Asianet Suvarna News Asianet Suvarna News

OTTಯಲ್ಲಿ ಲಭ್ಯವಿರುವ ಕನ್ನಡದ ಸಿನಿಮಾಗಳು; ಯಾವಾಗ ಬರುತ್ತೆ KGF 2, RRR?

ಕನ್ನಡದ ಅನೇಕ ಅಸಿನಿಮಾಗಳು ಒಟಿಟಿಯಲ್ಲಿ ಬಂದಿವೆ. ರಿಲೀಸ್ ಗೂ ಮೊದಲು ನೇರವಾಗಿಯೂ ಒಟಿಟಿಯಲ್ಲಿ ಬಂದ ಅನೇಕ ಸಿನಿಮಾಗಳಿವೆ. ಚಿತ್ರಮಂದಿರಕ್ಕೆ ಬಂದ ಬಳಿಕವೂ ಒಟಿಟಿಗೆ ಎಂಟ್ರಿ ಕೊಡುತ್ತಿವೆ. ಒಟಿಟಿ ಕ್ಷೇತ್ರದಲ್ಲೂ ಪೈಪೋಟಿ ಜೋರಾಗಿದೆ. ಅಮೆಜಾನ್ ಪ್ರೈಂ, ಝೀ 5, ಸನ್ ನೆಕ್ಸ್ಟ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಸೇರಿದಂತೆ ಅನೇಕ ಒಟಿಟಿ ಪ್ಲಾಟ್ ಪಾರ್ಮ್ ಗಳಿವೆ. ಸದ್ಯ ಒಟಿಟಿಯಲ್ಲಿ ರಿಲೀಸ್ ಆದ ಮತ್ತು ಬರಲು ಸಿದ್ಧವಾಗಿರುವ ಕನ್ನಡ ಸಿನಿಮಾಗಳು ಮತ್ತು ಕನ್ನಡಕ್ಕೆ ಡಬ್ ಆದ ಸಿನಿಮಾಗಳ ಲಿಸ್ಟ್ ಮತ್ತು ದಿನಾಂಕ ಇಲ್ಲಿದೆ.

upcomming kannada films on OTT platforms in 2022
Author
Bengaluru, First Published Apr 28, 2022, 6:02 PM IST

ಒಟಿಟಿ ಪ್ಲಾಟ್ ಫಾರ್ಮ್ ದಿನದಿಂದ ದಿನಕ್ಕೆ ಸಿನಿ ಪ್ರೇಕ್ಷಕರ ಬಳಗ ಹೆಚ್ಚು ಮಾಡಿಕೊಳ್ಳುತ್ತಿದೆ. ಕೈಯಲ್ಲಿ ಇರುವ ಮೊಬೈಲ್ ನಲ್ಲೇ ಅದರಲ್ಲೂ ಅತ್ಯುತ್ತಮ ಗುಣಮಟ್ಟದಲ್ಲೇ ಸಿನಿಮಾವನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಮನೆಮಂದಿಯಲ್ಲ ಒಟ್ಟಿಗೆ ಕುಳಿತು ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಲಾಕ್ ಡೌನ್ ಬಳಿಕ ಒಟಿಟಿ ಪ್ಲಾಟ್ ಫಾರ್ಮ್ ಬೇಡಿಕೆ ಹೆಚ್ಚಾಗಿದೆ. ಕೊರೊನಾ ಸಮಯದಲ್ಲಿ ಸಿನಿ ಮಂದಿ ಆಯ್ಕೆ ಮಾಡಿಕೊಂಡ ವೇದಿಕೆ ಒಟಿಟಿ. ಮನೆಯಲ್ಲೇ ಕುಳಿತಿದ್ದ ಜನರಿಗೆ ಅಲ್ಲಿಗೆ ಸಿನಿಮಾ ತಲುಪಿಸುವ ವ್ಯವಸ್ಥೆ ಮಾಡಿತ್ತು ಒಟಿಟಿ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದರೂ ಒಟಿಟಿ ಪ್ರೇಕ್ಷಕರ ಬಳಗವೇ ಪ್ರತ್ಯೇಕವಿದೆ ಎಂದರೆ ತಪ್ಪಿಲ್ಲ.

ಕನ್ನಡದ ಅನೇಕ ಅಸಿನಿಮಾಗಳು ಒಟಿಟಿಯಲ್ಲಿ ಬಂದಿವೆ. ರಿಲೀಸ್ ಗೂ ಮೊದಲು ನೇರವಾಗಿಯೂ ಒಟಿಟಿಯಲ್ಲಿ ಬಂದ ಅನೇಕ ಸಿನಿಮಾಗಳಿವೆ. ಚಿತ್ರಮಂದಿರಕ್ಕೆ ಬಂದ ಬಳಿಕವೂ ಒಟಿಟಿಗೆ ಎಂಟ್ರಿ ಕೊಡುತ್ತಿವೆ. ಒಟಿಟಿ ಕ್ಷೇತ್ರದಲ್ಲೂ ಪೈಪೋಟಿ ಜೋರಾಗಿದೆ. ಅಮೆಜಾನ್ ಪ್ರೈಂ, ಝೀ 5, ಸನ್ ನೆಕ್ಸ್ಟ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಸೇರಿದಂತೆ ಅನೇಕ ಒಟಿಟಿ ಪ್ಲಾಟ್ ಪಾರ್ಮ್ ಗಳಿವೆ. ಸದ್ಯ ಒಟಿಟಿಯಲ್ಲಿ ರಿಲೀಸ್ ಆದ ಮತ್ತು ಬರಲು ಸಿದ್ಧವಾಗಿರುವ ಕನ್ನಡ ಸಿನಿಮಾಗಳು ಮತ್ತು ಕನ್ನಡಕ್ಕೆ ಡಬ್ ಆದ ಸಿನಿಮಾಗಳ ಲಿಸ್ಟ್ ಮತ್ತು ದಿನಾಂಕ ಇಲ್ಲಿದೆ.

Rakshit Shetty; ಭಾರಿ ಮೊತ್ತಕ್ಕೆ 777 charlie OTT ರೈಟ್ಸ್ ಸೇಲ್

ಜೇಮ್ಸ್ - ಸೋನಿ ಲೈವ್ - ಮೇ 14

ದಿ ಕಾಶ್ಮೀರ್ ಪೈಲ್ಸ್ - ಝೀ 5 - ಮೇ 13

ಒಲ್ಡ್ ಮಾಂಕ್ - ಅಮೆಜಾನ್ ಪ್ರೈ ವಿಡಿಯೋ - ಏಪ್ರಿಲ್ 06

ಸಖತ್ - ಸನ್ ನೆಕ್ಟ್ಸ - ಏಪ್ರಿಲ್ 4

ರಾಧೆ ಶ್ಯಾಮ್ - ಪ್ರೈಮ್ ವಿಡಿಯೋ - ಏಪ್ರಿಲ್ 1

ಹೇ ಸಿನಾಮಿಕಾ - ನೆಟ್ ಫ್ಲಿಕ್ಸ್ - ಮಾರ್ಚ್ 31

ಲವ್ ಮಾಕ್ಟೇಲ್2 - ಪ್ರೈಮ್ ವಿಡಿಯೋ - ಮಾರ್ಚ್ 15

ರೈಡರ್ - ಝೀ 5 - ಮಾರ್ಚ್ 11

ಇನ್ನು ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳಲ್ಲಿ ಬಹುಮುಖ್ಯ ಚಿತ್ರಗಳೆಂದರೆ ಕೆಜಿಎಫ್-2 ಮತ್ತು ಆರ್ ಆರ್ ಆರ್. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಕೆಜಿಎಫ್-2 ಮತ್ತು ಆರ್ ಆರ್ ಆರ್ ಸಿನಿಮಾಗಳು ಮೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದೆ ಎನ್ನಲಾಗಿದೆ. ಈಗಾಗಲೇ ಒಟಿಟಿ ರೈಟ್ಸ್ ಸೇಲ್ ಆಗಿದ್ದು ಕೆಜಿಎಫ್-2 ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿದ್ಧವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇನ್ನು ಇತ್ತೀಚಿಗಷ್ಟೆ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ವೂಟ್ ಸೆಲೆಕ್ಟ್ ನಲ್ಲಿ ಬರ್ತಿದೆ ಎಂದು ಸಿನಿಮಾತಂಡ ಬಹಿರಂಗ ಪಡಿಸಿದೆ.

'KGF 2' OTT ಬಿಡುಗಡೆ ದಿನಾಂಕ ಲಾಕ್: ಯಾವಾಗ ಬರ್ತಿದೆ ರಾಕಿ ಭಾಯ್ ಸಿನಿಮಾ?

ಅನೇಕ ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ನೋಡಲು ಲಭ್ಯವಿದೆ. ಫ್ಯಾಮಿಲಿ ಪ್ಯಾಕ್, ಒನ್ ಕಟ್ ಟು ಕಟ್, 100, ಬಡವ ರಾಸ್ಕಲ್, ಭಜರಂಗಿ-2 , ಪೊಗರು, ಫ್ರೆಂಚ್ ಬಿರಿಯಾನಿ, ದಿಯಾ, ನನ್ನ ಪ್ರಕಾರ ದೇವಕಿ ಹೀಗೆ ಅನೇಕ ಕನ್ನಡ ಸಿನಿಮಾಗಳು ಒಟಿಟಿಯಲ್ಲಿ ನೋಡಿ ಎಂಜಾಯ್ ಮಾಡಬಹುದು.

Latest Videos
Follow Us:
Download App:
  • android
  • ios