ಇನ್ನೂ 3ನೇ ಸಂಸಾರ ಸರಿ ಆಗಿಲ್ಲ ಎನ್ನುತ್ತಲೇ ನಾಲ್ಕನೇ ಮದುವೆ ಬೇಕಾ? ವೈರಲ್ ಆದ ಫೋಟೋದಿಂದ ಟೀಕೆಗೆ ಒಳಗಾದ ನಟಿ ವನಿತಾ ವಿಜಯ್‌ಕುಮಾರ್. 

ಸದಾ ವಿವಾದಗಳಿಂದಲೇ ಸುದ್ದಿ ಆಗುತ್ತಿರುವ, ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‌ಕುಮಾರ್ ಇತ್ತೀಚಿಗೆ ಶೇರ್ ಮಾಡಿಕೊಂಡ ಫೋಟೋ ದೊಡ್ಡ ವಿವಾದ ಸೃಷ್ಟಿ ಮಾಡಿದೆ. ಮೂರು ಮದುವೆ ಆಗಿ, ಮೂರು ಮಕ್ಕಳನ್ನು ಹೊಂದಿರುವ ವನಿತಾ ನಾಲ್ಕನೇ ಮದುವೆ ಬಗ್ಗೆ ಇಲ್ಲಿದೆ ಮಾಹಿತಿ...

Add Asianetnews Kannada as a Preferred SourcegooglePreferred

ವೈಯಕ್ತಿಕ ಜೀವನದ ಬಗ್ಗೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಸಾರ್ವಜನಿಕವಾಗಿ ಬೈಗುಳಕ್ಕೆ ಒಳಗಾಗಿರುವ ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‌ಕುಮಾರ್, ಬೇರೆ ಯಾರೂ ಅಲ್ಲ ಹಿರಿಯ ನಟ ವಿಜಯ್ ಹಾಗೂ ನಟಿ ಮಂಜುಳಾ ಪುತ್ರಿ. ಕೆಲವು ದಿನಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದ ವನಿತಾ ಅವರನ್ನು ನಟಿ ರಮ್ಯಾ ಕಷ್ಣ ಬೇರೆ ಸ್ಪರ್ಧಿಗಳ ಜೊತೆ ಹೋಲಿಸಿದ್ದಾರೆ. ನನ್ನನ್ನು ನಿಂದಿಸಿದ್ದಾರೆ, ಬೈಯ್ದಿದ್ದಾರೆ, ದೌರ್ಜನ್ಯವೆಸಗಿದ್ದಾರೆ, ಎಂದು ಶೋನಿಂದ ವನಿತಾ ಹೊರ ಬಂದರು. 

ನಾಲ್ಕನೇ ಮದುವೆಗೂ ರೆಡಿಯಾದ ಬಿಗ್ ಬಾಸ್ ಸ್ಪರ್ಧಿ ವನಿತಾ!

ಶೋನಿಂದ ಹೊರ ನಡೆದ ಕೆಲವೇ ದಿನಗಳಲ್ಲಿ ತಮಿಳು ಪವರ್ ಸ್ಟಾರ್ ಶ್ರೀನಿವಾಸನ್‌ ಜೊತೆ ಮದುವೆ ಆಗುತ್ತಿರುವ ಫೋಟೋ ಹಂಚಿ ಕೊಂಡಿದ್ದಾರೆ. ಈ ಫೋಟೋ ನೋಡಿ ಶಾಕ್ ಆದ ಫ್ಯಾನ್ಸ್ ಕಾಮೆಂಟ್‌ನಲ್ಲಿ ನಾಲ್ಕನೇ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ ಕೆಲವು ಸಮಯದ ನಂತರ ಇದು ರಿಯಲ್ ಲೈಫ್ ಅಲ್ಲ, ರೀಲ್ ಲೈಫ್ ಎಂದು ವನಿತಾ ಸ್ಪಷ್ಟನೆ ನೀಡಿದ್ದಾರೆ. ವನಿತಾ ಅಭಿನಯಿಸುತ್ತಿರುವ ಮುಂದಿನ ಚಿತ್ರದ ಫೋಟೋ ಇದು ಎನ್ನಲಾಗಿದೆ. 

ಕಳೆದ ವರ್ಷ ಪೀಟರ್‌ ಪೌಲ್‌ ಎನ್ನುವವರ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮೂರನೇ ಮದುವೆ ಆದ ವನಿತಾ, ಅವರಿಂದಲೂ ದೂರವಾಗಿದ್ದಾರೆ. ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಕಾರಣ ನೀಡಿದ್ದಾರೆ. ಹೀಗಾಗಿ ಈ ಫೋಟೋ ವನಿತಾ ನಾಲ್ಕನೇ ಮದುವೆ ಎಂದು ಗಾಸಿಪ್ ಹುಟ್ಟು ಹಾಕುವಂತೆ ಮಾಡಿತ್ತು.

Scroll to load tweet…