ಬ್ಯಾಕ್ ಟು ಬ್ಯಾಕ್ ಸೂಪರ್ಹಿಟ್ ಚಿತ್ರ ಕೊಟ್ಟಿರೋ ವಿಜಯ್ಗೆ ಮುಳುವಾಗ್ತಾರಾ ರಶ್ಮಿಕಾ?
ಒಂದಾದ ಮೇಲೊಂದರಂತೆ 10 ಸೂಪರ್ಹಿಟ್ ಚಲನಚಿತ್ರ ನೀಡಿರುವ ನಟ ದಳಪತಿ ವಿಜಯ್ ಅವರ ಹೊಸ ಚಿತ್ರಕ್ಕೆ ವರಿಸುಗೆ ಅವರ ಚಿತ್ರ ರಶ್ಮಿಕಾ ಮಂದಣ್ಣರಿಂದಾಗಿ ಪೆಟ್ಟು ಬೀಳುತ್ತದೆಯೇ ಎಂಬ ಆತಂಕದಲ್ಲಿದ್ದಾರೆ ಅಭಿಮಾನಿಗಳು...
ಕಾಲಿವುಡ್ನ ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ 'ವರಿಸು' ಇಂದು (ಜನವರಿ 11, 2023) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸದ್ಯ ವಿವಾದದಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದರ ನಾಯಕಿ. 2021ರಲ್ಲಿ ಬಿಡುಗಡೆಯಾದ ಸೂಪರ್ಹಿಟ್ ಚಲನಚಿತ್ರ 'ಬೀಸ್ಟ್' ಬಳಿಕ ವಿಜಯ್ ಅವರು 'ವರಿಸು' (ಉತ್ತರಾಧಿಕಾರಿ) ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಳಪತಿ ವಿಜಯ್ ಅಭಿನಯದ ವರಿಸು ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. 225 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ವಿಜಯ್ ಸುಮಾರು 120 ಕೋಟಿ ರೂ. ಚಾರ್ಜ್ ಮಾಡಿದ್ದಾರೆ. ಈ ಚಿತ್ರದ ನಿರ್ದೇಶಕರು ವಂಶಿ ಪೈಡಿಪಲ್ಲಿ.
ಚಿತ್ರದ ಬಿಡುಗಡೆಯ ನಂತರ ಒಳ್ಳೆಯ ರಿಸ್ಪಾನ್ಸ್ ಏನೋ ಸಿಕ್ಕಿದೆ. ಆದರೆ ಈ ಒಳ್ಳೆಯ ರೆಸ್ಪಾನ್ ಏನಿದ್ದರೂ ವಿಜಯ್ (Dalapathi Vijay) ಅವರ ಅಭಿಮಾನದಿಂದ ಎನ್ನುತ್ತಿದೆ ಚಿತ್ರರಂಗ. ಇದಾಗಲೇ ಹಲವು ವಿವಾದಗಳಿಗೆ ಸಿಲುಕಿ ಬೈಕಾಟ್ ಬಿಸಿಯನ್ನೂ ಅನುಭವಿಸುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಈ ಚಿತ್ರದಲ್ಲಿ ಸಿಕ್ಕಿರುವುದು ಕೇವಲ ಎರಡು ಸ್ಟಾರ್ಗಳು. ಈ ಚಿತ್ರ ಬಿಡುಗಡೆಗೆ ಮುನ್ನವೇ ಚಿತ್ರತಂಡಕ್ಕೆ ರಶ್ಮಿಕಾ ಅವರಿಂದಾಗಿ ಭಯವೂ ಶುರುವಾಗಿತ್ತು. ಇನ್ನೊಂದೆಡೆ ತಮಿಳಿಗರು ಕೂಡ ರಶ್ಮಿಕಾ ಅವರನ್ನು ಅಕ್ಸೆಪ್ಟ್ ಮಾಡಿಕೊಳ್ಳುತ್ತಿಲ್ಲ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಈ ಚಿತ್ರ ಏನಾದರೂ ಯಶಸ್ಸು ಆಗುವುದಾದರೆ ಅದು ವಿಜಯ್ ಅವರಿಂದ ಮಾತ್ರ ಎಂಬ ಚರ್ಚೆ ಜಾಲತಾಣದಲ್ಲಿ (Social Media) ಶುರುವಾಗಿದೆ.
ವಿಜಯ್ ದಳಪತಿ- ಸಂಗೀತಾ ದಾಂಪತ್ಯ ಕಲಹಕ್ಕೆ ಕಾರಣವಾದ್ರಾ ರಶ್ಮಿಕಾ ಮಂದಣ್ಣ?
ಅದೇ ಸಮಯದಲ್ಲಿ, ವಿಜಯ್ ಅವರ ಬಗೆಗೆ ಕುತೂಹಲವಾದ ಮಾಹಿತಿಯೊಂದನ್ನು ಇಲ್ಲಿ ಹಂಚಿಕೊಳ್ಳಲೇಬೇಕು. ಅದೇನೆಂದರೆ, ಕಳೆದ 10 ವರ್ಷಗಳ ಅವರ ಚಲನಚಿತ್ರ ದಾಖಲೆಯನ್ನು ನಾವು ನೋಡಿದರೆ, ಅವರು 11 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಪೈಕಿ ಒಂದು ಪುಲಿ ಎನ್ನುವ ಚಿತ್ರ ಫ್ಲಾಪ್ (Flop Film) ಆಗಿದ್ದು ಬಿಟ್ಟರೆ ಅವರಿಗೆ 10 ವರ್ಷಗಳು ದಿ ಬೆಸ್ಟ್ ಇಯರ್ ಎನಿಸಿಕೊಂಡಿವೆ. ಉಳಿದ 10 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಟ್ಟಾರೆಯಾಗಿ ಸುಮಾರು 2500 ಕೋಟಿ ವ್ಯವಹಾರವನ್ನು ಮಾಡಿದೆ.
ಹಾಗಿದ್ದರೆ ವಿಜಯ್ ಅವರಿಗೆ ಭರ್ಜರಿ ಗೆಲುವು ತಂದುಕೊಟ್ಟ ಸಿನಿಮಾದತ್ತ ಒಂದು ದೃಷ್ಟಿ ಬೀರೋಣ
ಚಲನಚಿತ್ರಗಳು:
ತಲೈವಾ (Talaiva) ಮತ್ತು ಜಿಲಾ
2013 ರ ತಲೈವಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. 60 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 83 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ಎಎಲ್ ವಿಜಯ್ ನಿರ್ದೇಶಿಸಿದ್ದಾರೆ. 2014 ರ ಚಿತ್ರ ಜಿಲಾ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. 50 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 85 ಕೋಟಿ ರೂ. ಗಳಿಸಿದೆ. ಈ ಚಿತ್ರವನ್ನು ಆರ್ ಟಿ ನೀಸನ್ ನಿರ್ದೇಶಿಸಿದ್ದಾರೆ.
ಕತ್ತಿ ಮತ್ತು ತೇರಿ
2014ರಲ್ಲಿಯೇ ತೆರೆ ಕಡ ಮತ್ತೊಂದು ಚಿತ್ರ ಕತ್ತಿ. ಇದು ಕೂಡ ಬ್ಲಾಕ್ ಬಸ್ಟರ್ ಎಂದು ಸಾಬೀತಾಯಿತು. 70 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಚಿತ್ರ 130 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶಿಸಿದ್ದರು. ಅದರಂತೆ 2016ರಲ್ಲಿ ತೆರೆಕಂಡ ಥೇರಿ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಸಾಧನೆ ಮಾಡಿತ್ತು. 75 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 150 ಕೋಟಿ ರೂ. ಕಲೆಕ್ಷನ್ (Collection) ಮಾಡಿದೆ. ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದಾರೆ.
Mission majnu; ಮತ್ತೆ ಪಾಕಿಸ್ತಾನಿ ಯುವತಿ ಪಾತ್ರದಲ್ಲಿ ರಶ್ಮಿಕಾ; ಸಿದ್ದಾರ್ಥ್ ಜೊತೆ ಸಖತ್ ರೊಮ್ಯಾನ್ಸ್
ಭೈರವ ಮತ್ತು ಮಾರ್ಷಲ್
2017 ರಲ್ಲಿ, ವಿಜಯ್ ಅವರ ಎರಡು ಚಿತ್ರಗಳು ಭೈರವ ಮತ್ತು ಮಾರ್ಷಲ್ ಬಿಡುಗಡೆಯಾದವು. ಭರತನ ಚಿತ್ರ ಭೈರವ ಬಾಕ್ಸ್ ಆಫೀಸ್ (Box Office) ನಲ್ಲಿ 140 ಕೋಟಿ ಬ್ಯುಸಿನೆಸ್ ಮಾಡಿದ್ದರೆ, 120 ಕೋಟಿ ಬಜೆಟ್ ನಲ್ಲಿ ತಯಾರಾದ ಅಟ್ಲಿ ಚಿತ್ರ ಮಾರ್ಷಲ್ ಭರ್ಜರಿ ಅಬ್ಬರ ಮಾಡಿತು. ಚಿತ್ರ 260 ಕೋಟಿ ಬ್ಯುಸಿನೆಸ್ ಮಾಡಿದೆ.
ಸರ್ಕಾರ್ ಮತ್ತು ಬಿಗಿಲ್
2018 ರಲ್ಲಿ ಬಂದ ಎಆರ್ ಮುರುಗದಾಸ್ ಅವರ ಸರ್ಕಾರ್ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತಗಳನ್ನು ಮಾಡಿತು. 110 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 253 ಕೋಟಿ ಬ್ಯುಸಿನೆಸ್ ಮಾಡಿದೆ. 2019 ರ ಚಿತ್ರ ಬಿಗಿಲ್ ಅನ್ನು ಅಟ್ಲಿ ನಿರ್ದೇಶಿಸಿದ್ದಾರೆ. 180 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 300 ಕೋಟಿ ಬ್ಯುಸಿನೆಸ್ ಮಾಡಿದೆ.
ಮಾಸ್ಟರ್ ಮತ್ತು ಮೃಗ
2020 ರಲ್ಲಿ ಲಾಕ್‌ಡೌನ್‌ನಿಂದಾಗಿ ಯಾವುದೇ ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ 2021 ರಲ್ಲಿ ಬಂದ ಅವರ ಚಿತ್ರ ಮಾಸ್ಟರ್ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯಿತು. ಲೋಕೇಶ್ ಕನಕರಾಜ್ 135 ಕೋಟಿಯಲ್ಲಿ ನಿರ್ಮಿಸಿದ ಈ ಸಿನಿಮಾ 300 ಕೋಟಿ ವ್ಯವಹಾರ ಮಾಡಿದೆ. 2022 ರಲ್ಲಿ, ವಿಜಯ್ ಅವರ ಚಿತ್ರ ಮೃಗ ಬಿಡುಗಡೆಯಾಯಿತು. ನಿರ್ದೇಶಕ ನೆಲ್ಸನ್ ಅವರ ಈ ಚಿತ್ರವೂ ಸಾಕಷ್ಟು ಬಜ್ ಕ್ರಿಯೇಟ್ ಮಾಡಿದೆ. 150 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 250 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿದೆ.
ಇವಿಷ್ಟು ಆದ ಮೇಲೆ ಫ್ಲಾಪ್ ಆದ ಚಿತ್ರವೆಂದರೆ ಅದು ಪುಲಿ. 2015ರಲ್ಲಿ ತೆರೆಕಂಡ ಪುಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣಲಿಲ್ಲ. 130 ಕೋಟಿ ಬಜೆಟ್‌ನಲ್ಲಿ ಈ ಚಿತ್ರ ಗಳಿಸಿದ್ದು 101 ಕೋಟಿ ಮಾತ್ರ. ಚಿತ್ರವನ್ನು ಚಿಂಬು ದೇವೆನ್ ನಿರ್ದೇಶಿಸಿದ್ದಾರೆ.
ಇಷ್ಟೆಲ್ಲಾ ಹಿಟ್ ಸಿನಿಮಾ ನೀಡಿರುವ ವಿಜಯ್ ಅವರಿಗೆ ರಶ್ಮಿಕಾ (Rashmika Mandanna) ಮುಳುವಾಗುತ್ತಾರಾ? ಜನರು 'ವರಿಸು' ಅನ್ನು ಪ್ರೀತಿಸುತ್ತಾರಾ ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.