ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗಯನ್ನು ಸಿಬಿಐ ತನಿಖೆ ಮಾಡುವುದರ ಪ್ರಾಮುಖ್ಯತೆ ಬಗ್ಗೆ ಎಂದು ನಟ ಸಹೋದರಿ ಶ್ವೇತಾ ಸಿಂಗ್ ಕೃತಿ ಮಾತನಾಡಿರುವ ಬೆನ್ನಲ್ಲೇ ಇದೀಗ ಅಭಿಯಾನಕ್ಕೆ ಬಾಲಿವುಡ್ ಸೆಲೆಬ್ರಿಟಿ ಬೆಂಬಲ ಸೂಚಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗಯನ್ನು ಸಿಬಿಐ ತನಿಖೆ ಮಾಡುವುದರ ಪ್ರಾಮುಖ್ಯತೆ ಬಗ್ಗೆ ಎಂದು ನಟ ಸಹೋದರಿ ಶ್ವೇತಾ ಸಿಂಗ್ ಕೃತಿ ಮಾತನಾಡಿರುವ ಬೆನ್ನಲ್ಲೇ ಇದೀಗ ಅಭಿಯಾನಕ್ಕೆ ಬಾಲಿವುಡ್ ಸೆಲೆಬ್ರಿಟಿ ಬೆಂಬಲ ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ನಟ ವರುಣ್‌ ಧವನ್, ಅಪರಿಣಿತಿ ಚೋಪ್ರಾ ಸೇರಿಸಿ ಬಾಲಿವುಡ್‌ನ ಹಲವು ನಟ, ನಟಿಯರು ಕ್ಯಾಂಪೇನ್‌ಗೆ ಬೆಂಬಲ ಸೂಚಿಸಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣವನ್ನುಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿರುವವರ ಸಾಲಿಗೆ ವರುಣ್ ಧವನ್, ಪರಿಣಿತಿ ಚೋಪ್ರಾ, ಸೂರಜ್ ಪಾಂಚೋಲಿ ಕೂಡಾ ಸೇರಿದ್ದಾರೆ.

ಸುಶಾಂತ್ ಸಿಂಗ್ ಸಾವು; ವಿಡಿಯೋ ಬಿಡುಗಡೆ ಮಾಡಿದ ಅಂಕಿತಾ ಲೋಕಂಡೆ

ಸುಶಾಂತ್ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಡಿಯೋ ಪೋಸ್ಟ್ ಮಾಡಿದ ಸುಶಾಂತ್ ಸಹೋದರಿ ಶ್ವೇತಾ, ಸಿಬಿಐ ತನಿಖೆ ಬೆಂಬಲಿಸುವಂತೆ ಕೇಳಿಕೊಂಡಿದ್ದರು.

ಹಲೋ, ನಾನು ಸುಶಾಂತ್ ಸಹೋದರಿ ಶ್ವೇತಾ. ಎಲ್ಲರೂ ಸಿಬಿಐ ತನಿಖೆಗೆ ಬೆಂಬಲ ಸೂಚಿಸಬೇಕು. ನಾವು ಸತ್ಯ ತಿಳಿಯಬೇಕಿದೆ. ಸುಶಾಂತ್‌ಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ ನಾವ್ಯಾವತ್ತೂ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ನಮಗೆ ಸತ್ಯ ತಿಳಿಯುವ ಹಕ್ಕಿದೆ ಎಂದಿದ್ದಾರೆ. ಸುಶಾಂತ್‌ನ ಮಾಜಿ ಗೆಳತಿ ಅಂಕಿತಾ ಲೋಖಂಡೆಯೂ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿ ಸಿಬಿಐ ಫಾರ್ ಎಸ್‌ಎಸ್‌ಆರ್‌ ಎಂದಿದ್ದಾರೆ.