Asianet Suvarna News Asianet Suvarna News

ನಟಿ ಊರ್ವಶಿಯ 8 ಲಕ್ಷದ ಫೋನ್​ ಹುಡುಕಿಕೊಟ್ಟರೆ ನಿಮಗೆ ಸಿಗಲಿದೆ ಭರ್ಜರಿ ಬಹುಮಾನ!

ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ವೀಕ್ಷಿಸಲು ಹೋದ ನಟಿ ಊರ್ವಶಿ ರೌಟೇಲಾ ಅವರ ಚಿನ್ನದ ಐಫೋನ್​ ಕಳೆದುಹೋಗಿದ್ದು, ಹುಡುಕಿ ಕೊಟ್ಟವರಿಗೆ ಭರ್ಜರಿ ಗಿಫ್ಟ್​ ಘೋಷಿಸಿದ್ದಾರೆ. 
 

Urvashi Rautela lost her gold iPhone has announced  gift for those who find it suc
Author
First Published Oct 18, 2023, 5:42 PM IST

ಇದೇ 14ರಂದು ಗುಜರಾತ್​ನ ಅಹಮದಾಬಾದ್​ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್​ ಪಂದ್ಯಾವಳಿ ವೇಳೆ, ಕ್ರೀಡೆ ನೋಡಲು ತೆರಳಿದ್ದ ಬಾಲಿವುಡ್​ ಖ್ಯಾತ ನಟಿ ಊರ್ವಶಿ ರೌಟೇಲಾ (Uravashi Rautela)  ಅವರು ತಮ್ಮ ಚಿನ್ನದ ಐಫೋನ್ ಅನ್ನು ಕಳೆದುಕೊಂಡಿದ್ದಾರೆ! ಸುಂದರವಾದ ನೀಲಿ ಬಣ್ಣದ ಡ್ರೆಸ್​​ ಧರಿಸಿ ಭಾರತ ಕ್ರಿಕೆಟ್​ ತಂಡವನ್ನು ಬೆಂಬಲಿಸಲು ಬಂದಿದ್ದ ಊರ್ವಶಿ ರೌಟೇಲಾ ಬಂದಿದ್ದ ಊರ್ವಶಿಯವರು ಭಾರತ ಗೆದ್ದ ಖುಷಿಯಲ್ಲಿ ಇರುವಾಗಲೇ ಫೋನ್​ ಕಳೆದುಕೊಂಡಿದ್ದಾರೆ. ಈ ಕುರಿತು ಅಂದೇ ಅವರು ತಮ್ಮ  ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನನ್ನ 24 ಕ್ಯಾರೆಟ್ ಚಿನ್ನದ ಐಫೋನ್ ಅನ್ನು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಮ್ಯಾಚ್ ನಡೆಯುವಾಗ ಕಳೆದುಕೊಂಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಯಾರಿಗಾದರೂ ಮೊಬೈಲ್ ಸಿಕ್ಕರೆ ಮರಳಿಸಿ, ಅಥವಾ ನನ್ನನ್ನು ಸಂಪರ್ಕಿಸಿ ಎಂದು ಊರ್ವಶಿ  ಬರೆದುಕೊಂಡಿದ್ದಾರೆ. ತಮ್ಮ ಈ ಪೋಸ್ಟ್ ಅನ್ನು ಅಹಮದಾಬಾದ್ ಪೊಲೀಸರಿಗೆ ಹಾಗೂ ನರೇಂದ್ರ ಮೋದಿ ಸ್ಟೇಡಿಯಂನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿದ್ದರು. 

ಅಷ್ಟಕ್ಕೂ ಈ ಮೊಬೈಲ್​ ರೇಟ್​ ಎಷ್ಟು ಎಂದು ಗೊತ್ತಾ? 7 ಲಕ್ಷದ 55 ಸಾವಿರದ 430ರೂಪಾಯಿಯಂತೆ! ಊರ್ವಶಿ ರೌಟೇಲಾ ಸುಳ್ಳು ಹೇಳುತ್ತಿದ್ದಾರೆ. ಇದೊಂದು ಪ್ರಚಾರ ಪಡೆಯುವ ತಂತ್ರ ಎಂದು ಕೆಲವರು ಆರೋಪ ಮಾಡಿದ್ದರು. ಚಿನ್ನದ ಫೋನು ಸಿಕ್ಕವರು ಯಾರಾದರೂ ವಾಪಸ್ ಕೊಡುತ್ತಾರೆಯೇ ಎಂದು ನಟಿಗೆ ಪ್ರಶ್ನೆ ಮಾಡುತ್ತಲೇ ಇದ್ದಾರೆ.  ಇನ್ನು ಕೆಲವರು ಚಿನ್ನದ ಫೋನು ಸಿಕ್ಕಿದವನು ಅದೃಷ್ಟ ಮಾಡಿದ್ದಾನೆ ಎಂತಲೂ, ಚಿನ್ನದ ಫೋನು ಸಿಕ್ಕವರು ಯಾರಾದರೂ ವಾಪಸ್ ಕೊಡುತ್ತಾರೆಯೇ ಎಂದು ಕುಹುಕವಾಡಿದ್ದಾರೆ.

ನಾನು ಮಾಡಿದ್ದು ಸೆಕ್ಸ್​ ಸೀನೆಂದು ಪ್ಲೀಸ್​ ನೋಯಿಸಬೇಡಿ, ಅದು ರೇಪ್​ ಸೀನ್ ಅಷ್ಟೇ​: ನಟಿ ಮೆಹ್ರೀನ್​

ಇಷ್ಟು ದಿನವಾದರೂ ಫೋನ್​ ಸಿಗದೇ ಇರುವುದನ್ನು ನೊಂದುಕೊಂಡಿರುವ ಊರ್ವಶಿ, ಇದೀಗ ಫೋನ್​ ನಿಜವಾಗಿಯೂ ಕಳೆದು ಹೋಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಪೊಲೀಸ್​ ಠಾಣೆಗೆ ಕೊಟ್ಟಿರುವ ದೂರಿನ ಪ್ರತಿಯನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆಗೆ, ಇದೀಗ ನಟಿ ತಮ್ಮ ಫೋನ್​ ಹುಡುಕಿ ಕೊಟ್ಟವರಿಗೆ ಭರ್ಜರಿ ಬಹುಮಾನವನ್ನೂ ಘೋಷಿಸಿದ್ದಾರೆ. ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿಲ್ಲ. ಮೊಬೈಲ್‍ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದಾರೆ.

ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿಲ್ಲ. ಮೊಬೈಲ್‍ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದಾರೆ.

 ಊರ್ವಶಿ ರೌಟೇಲಾ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿರೋ ನಟಿ. ಕ್ರಿಕೆಟಿಗ  ರಿಷಬ್ ಪಂತ್  (Rishab Pant) ಅವರನ್ನು ಬಿಟ್ಟೂಬಿಡದೆ ಕಾಡುತ್ತಿದ್ದ ಈ ನಟಿಯ ಬಗ್ಗೆ ರಿಷಬ್ ಪಂತ್​ ಅಭಿಮಾನಿಗಳು ಹರಿಹಾಯ್ದಿದ್ದರು. ರಿಷಬ್​ ಮತ್ತು ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಗಿದೆ. ಆದರೂ ರಿಷಬ್​ ಅವರನ್ನು ಊರ್ವಶಿ   ಬಿಡದೇ ಕಾಡುತ್ತಿದ್ದರು.  ರಿಷಬ್ ಪಂತ್ ಅವರು ನನಗೆ ತುಂಬ ಸಲ ಫೋನ್ ಮಾಡಿದ್ದರು ಎಂದು ಊರ್ವಶಿ ಹೇಳಿಕೆ ನೀಡಿದ್ದರು. ಆಗ ರಿಷಬ್ ಅವರು, 'ಅಕ್ಕಾ ನನ್ನ ಬಿಟ್ಟು ಬಿಡು' ಎಂದಿದ್ದರು. ಹೀಗೆ ಈಕೆ ಅವರನ್ನು ಕಾಡಿದ್ದು  ಎಲ್ಲಿಯವರೆಗೆ ಎಂದರೆ ಭೀಕರ ಅಪಘಾತದಲ್ಲಿ ರಿಷಬ್​ ಪಂತ್​ ಆಸ್ಪತ್ರೆಗೆ ದಾಖಲಾಗಿದ್ದರೂ  ಊರ್ವಶಿ ರೌಟೇಲಾ ಅವರ ಹಿಂದೆ ಬಿದ್ದಿದ್ದರು ಎಂದು ಸುದ್ದಿಯಾಗಿತ್ತು. ರಿಷಬ್‌ ಅವರಿಗೆ ಅಪಘಾತವಾಗಿದೆ ಎಂದು ತಿಳಿದಾಗ ಊರ್ವಶಿ  'ಪ್ರಾರ್ಥನೆ' (Prayer) ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದು ರಿಷಬ್‌ಗಾಗಿ ಹೇಳಿದ ಮಾತು ಎನ್ನಲಾಗಿತ್ತು. ಇದರಿಂದ ಆಕೆಯನ್ನು ರಿಷಬ್​ ಅಭಿಮಾನಿಗಳು ಛೀಮಾರಿ ಹಾಕಿದ್ದರು.

60 ಅಡಿ ಎತ್ತರದ ಪ್ರಿಯಾಂಕಾ- ಸ್ಯಾಂಡಲ್​ವುಡ್​​ನಲ್ಲೇ ಡಬಲ್​ ಇತಿಹಾಸ ಸೃಷ್ಟಿಸಿದ 'ಕ್ಯಾಪ್ಚರ್'​!
 

Follow Us:
Download App:
  • android
  • ios