ಹಚ್ಚೆ ಹಾಕಿಸ್ಕೊಂಡು ಹಲವು ಬಾರಿ ಮೋಸ ಮಾಡ್ದ: ಗೋಳು ತೋಡಿಕೊಂಡ Urfi Javed

ಡ್ರೆಸ್ಸಿಂಗ್ ಸೆನ್ಸ್​ನಿಂದ ಸುದ್ದಿಯಾಗುತ್ತಿರುವ ನಟಿ ಉರ್ಫಿ ಜಾವೇದ್​, ಈಗ ಮಾಜಿ ಸ್ನೇಹಿತನ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

Urfi Javed rants about ex boyfriend cheating on her with several girls

ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇತ್ತೀಚೆಗೆ ಈಕೆಯ ಡ್ರೆಸ್​ಗಾಗಿಯೇ ಮುಂಬೈನ ರೆಸ್ಟೋರೆಂಟ್​ನಲ್ಲಿ ಎಂಟ್ರಿ ಸಿಕ್ಕಿರಲಿಲ್ಲ.  ಈ ಕುರಿತು, ಉರ್ಫಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Post) ಹಾಕುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ನಾವು ನಿಜವಾಗಿಯೂ 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಿದ್ದರು. 

ಇದೀಗ ತಮ್ಮ ಬಾಯ್​ಫ್ರೆಂಡ್​ ಬಗ್ಗೆ ನೋವಿನ ದಿನಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಮಾಜಿ ಬಾಯ್​ಫ್ರೆಂಡ್​ ಹೇಗೆ ತಮ್ಮನ್ನು ಮೋಸಗೊಳಿಸಿದ ಎನ್ನುವ ಬಗ್ಗೆ ಈಕೆ ಹೇಳಿದ್ದಾರೆ. ಒಂದಲ್ಲ, ಎರಡಲ್ಲ ಹಲವಾರು ಬಾರಿ ಹೇಗೆ ಮೋಸ ಮಾಡಿದ ಎನ್ನುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ. ಹಚ್ಚೆ (Tatoo) ಹಾಕಿಸಿಕೊಂಡು ಹೇಗೆ ಮರುಳು ಮಾಡಿದ್ದ ಎನ್ನುವ ಬಗ್ಗೆಯೂ ಈಕೆ ನೋವು ತೋಡಿಕೊಂಡಿದ್ದಾರೆ. ತಮ್ಮ ಮಾಜಿ ಬಾಯ್​ಫ್ರೆಂಡ್​ ಕಾರಣದಿಂದಾಗಿ ಅವರು ಇದೀಗ ಯಾರ ಜೊತೆಯೂ ಗಂಭೀರ ಸಂಬಂಧವನ್ನು ಹೊಂದಲು ಬಯಸುವುದಿಲ್ಲ ಎಂದಿದ್ದಾರೆ. ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಬಾಯ್​ಫ್ರೆಂಡ್​ ಮಾಡಿರುವ ಮೋಸದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತನನ್ನು ಮಾತ್ರವಲ್ಲದೇ ಹಲವರನ್ನೂ ಈತ ಹೇಗೆ ವಂಚಿಸಿದ್ದ ಎಂದು ಅವರು ಹೇಳಿದ್ದಾರೆ. 

ನಿಜವಾಗ್ಲೂ ಇದು 21ನೇ ಶತಮಾನನಾ ಎಂದು ಕೆಂಡಾಮಂಡಲವಾದ Urfi Javed!

ನನ್ನ ಜನ್ಮದ ದಿನಾಂಕವನ್ನು (Date of Birth) ಆತ ಹಚ್ಚೆ ಹಾಕಿಸಿಕೊಂಡಿದ್ದ. ಅದನ್ನು ನೋಡಿ ಆತ ನನ್ನನ್ನು ತುಂಬಾ ಪ್ರೀತಿಸುತ್ತಾನೆ ಎಂದುಕೊಂಡಿದ್ದೆ. ಬಣ್ಣದ ಮಾತುಗಳಿಂದ ನನ್ನನ್ನು ಮರುಳು ಮಾಡಿದ. ಆದರೆ ಆತ ಹಾಕಿಸಿಕೊಂಡಿದ್ದು ನನ್ನ ಜನ್ಮ ದಿನಾಂಕ ಆಗಿರಲಿಲ್ಲ, ಬದಲಿಗೆ ಅದೇ ದಿನದಂತೆ ಆತನ ತಂದೆಯೂ ಹುಟ್ಟಿದ ದಿನ. ಬಹುಶಃ ಅವರ ಟ್ಯಾಟೂ ಅದಾಗಿತ್ತು. ಅದರೆ ನಾನು ನನ್ನ ಬರ್ತ್​ಡೇ ಎಂದು ಮೋಸ ಹೋದೆ ಎಂದಿದ್ದಾರೆ ಉರ್ಫಿ. ಆದರೆ ಅದನ್ನೇ ತೋರಿಸಿ ತೋರಿಸಿ ನನ್ನನ್ನು ಮೋಸ ಮಾಡುತ್ತಿದ್ದ, ನಾನು ಅದನ್ನು ನಂಬಿ ಮೋಸ ಹೋದೆ ಎಂದಿದ್ದಾರೆ. ಆಮೇಲೆ ಹಲವು ಹುಡುಗಿಯರಿಗೂ ಆತ ಮೋಸ ಮಾಡಿದ್ದ ಎನ್ನುವುದು ತಿಳಿಯಿತು ಎಂದಿದ್ದಾರೆ. 

 
ಅಷ್ಟಕ್ಕೂ ಉರ್ಫಿಯ ಬಾಯ್​ಫ್ರೆಂಡ್​ ಆಗಿದ್ದವರ ಹೆಸರು ಪರಸ್ ಕಲ್ನಾವತ್ (Paras Kalnavath). ಹಿಂದಿಯ ಅನುಪಮಾ ಎನ್ನುವ ಧಾರಾವಾಹಿಯ ನಟ ಇವರು. ಅಮ್ಮನ ಮುದ್ದಿನ ಮಗನಾಗಿ, ತಾಯಿಯನ್ನು ಬಹಳ ಇಷ್ಟಪಡುವ ಅಮರ್ ಪಾತ್ರವನ್ನು ಇವರು ಮಾಡಿದ್ದರು. ಆದರೆ ಕೆಲ ಕಂತುಗಳ ಬಳಿಕ ಇವರನ್ನು  ಅನುಪಮಾ ಧಾರಾವಾಹಿಯಿಂದ ಹೊರಕ್ಕೆ ಹಾಕಲಾಗಿತ್ತು. ಆಗ ಅವರು ಬಹಳ ಸುದ್ದಿಯಲ್ಲಿದ್ದರು. ಅಷ್ಟಕ್ಕೂ ಇವರನ್ನು ಹೊರಕ್ಕೆ ಹಾಕಿದ್ದ ಕಾರಣವೇನೆಂದರೆ,  ಧಾರಾವಾಹಿ  ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಎನ್ನಲಾಗಿತ್ತು.  

Urfi Javed: ರಣಬೀರ್​ ಕಪೂರ್​ ನರಕಕ್ಕೆ ಹೋಗಲಿ ಎಂದು ಉರ್ಫಿ ಹೇಳಿದ್ದೇಕೆ?

ಈ ಬಗ್ಗೆ ಮಾತನಾಡುವ ಸಮಯದಲ್ಲಿ ಉರ್ಫಿ ಜಾವೇದ್​ ತಮ್ಮ ಎಕ್ಸ್​ ಗರ್ಲ್​ಫ್ರೆಂಡ್​​ ಎಂದೂ ಪಾರಸ್​ ಹೇಳಿದ್ದರು. ಉರ್ಫಿಯ ಈ ಹೇಳಿಕೆಯ ಬಗ್ಗೆ ಮಾತನಾಡಿದ್ದ ಅವರು, 'ಸೇಡು ತೀರಿಸಿಕೊಳ್ಳಲು ನನ್ನಲ್ಲಿ ಕೆಲವು ರೀತಿಯ ಆಕ್ರಮಣಶೀಲತೆ ಇರಬೇಕು. ನಾನು ಯಾರ ಬಗ್ಗೆಯೂ ಯಾವುದೇ ಕೆಟ್ಟ ಭಾವನೆಗಳನ್ನು ಹೊಂದಿಲ್ಲ. ನನಗೆ ಯಾರೊಂದಿಗಾದರೂ ಸಮಸ್ಯೆ ಇದ್ದರೆ, ಅವರ ಬಗ್ಗೆ ಹಿಂದೆ ಮಾತನಾಡುವ ಬದಲು ನಾನು ಮುಂದೆ ಹೋಗಿ ಆ ವ್ಯಕ್ತಿಯ ಬಳಿ ಮಾತನಾಡುತ್ತೇನೆ. ಹೆಚ್ಚಾಗಿ ನನ್ನ ಬಗ್ಗೆ ಮಾತನಾಡುವವರನ್ನು ನೋಡಿದಾಗ ನಾನು ಅದನ್ನು ತುಂಬಾ ಶಾಂತವಾಗಿ ತೆಗೆದುಕೊಳ್ಳುತ್ತೇನೆ' ಎಂದಿದ್ದರು.  ನನ್ನ ಬಗ್ಗೆ ಆಕೆ ಇಲ್ಲಸಲ್ಲದ್ದನ್ನು ಹೇಳುತ್ತಾಳೆ. ಅದರಿಂದ ಖುಷಿ ಅನುಭಿವಿಸದರೆ ಆ ಖುಷಿಯಲ್ಲಿಯೇ ನಾನೂ ಖುಷಿ ಪಡುತ್ತೇನೆಯೇ ವಿನಾ  ಇದೆಲ್ಲವೂ ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉರ್ಫಿಗೆ ಟಾಂಗ್ ಕೊಟ್ಟಿದ್ದರು.  

 

Latest Videos
Follow Us:
Download App:
  • android
  • ios