ಬೆಂಗಳೂರು(ಡಿ.03): ಸಿಸಿಬಿ ಬಲೆಗೆ ಬಿದ್ದಿರುವ ಕುಖ್ಯಾತ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಮತ್ತಷ್ಟುಸಂಕಷ್ಟಎದುರಾಗಿದ್ದು, ಆತನ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ಹೊಸದಾಗಿ ಎಫ್‌ಐಆರ್‌ಗಳು ದಾಖಲಾಗಿವೆ.

ಬಿಟ್‌ ಕಾಯಿನ್‌, ಪೋಕರ್‌ ಹಾಗೂ ಆನ್‌ಲೈನ್‌ ಗೇಮ್ಸ್‌ಗಳಿಗೆ ಸಂಬಂಧಿಸಿದ ದೇಶ-ವಿದೇಶದ ಸುಮಾರು 30ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿರುವುದಾಗಿ ಸಿಸಿಬಿ ವಿಚಾರಣೆ ವೇಳೆ ಕುಖ್ಯಾತ ಹ್ಯಾಕ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಬಾಯ್ಬಿಟ್ಟಿದ್ದ. ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ಅವರು ಶ್ರೀಕಿ ವಿರುದ್ಧ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಡ್ರಗ್ಸ್‌ ದಂಧೆಕೋರ ಕುಖ್ಯಾತ ಹ್ಯಾಕರ್ ಬಂಧನ..!

ಶ್ರೀಕಿ ಹ್ಯಾಕ್‌ ಮಾಡಿರುವ ವೆಬ್‌ಸೈಟ್‌ಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈಗ ವಿಚಾರಣೆ ಲಭ್ಯವಾಗಿರುವ ಮಾಹಿತಿ ಆಧರಿಸಿ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ಆತನ ವಿರುದ್ಧ ತನಿಖೆ ಮಂದುವರೆಸಲಾಗಿದೆ. ಆರೋಪಿಯನ್ನು 13 ದಿನಗಳು ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ನೀಡಿದೆ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.