪಾತ್ರಗಳ ಸುತ್ತ ಸಾಗುವ ಸಿನಿಮಾ ಇದು. ಈ ಚಿತ್ರವನ್ನು ಹೈದರಾಬಾದ್‌ನ ಉದ್ಯಮಿಗಳಾದ ರಾಜೇಶ್‌ ಅಗರವಾಲ್‌ ಹಾಗೂ ಡಿ ಜಯಪ್ರಕಾಶ್‌ರಾವ್‌ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

ದಿ ಇನ್‌ವಿಸಿಬಲ್‌ ಗೆಸ್ಟ್‌ ಎಂಬ ಸ್ಪಾ್ಯನಿಶ್‌ ಸಿನಿಮಾದ ಹಿಂದಿ ಅವತರಣಿಕೆ ಬದ್ಲಾ, ತೆಲುಗಲ್ಲಿ ಎವರು. ಈಗ ಕನ್ನಡದ ಸರದಿ. ‘ಈ ಚಿತ್ರದಲ್ಲಿ ನನಗೆ ಎರಡು ಪಾತ್ರವಿದೆ. ಒಳ್ಳೆಯ ಕ್ರೈಮ್‌ ಥ್ರಿಲ್ಲರ್‌. ಈ ಕಾರಣಕ್ಕೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ವಸಿಷ್ಠ ಸಿಂಹ ಹಾಗೂ ದಿಗಂತ್‌ ಜತೆಗೆ ನಟಿಸುತ್ತಿದ್ದಾರೆ. ನನ್ನ ಪಾತ್ರದಲ್ಲಿ ತುಂಬಾ ಟ್ವಿಸ್ಟ್‌ ಅಂಡ್‌ ತಿರುವುಗಳು ಇವೆ. ಇಡೀ ಕತೆ ಕೂಡ ಹಾಗೆ ಇರುತ್ತದೆ’ ಎಂದರು ಹರಿಪ್ರಿಯಾ.

"

ಒಂದು ಒಳ್ಳೆಯ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡಕ್ಕೆ ನಿರ್ದೇಶಕನಾಗಿ ಬರುತ್ತಿರುವ ಖುಷಿ ಇದೆ. ದೊಡ್ಡ ನಿರ್ಮಾಣದ ಸಂಸ್ಥೆ ಜತೆಗಿರುವುದರಿಂದ ಸಿನಿಮಾ ಅದ್ದೂರಿಯಾಗಿ ಮೇಕಿಂಗ್‌ ಮಾಡಿಕೊಳ್ಳಲಿದೆ ಎನ್ನುತ್ತಾರೆ ನಿರ್ದೇಶಕ ಅಶೋಕ್‌ ತೇಜ. ಶ್ರೀಚರಣ್‌ ಸಂಗೀತ ನಿರ್ದೇಶನ ಇದೆ. ಯೋಗಿ ಚಿತ್ರದ ಛಾಯಾಗ್ರಾಹಕರು. ಸುಬ್ರಮಣ್ಯ ಹಾಗೂ ಸುಕೃತ್‌ ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸಿದ್ದಾರೆ. ಅವಿನಾಶ್‌, ಸ್ವಾತಿ, ಮಂಜು ಪಾವಗಡ, ಗೌತಮ್‌ ಚಿತ್ರದ ಮುಖ್ಯ ಪಾತ್ರಧಾರಿಗಳು.