ಅಯ್ಯಪ್ಪ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ! ವಿವಾದದ ಸುಳಿಯಲ್ಲಿ ಸಿಲುಕಿರೋ ರಾಮ್‌ಚರಣ್‌ಗೆ ಪತ್ನಿ ಹೇಳಿದ್ದೇನು?
ಅಯ್ಯಪ್ಪ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ವಾದದ ಸುಳಿಯಲ್ಲಿ ಸಿಲುಕಿದ್ದಾರೆ ನಟ ರಾಮ್‌ಚರಣ್. ಅಭಿಮಾನಿಗಳ ಟೀಕೆಗೆ ಪತ್ನಿ ಹೇಳಿದ್ದೇನು?
ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಅವರು ಈಚೆಗೆ ಅಯ್ಯಪ್ಪ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ ಕೊಟ್ಟಿರುವುದರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ನಟ ರಾಮ್ ಚರಣ್ ಆಧ್ಯಾತ್ಮಿಕ ಪ್ರವಾಸದಲ್ಲಿದ್ದು, ಅಯ್ಯಪ್ಪ ಮಾಲೆ ಧರಿಸಿದ್ದಾರೆ. ಕೆಲ ದಿನಗಳ ಹಿಂದೆ ದೇವಸ್ಥಾನ ಹಾಗೂ ದರ್ಗಾವೊಂದಕ್ಕೆ ಭೇಟಿ ನೀಡಿದ್ದರು. ಶ್ರೀ ವಿಜಯ ದುರ್ಗಾ ದೇವಿ ದೇವಸ್ಥಾನದಲ್ಲಿ ಭೇಟಿ ನೀಡಿದ ಬಳಿಕ ಆಂಧ್ರಪ್ರದೇಶದ ಕಡಪದಲ್ಲಿರುವ ಅಮೀನ್ ಪೀರ್ ದರ್ಗಾ ಭೇಟಿ ನೀಡಿ ಚಾದರ್ ಅರ್ಪಿಸಿದ್ದರು ನಟ. ಇದು ಕೆಲವು ಹಿಂದೂಗಳನ್ನು ಕೆರಳಿಸಿದೆ. ಅಯ್ಯಪ್ಪನ ಮಾಲಾಧಾರಣೆಯಲ್ಲಿ ದರ್ಗಾಕ್ಕೆ ಭೇಟಿ ನೀಡಿರುವುದು ತಪ್ಪು. ಇದು ಹಿಂದೂಗಳ ಭಾವನಗೆ ಧಕ್ಕೆ ತರುವ ವಿಷಯ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಟೀಕಿಸುತ್ತಿದ್ದಾರೆ. ಅವರಿಗೆ ಇಷ್ಟ ಇದ್ದರೆ ಬೇರೆ ಸಮಯದಲ್ಲಿ ಬೇಕಾದರೆ ದರ್ಗಾಕ್ಕೆ ಭೇಟಿ ನೀಡಬಹುದಿತ್ತು , ಆದರೆ ಅಯ್ಯಪ್ಪನ ಮಾಲಾಧಾರಣೆಯಲ್ಲಿ ಭೇಟಿ ನೀಡಿದ್ದು ಸರಿಯಲ್ಲ ಎನ್ನುವುದು ವಾದ.
ಅಭಿಮಾನಿಗಳ ಆಕ್ರೋಶ ತೀವ್ರವಾಗುತ್ತಿದ್ದಂತೆಯೇ ಪತ್ನಿ ಉಪಾಸನಾ ಕೊನಿಡೇಲಾ ಸರ್ವಧರ್ಮ ಸಮಾನತೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಪತಿ ರಾಮ್ ಚರಣ್ ಪರ ನಿಂತಿರುವ ಅವರು, ತಮ್ಮ ಪತ್ನಿ ಅವರ ಧರ್ಮವನ್ನು ಅನುಸರಿಸುವುದರ ಜೊತೆಗೆ ಇತರ ಧರ್ಮಗಳನ್ನು ಗೌರವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಡಪಾ ದರ್ಗಾದಲ್ಲಿ ರಾಮ್ ಚರಣ್ ಪ್ರಾರ್ಥನೆ ಮಾಡುತ್ತಿರುವ ಫೋಟೋ ಹಂಚಿಕೊಂಡ ಉಪಾಸನಾ ಕೊನಿಡೇಲ “ನಂಬಿಕೆಯು ಒಂದುಗೂಡುತ್ತದೆ, ಎಂದಿಗೂ ಇಬ್ಭಾಗವಾಗಲ್ಲ ಎಂದು ನುಡಿದಿದ್ದಾರೆ. ಭಾರತೀಯರಾಗಿ, ನಾವು ದೈವಿಕತೆಯ ಎಲ್ಲಾ ಮಾರ್ಗಗಳನ್ನು ಗೌರವಿಸುತ್ತೇವೆ ನಮ್ಮ ಶಕ್ತಿ ಏಕತೆಯಲ್ಲಿದೆ. ತಮ್ಮ ಧರ್ಮವನ್ನು ಅನುಸರಿಸುವ ಜೊತೆ ಇತರ ಧರ್ಮಗಳನ್ನು ಗೌರವಿಸುತ್ತಾರೆ ಎಂದಿರುವ ಉಪಾಸನಾ ಅವರು, ಒನ್‌ನೇಷನ್ ಒನ್‌ಸ್ಪಿರಿಟ್ ಎಂದು ಹ್ಯಾಷ್‌ಟ್ಯಾಗ್ ಕೊಟ್ಟು ಪೋಸ್ಟ್ ಮಾಡಿದ್ದಾರೆ.
ಹಣವೇ ಜೀವನ, ಹಣವೇ ಸರ್ವಸ್ವ, ಹಣವೊಂದಿದ್ದರೆ... ಎನ್ನುತ್ತಲೇ ಬಟ್ಟೆಯ ಗುಟ್ಟನ್ನೂ ರಟ್ಟು ಮಾಡಿದ ಉರ್ಫಿ
ಆದರೆ ಇದಕ್ಕೂ ಆಕ್ರೋಶ ವ್ಯಕ್ತವಾಗಿದೆ. ಇತರ ಧರ್ಮವನ್ನು ಗೌರವಿಸಿ, ಪ್ರೀತಿಸಿ ಬೇಡ ಅನ್ನುವವರುಯಾರು? ಇತರ ಧರ್ಮಗಳನ್ನು ಗೌರವಿಸುವುದು ಎಂದರೆ ನೀವು ಅಯ್ಯಪ್ಪ ಮಾಲೆಯಲ್ಲಿ ಅವರ ದರ್ಗಾಕ್ಕೆ ಹೋಗುವುದು ಎಂದರ್ಥವಲ್ಲ, ಅವರ ನಂಬಿಕೆಯನ್ನು ಅವಮಾನಿಸದೆ ಅವರ ಧರ್ಮವನ್ನು ನಾವು ಗೌರವಿಸಬಹುದು ಮತ್ತು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡದೆ ಅವರು ಮಾಡುವ ಕೆಲಸವನ್ನು ಗೌರವಿಸಬಹುದು ಎಂದು ಹೇಳಿದ್ದಾರೆ. ಅಯ್ಯಪ್ಪ ಮಾಲೆ ಧರಿಸಿ ಕಪ್ಪು ಬಟ್ಟೆ, ಕೊರಳಲ್ಲಿ ದೊಡ್ಡ ಮಾಲೆ ಧರಿಸಿ ದರ್ಗಾಗೆ ಹೋಗುವುದು ಎಂದರೆ ಏನರ್ಥ ಎಂದು ಕೇಳಿದ್ದಾರೆ.
ಅಂದಹಾಗೆ ರಾಮ್ ಚರಣ್ ಅವರ ಜೊತೆ, ಗಾಯಕ ಮೋಹಿತ್ ಚೌಹಾಣ್, ಮುಂದಿನ ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸಾನಾ ಸೇರಿದಂತೆ ಹಲವರು ಇದ್ದರು. ಆಂಧ್ರಪ್ರದೇಶದಲ್ಲಿರುವ ಕಡಪಾಕ್ಕೆ 80ನೇ ರಾಷ್ಟ್ರೀಯ ಮುಷೈರಾ ಗಜಲ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ದರ್ಗಾಕ್ಕೆ ಹೋಗಿದ್ದಾರೆ. ಸಮಾರಂಭದಲ್ಲಿ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿಕೊಂಡಿದ್ದರಿಂದ ಚಪ್ಪಲಿ ಧರಿಸದೆಯೇ ರಾಮ್ ಚರಣ್ ಭಾಗಿಯಾಗಿದ್ದರು. ಇದು ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಕೊನೆಗೆ ದರ್ಗಾಕ್ಕೆ ಹೋದಂತಹ ಸಂದರ್ಭದಲ್ಲಿ ಹೂವಿನಿಂದ ಮಾಡಿದ ಚದ್ದರ್ ಅನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ.
ನನ್ನ ನಟನೆ ನೋಡ್ಲಿಲ್ಲ, ಟ್ಯಾಲೆಂಟ್ ನೋಡ್ಲಿಲ್ಲ ಎನ್ನುತ್ತಲೇ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗ್ಗೆ ಮಿಲನಾ ಓಪನ್ ಮಾತು!