ನಟಿ ಉರ್ಫಿ ಆರೆಂಜ್ ಬಣ್ಣದ ಸೀರೆ ಧರಿಸಿ ಉಯ್ಯಾಲೆಯಲ್ಲಿ ತೂಗಾಡುತ್ತಿದ್ದರು. ಮಾದಕ ಸೀರೆ ಧರಿಸಿ ಉಯ್ಯಾಲೆಯಲ್ಲಿ ವಯ್ಯಾರ ಮಾಡಲು ಹೋಗಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ನಟಿ ಉರ್ಫಿ ಜಾವೇದ್ ಯಾರಿಗೆ ತಾನೆ ಗೊತ್ತಿಲ್ಲ. ವಿಭಿನ್ನ ಉಡುಗೆ ತೊಡುಗೆ ಮೂಲಕವೇ ಉರ್ಫಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ವಿಚಿತ್ರ ಬಟ್ಟೆ ಧರಿಸಿ ಕ್ಯಾಮರಾ ಮುಂದೆ ಪೋಸ್ ನೀಡುವ ಉರ್ಫಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಎಷ್ಟೇ ಟ್ರೋಲ್ ಆದರೂ ತಲೆಕೆಡಿಸಿಕೊಳ್ಳದ ಉರ್ಫಿ ವಿಚಿತ್ರ ಅವತಾರದಲ್ಲೇ ಕಾಣಿಸಿಕೊಳ್ಳುತ್ತಾರೆ. ತುಂಡುಡುಗೆಯಲ್ಲಿಯೇ ಹೆಚ್ಚು ಮಿಂಚುವ ಉರ್ಫಿ ನೆಟ್ಟಿಗರ ಕಣ್ಣು ಕುಕ್ಕುತ್ತಿರುತ್ತಾರೆ. ಇತ್ತೀಚೆಗೆ ಉರ್ಫಿ ಆರೆಂಜ್ ಬಣ್ಣದ ಸೀರೆ ಧರಿಸಿ ಉಯ್ಯಾಲೆಯಲ್ಲಿ ತೂಗಾಡುತ್ತಿದ್ದರು. ಮಾದಕ ಸೀರೆ ಧರಿಸಿ ಉಯ್ಯಾಲೆಯಲ್ಲಿ ವಯ್ಯಾರ ಮಾಡಲು ಹೋಗಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಉರ್ಫಿ ಜಾವೆದು ರೀಲ್ಸ್ ಮಾಡುತ್ತಿರುತ್ತಾರೆ. ವಿಚಿತ್ರ ರೀಲ್ಸ್ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ ಸಾಂಗ್ ಶೂಟಿಂಗ್ ಮಾಡುವಾಗ ಅವರು ಉಯ್ಯಾಲೆಯಲ್ಲಿ ತೂಗಾಡುತ್ತಿದ್ದರು. ಅವರ ಸುತ್ತಮುತ್ತ ಡ್ಯಾನ್ಸರ್ಗಳು ಕುಣಿಯುತ್ತಿದ್ದರು. ಆದರೆ ಬ್ಯಾಲೆನ್ಸ್ ತಪ್ಪಿ ಉಯ್ಯಾಲೆಯಿಂದ ಬಿದ್ದ ಉರ್ಫಿಯನ್ನು ಸುತ್ತಮುತ್ತ ಇದ್ದ ಹುಡುಗರು ಕಾಪಾಡಿದ್ದಾರೆ. ಈ ವಿಡಿಯೋವನ್ನು ಸ್ವತಃ ಉರ್ಫಿ ಜಾವೇದ್ ಅವರೇ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ ಬರುತ್ತಿದೆ. ಈ ವಿಡಿಯೋಗೆ ಲಕ್ಷಗಟ್ಟಲೇ ವೀಕ್ಷಣೆ ಕಂಡಿದೆ. ಸಿಕ್ಕಾಪಟ್ಟೆ ಕಾಮೆಂಟ್ಸ್ ಬಂದಿದೆ. ವಿಡಿಯೋ ಶೇರ್ ಮಾಡಿ ಉರ್ಫಿ ದೇವರಿಗೆ ಧನ್ಯವಾದ ತಿಳಿದ್ದಾರೆ. ಅಬ್ಬಾ ಸೇಫ್ ಆದೆ ಅಂತ ಬರೆದುಕೊಂಡು ದೇವರೆ ಧನ್ಯವಾದಗಳು ಎಂದಿದ್ದಾರೆ.
ಉರ್ಫಿ ಜಾವೆದ್ ಬಗ್ಗೆ
ಉರ್ಫಿ ಜಾವೇದ್ ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಬಳಿಕ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ನಿಂದ. ಕರಣ್ ಜೋಹರ್ ನಡೆಸಿಕೊಟ್ಟ ಆ ಶೋನಲ್ಲಿ ಉರ್ಫಿ ಜಾವೇದ್ ಸ್ಪರ್ಧಿಸಿದ್ದರು. ಬಳಿಕ ಉರ್ಫಿ ತನ್ನ ವಿಚಿತ್ರ ಬಟ್ಟೆ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆದರು. ಉರ್ಫಿ ಸದ್ಯ ಯಾವುದೇ ಸಿನಿಮಾ ಅಥವಾ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಪ್ರತಿದಿನ ವಿಚಿತ್ರ ಬಟ್ಟೆ ಧರಿಸಿ ಏರ್ಪೋಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ತನ್ನ ವಿಚಿತ್ರ ಬಟ್ಟೆಯ ಪ್ರದರ್ಶನಕ್ಕಾಗಿಯೇ ಉರ್ಫಿ ಮುಂಬೈ ಸುತ್ತಾಡುತ್ತಿರುತ್ತಾರೆ, ಕ್ಯಾಮರಾ ಮುಂದೆ ಬರುತ್ತಾರೆ ಹಾಗೂ ಏರ್ಪೋರ್ಟ್‌ಗೂ ಎಂಟ್ರಿ ಕೊಡುತ್ತಾರೆ.
