Asianet Suvarna News Asianet Suvarna News

ವರುಣ್ ತೇಜ್-ಲಾವಣ್ಯಾ ಎಂಗೇಜ್ಮೆಂಟ್ ರಿಂಗ್‌ನ ಬೆಲೆ 10 ವರ್ಷದ ಮನೆ ಬಾಡಿಗೆಗಿಂತ ಹೆಚ್ಚು

ವರುಣ್ ತೇಜ್ ಮತ್ತು ಲಾವಣ್ಯಾ ತ್ರಿಪಾಠಿ ಎಂಗೇಜ್ಮೆಂಟ್ ರಿಂಗ್‌ನ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಉಂಗುರದ ಬೆಲೆ ಬರೋಬ್ಬರಿ 10 ವರ್ಷದ ಮನೆ ಬಾಡಿಗೆಗಿಂತ ಹೆಚ್ಚಿದೆ.

Varun Tej And Lavanya Tripathi Engagement Rings Cost Rs 25 lakh each sgk
Author
First Published Jun 14, 2023, 2:48 PM IST | Last Updated Jun 16, 2023, 3:44 PM IST

ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ನಗೇಂದ್ರ ಬಾಬು ಪುತ್ರ, ನಟ ವರುಣ್ ತೇಜ್ ಇತ್ತೀಚೆಗಷ್ಟೆ ನಟಿ, ಬಹುಕಾಲದ ಗೆಳತಿ ಲಾವಣ್ಯಾ ತ್ರಿಪಾಠಿ ಜೊತೆ  ನಿಶ್ಚಿತಾರ್ಥ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ವರುಣ್ ತೇಜ್ ಮತ್ತು ಲಾವಣ್ಯಾ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರೂ ಈಗ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೆ ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥ ಸಮಾರಂಭದಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು. ಸಮಾರಂಭದಲ್ಲಿ ಇಡೀ ಮೆಗಾ ಕುಟುಂಬ ಹಾಜರಾಗಿತ್ತು. 

ವರುಣ್ ತೇಜ್ ಮತ್ತು ಲಾವಣ್ಯಾ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವ ಜೋಡಿಗೆ ಅಭಿಮಾನಿಗಳು ಹಾಗೂ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ನಡುವೆ ವರುಣ್ ತೇಜ್ ಮತ್ತು ಲಾವಣ್ಯಾ ತ್ರಿಪಾಠಿ ಎಂಗೇಜ್ಮೆಂಟ್ ರಿಂಗ್ ಸದ್ದು ಮಾಡುತ್ತಿದ್ದಾರೆ. ಇವರ ನಿಶ್ಚಿತಾರ್ಥದ ಉಂಗುರದ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ವಿಶೇಷವಾಗಿ ಡಿಸೈನ್ ಮಾಡಿಸಿದ ರಿಂಗ್ ಅದಾಗಿತ್ತು. ಅಂದಹಾಗೆ ಒಂದು ಉಂಗುರದ ಬೆಲೆ ಬರೋಬ್ಬರಿ 25 ಲಕ್ಷ ರೂಪಾಯಿ ಎನ್ನಲಾಗಿದೆ. 

ಇನ್ನೂ ಇಬ್ಬರ ಉಡುಗೆ ಕೂಡ ಗಮನ ಸೆಳೆಯುತ್ತಿದೆ. ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ ಎನಿಸಿದ್ರೂ ದುಬಾರಿ ಬಟ್ಟೆಯಾಗಿತ್ತು. ಲಾವಣ್ಯಾ ತ್ರಿಪಾಠಿ ಬನಾರಸಿ ಸೀರೆಯಲ್ಲಿ ಕಂಗೊಳಿಸಿದ್ದರು. ಗೋಲ್ಡನ್ ಫ್ಲೋರಲ್ ಸೀರೆಯಾಗಿತ್ತು. ಹಸಿರು ಬಣ್ಣದ ಬನಾರಸಿ ಸೀರೆಯ ಬೆಲೆ ರೂ. 75,000. ವರುಣ್ ತೇಜ್ ವಿಶೇಷ ದಿನಕ್ಕಾಗಿ ಕುರ್ತಾ-ಪೈಜಾಮಾವನ್ನು ಧರಿಸಿದ್ದರು. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ನಿಶ್ಚಿತಾರ್ಥದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 ಚಿರು ಕುಟಂಬದ ಸೊಸೆಯಾಗ್ತಿರುವ ಲಾವಣ್ಯಾ ಜಾತಿಗಾಗಿ ಹುಡುಕಾಟ: ಇಂಟರ್‌ನೆಟ್‌ನಲ್ಲಿ ಹೆಚ್ಚಿದ ಸರ್ಚಿಂಗ್

ವರುಣ್ ತೇಜ್ ಮತ್ತು ಲಾವಣ್ಯಾ ತ್ರಿಪಾಠಿ ನಿಶ್ಚಿತಾರ್ಥ ಸಮಾರಂಭದಲ್ಲಿ ರಾಮ್ ಚರಣ್ ದಂಪತಿ, ಅಲ್ಲು ಅರ್ಜುನ್, ಚಿರಂಜೀವಿ ಸೇರಿದಂತೆ ಇಡೀ ಕುಟುಂಬ ಹಾಜರಾಗಿತ್ತು. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದೆ. ಆದರೆ ಯಾವಾಗ ಎನ್ನುವ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಅಕ್ಟೋಬರ್ ಅಥಾ ನವೆಂಬರ್ ನಲ್ಲಿ ಮದುವೆ ಸಮಾರಂಭ ನಡೆಯಲಿದೆ ಎನ್ನಲಾಗಿದೆ. 

ಬಹುಕಾಲದ ಗೆಳತಿ ಲಾವಣ್ಯಾ ಜೊತೆ ನಟ ವರುಣ್ ತೇಜ್ ಎಂಗೇಜ್ಮೆಂಟ್: ನಿಶ್ಚಿತಾರ್ಥದ ಸುಂದರ ಫೋಟೋಗಳು

ಲಾವಣ್ಯ ಹಾಗೂ ವರುಣ್ ತೇಜ್ ಇಬ್ಬರೂ ‘ಮಿನಿಸ್ಟರ್​’, ‘ರಾಯಾಭಾರಿ’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿದ್ದು ಇದೀಗ ಪತಿ-ಪತ್ನಿಯರಾಗುತ್ತಿದ್ದಾರೆ. ಉತ್ತರ ಪ್ರದೇಶದ ಮೂಲದ ನಟಿ ಲಾವಣ್ಯ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಲಾವಣ್ಯ ನಟಿಸಿದ್ದಾರೆ. ಕೊನೆಯದಾಗಿ ಹ್ಯಾಪಿ ಬರ್ತಡೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios