ಉರ್ಫಿ ಜಾವೇದ್ ತಂದೆಯ ದೌರ್ಜನ್ಯ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂದೆ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಇಸ್ಲಾಂನಲ್ಲಿ ಮಹಿಳೆಯರ ಮೇಲಿನ ನಿಯಂತ್ರಣವನ್ನು ಟೀಕಿಸಿದ್ದಾರೆ. ಭಗವದ್ಗೀತೆ ಓದುತ್ತಿರುವುದಾಗಿ ಹಾಗೂ ಹಿಂದೂ ಯುವಕನನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಶಿವ ದೇವಾಲಯಕ್ಕೆ ಭೇಟಿ ನೀಡಿ, ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೋಲ್ ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಉರ್ಫಿ ಜಾವೇದ್ ಎಂದಾಕ್ಷಣ ಕಣ್ಣಿಗೆ ಬರುವುದು ಚಿತ್ರ-ವಿಚಿತ್ರ ಅವತಾರದ ನಟಿಯೇ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡುವ ನಟಿ ಈಕೆ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿ ಈಕೆಗೆ. ಆದರೆ ಕೆಲ ದಿನಗಳ ಹಿಂದೆ ನಟಿ ಶಿವನ ದರ್ಶನಕ್ಕಾಗಿ 400 ಮೆಟ್ಟಿಲುಗಳನ್ನು ಚಕಾಚಕ್ ಏರಿ ಹೋಗಿ ಸದ್ದು ಮಾಡಿದ್ದರು. ಅದೂ ಸೀದಾ ಸಾದಾ ಬಟ್ಟೆಯಲ್ಲಿ ಹೋಗಿರುವುದರಿಂದ ಎಲ್ಲರೂ ಭೇಷ್ ಭೇಷ್ ಎಂದಿದ್ದರು. ಉರ್ಫಿ ನೀವು ಹೀಗೆಯೇ ಇರಿ, ಚೆನ್ನಾಗಿ ಕಾಣಿಸುತ್ತಿದ್ದೀರಿ ಎಂದು ಕೆಲವರು ಹಿಂದೂ ಧರ್ಮಕ್ಕೆ ಮತಾಂತರವಾದ್ರಾ ಎಂದು ಪ್ರಶ್ನಿಸಿದ್ದಾರೆ. ಮೆಟ್ಟಿಲುಗಳನ್ನು ಹತ್ತಿದ ನಟಿ, ಅಲ್ಲಿಯ ಬೃಹತ್ ಗಂಟೆಯನ್ನು ಕಷ್ಟಪಟ್ಟು ಬಾರಿಸಿರುವುದನ್ನು ನೋಡಿ ಟ್ರೋಲ್ ಮಾಡುತ್ತಿದ್ದವರೆಲ್ಲರೂ ಉರ್ಫಿಯನ್ನು ಹಾಡಿ ಹೊಗಳಿದ್ದರು.
ಇಸ್ಲಾಂನಲ್ಲಿ ಹುಟ್ಟಿರುವ ಉರ್ಫಿ ಜಾವೇದ್, ಶಾಕಿಂಗ್ ಹೇಳಿಕೆಯೊಂದನ್ನು ಕೊಟ್ಟಿರುವ ಬಗ್ಗೆ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ನಟಿ, ತಮ್ಮ ವೈಯಕ್ತಿಕ ನಂಬಿಕೆಗಳ ಬಗ್ಗೆ ಮಾತನಾಡುತ್ತಾ, ತಾನು ಇಸ್ಲಾಂ ಧರ್ಮವನ್ನು ಅನುಸರಿಸುವುದಿಲ್ಲ. ನನ್ನ ತಂದೆಯನ್ನು ನೋಡಿಯೇ, ಆತ ನಮಗೆ ಮತ್ತು ನನ್ನ ತಾಯಿಗೆ ಕೊಟ್ಟಿರುವ ಹಿಂಸೆಯನ್ನು ಕಂಡವಳು ನಾನು. ಅವರು ನನ್ನ ತಾಯಿ ಮತ್ತು ನಮಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ನಾವೆಲ್ಲಾ ಹೆಣ್ಣು ಮಕ್ಕಳು ಎನ್ನುವುದು. ನಾನು ಮೂರನೆಯವಳು. ನಾನು ಕೂಡ ಹೆಣ್ಣಾಗಿ ಹುಟ್ಟಿದ ಮೇಲೆ ಅವರ ಕೋಪ ಇನ್ನಷ್ಟು ಹೆಚ್ಚಾಯಿತು. ನಾಲ್ಕನೆಯ ಬಾರಿಗೆ ಅಮ್ಮ ಗರ್ಭಿಣಿಯಾದರು. ಆಗಲೂ ಹೆಣ್ಣು ಹುಟ್ಟಿದರೆ ಡಿವೋರ್ಸ್ ನಡುನೀರಿನಲ್ಲಿ ಬಿಟ್ಟು ಬೇರೆ ಮದುವೆಯಾದರು. ಅವರು ತುಂಬಾ ಕ್ರೂರಿ ಎಂದಿರುವ ಉರ್ಫಿ, ಇಡೀ ಇಸ್ಲಾಂ ಧರ್ಮದ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ.
400 ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಉರ್ಫಿ ಜಾವೇದ್! ವಿಡಿಯೋದಲ್ಲಿ ಡ್ರೆಸ್ ನೋಡಿ ಫ್ಯಾನ್ಸ್ ಶಾಕ್
ಬಹುತೇಕ ಮುಸ್ಲಿಮ್ ಪುರುಷರಿಗೆ ಮಹಿಳೆಯರು ಅವರು ಹೇಳಿದಂತೆಯೇ ಇರಬೇಕು. ಅವರಿಗೆ ಸಂಬಂಧಗಳ ಮೇಲೆ ಹಿಂದೂಗಳಲ್ಲಿ ಇರುವಷ್ಟು ಪ್ರೀತಿ ಇಲ್ಲ. ಆದ್ದರಿಂದ ಮುಸ್ಲಿಂ ಹುಡುಗನನ್ನು ಮದುವೆಯಾಗಲಾರೆ. ಅವರು ಹೇಳಿದಂತೆ ನನ್ನಿಂದ ಬಟ್ಟೆ ಧರಿಸುವುದು ಸಾಧ್ಯವಿಲ್ಲ. ಎಲ್ಲ ಮಹಿಳೆಯರನ್ನು ಅವರು ಕಂಟ್ರೋಲ್ ಮಾಡಲು ಬಯಸುತ್ತಾರೆ. ನನಗೆ ಅದೆಲ್ಲಾ ಸಾಧ್ಯವಿಲ್ಲ ಎಂದಿರುವ ಉರ್ಫಿ, ನಾನು ಭಗವಗ್ದೀತೆಯನ್ನು ಓದುತ್ತಿದ್ದೇನೆ. ಅದರಿಂದ ನನಗೆ ಜೀವನದ ಅರಿವು ಆಗಿದೆ. ಈ ಪುಸ್ತಕವನ್ನು ಓದಿದಾಗ ಸಿಗುವ ಸುಖ ಎಲ್ಲಿಯೂ ಇಲ್ಲ ಎಂದಿದ್ದಾರೆ ಉರ್ಫಿ. ಈ ಮೂಲಕ ಹಿಂದೂ ಯುವಕನನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಸದಾ ಬಟ್ಟೆಗಳಿಂದ ಟ್ರೋಲ್ ಆಗುವ ಉರ್ಫಿ, ಈ ಹಿಂದೆ ಇದಕ್ಕೂ ಉತ್ತರಿಸಿದ್ದರು. ನಾನು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಪೋಸ್ಟ್ಗಳು ಟ್ರೋಲ್ ಆಗುತ್ತದೆ ಎನ್ನುವುದು ಗೊತ್ತು. ಸಲ್ವಾರ್ ಹಾಕಿದರೂ ಟ್ರೋಲ್ ಮಾಡುತ್ತಾರೆ. ಏನೇ ಹಾಕಿದರೂ ನೆಗೆಟಿವ್ ಕಮೆಂಟ್ಸ್ ಹೆಚ್ಚು ಇರುತ್ತವೆ. ಎಲ್ಲಾ ಪಬ್ಲಿಸಿಟಿಗೆ ಎನ್ನುತ್ತಾರೆ. ಯಾರ ಹೇಳಿಕೆಗೂ ನಾನು ತಲೆ ಕೆಡಿಸಿಕೊಳ್ಳುವವಳು ಅಲ್ಲ.ಪಬ್ಲಿಸಿಟಿ ಬೇಕು ಎಂದಿದ್ದರೆ ಬೆತ್ತಲೆ ತಿರುಗುತ್ತಿದ್ದೆ ಎಂದು ತಿರುಗೇಟು ಕೊಟ್ಟಿದ್ದರು.
