ಬಹುಭಾಷಾ ನಟ ಶರತ್‌ಕುಮಾರ್ ಹಾಗೂ ರಾಧಿಕಾ ಪುತ್ರಿ ವರಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್. ಏನೇ ಇರಲಿ ತಮ್ಮ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಕಷ್ಟದಲ್ಲಿದ್ದವರನ್ನು ಸಂಪರ್ಕಿಸಿ, ಸಹಾಯ ಮಾಡುತ್ತಾರೆ. ಪ್ರಾಣಿ ಪಕ್ಷಿಗಳನ್ನು ತುಂಬಾನೇ ಪ್ರೀತಿಸುತ್ತಾರೆ. ಏನಾದರೂ ಪೋಸ್ಟ್‌ ಮಾಡುತ್ತಾ ಖಾತೆಯನ್ನು ಎಂಗೇಜ್‌ ಆಗಿಟ್ಟಿದ್ದ ನಟಿ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. 

ಹ್ಯಾಕರ್‌ ಶ್ರೀಕಿ ವಿರುದ್ಧ ಮತ್ತಷ್ಟು ಕೇಸ್‌ 

ಡಿಸೆಂಬರ್ 2ರಂದು ವರಲಕ್ಷ್ಮಿ ಖಾತೆ ಹ್ಯಾಕ್ ಮಾಡಲಾಗಿತ್ತು. ಕೆಲವು ಅಶ್ಲೀಲ ಫೋಟೋ ಹಾಗೂ ಸಂದೇಶಗಳನ್ನು ಅಪರಿಚಿತ ಖಾತೆಗಳಿಗೆ ಮೆಸೇಜ್‌ ರೀತಿಯಲ್ಲಿ ಶೇರ್ ಮಾಡಲಾಗಿದೆ. ಇನ್‌ಸ್ಟಾಗ್ರಾಂ ತಂತ್ರಜ್ಞರ ತಂಡದ ಜೊತೆ ಸಂಪರ್ಕದಲ್ಲಿರುವ ವರು ಸದ್ಯಕ್ಕೆ ಖಾತೆ ಡೀ-ಆ್ಯಕ್ಟಿವೇಟ್ ಮಾಡಿಸಿದ್ದಾರೆ.  

'ಮಧ್ಯರಾತ್ರಿ ನನ್ನ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಲಾಗ್‌ಇನ್‌ ಆಗಲು ಸಾಕಷ್ಟು ಪ್ರಯತ್ನಿಸಿರುವೆ. ಆದರೆ ಸಾಧ್ಯವಾಗಲಿಲ್ಲ. ಇನ್‌ಸ್ಟಾಗ್ರಾಂ ತಂಡದ ಜೊತೆ ಸಂಪರ್ಕದಲ್ಲಿರುವೆ. ವೆರಿಫೈಡ್ ಖಾತೆಯಾಗಿರುವುದರಿಂದ ಯಾವುದೇ ದೊಡ್ಡ ತೊಂದರೆ ಆಗುವುದಿಲ್ಲ, ಎಂದಿದ್ದಾರೆ,' ಎಂದು ವರಲಕ್ಷ್ಮಿ ಹೇಳಿದ್ದಾರೆ. 

ದರ್ಶನ್ ಪತ್ನಿ ವಿಜಯಲಕ್ಷ್ಮಿ ಖಾತೆ ಹ್ಯಾಕ್; ಅಭಿಮಾನಿಗಳು ಏನು ಹೇಳಿದ್ರು ಗೊತ್ತಾ? 

ವರಲಕ್ಷ್ಮಿ ಖಾತೆ ಹ್ಯಾಕ್ ಆಗಿರುವ ವಿಚಾರ ತಿಳಿಯದ ಕೆಲವರು ಅಶ್ಲೀ ಮೆಸೇಜ್‌ ನೋಡಿ ಬೈಯಿಗೆ ಬಂದ ಹಾಗೆ ಬೈದಿದ್ದಾರೆ. 'ಏನು ಮೇಡಂ ನಿಮ್ಮ ತಂದೆ ಇಷ್ಟೊಂದು ಒಳ್ಳೆಯವರು. ನೀವು ಹೀಗೆಲ್ಲಾ ನಮಗೆ ಕಳುಹಿಸಬಹುದಾ?' ಎಂದೂ ಪ್ರಶ್ನಿಸಿದ್ದರು.

ಕಳೆದ ತಿಂಗಳು ನಟಿ ದೀಪಿಕಾ ಕಾಮಯ್ಯ ಖಾತೆ ಹ್ಯಾಕ್ ಮಾಡಲಾಗಿದ್ದು, ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. 4-5 ದಿನಗಳ ನಂತರ ಸುರಕ್ಷಿತವಾಗಿ ಖಾತೆಯನ್ನು ಹಿಂಪಡೆದರು.