Asianet Suvarna News Asianet Suvarna News

ಅರೆರೆ... ಉರ್ಫಿಗೆ ಇದೇನಾಗೋಯ್ತು? ಎರಡು ದಿನಕ್ಕೊಮ್ಮೆ ಹೀಗೆ ಆಗ್ತಿದೆ: ಸಮಸ್ಯೆ ಹೇಳಿಕೊಂಡ ನಟಿ!

ಊದಿಕೊಂಡಿರೋ ಮುಖ , ಕೆಂಪು ಕೆಂಪಾಗಿರುವ ಕಣ್ಣು, ಮುಖದ ಮೇಲೆ ಅಲರ್ಜಿಯ ಗುರುತು... ಅಲರ್ಜಿಯ ಮುಖ ಶೇರ್​ ಮಾಡಿಕೊಂಡ ನಟಿ ಉರ್ಫಿ ಹೇಳಿದ್ದೇನು? 
 

Uorfi Javed raises concern as she shares pictures says she is having  major major allergies suc
Author
First Published Jun 3, 2024, 5:22 PM IST

ಕೆಲ ದಿನಗಳ ಹಿಂದೆ ನಟಿ ಉರ್ಫಿ ಜಾವೇದ್​ ಚೈನೀಸ್​ ಫುಡ್​ ಇರುವ ಬಟ್ಟೆ ತೊಟ್ಟಿದ್ದರು.  ಇವರು ಧರಿಸಿರುವ ಬಟ್ಟೆಯ ತುಂಬಾ ಚೈನೀಸ್​ ಫುಡ್​ಗಳು ತುಂಬಿ ಹೋಗಿತ್ತು. ಚಿಕ್ಕ ಬಕೆಟ್​ನಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ಇರಿಸಲಾಗಿದ್ದು, ಚೈನೀಸ್​ ದೇಸಿ ಫುಡ್​ಗಳ ಕುರಿತು ನಟಿ ಮಾತನಾಡಿದ್ದರು. ಅದಕ್ಕೂ ಮುನ್ನ,  ಉರ್ಫಿ  ಬಟ್ಟೆಯಲ್ಲಿ ಬ್ರಹ್ಮಾಂಡ ತೋರಿಸಿದ್ದರು. ಬಳಿ ಎದೆ ಭಾಗದಲ್ಲಿ  ಎರಡು ಫ್ಯಾನ್​ ಸಿಕ್ಕಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಬಟ್ಟೆಯಲ್ಲಿನ ಬ್ರಹ್ಮಾಂಡದಲ್ಲಿ ಹಲವು ವಿಷಯಗಳನ್ನು ಅವರು ತೋರಿಸಿದ್ದರೆ, ಎದೆ ಮೇಲೆ ಹಾಕಿಕೊಂಡಿದ್ದ ಫ್ಯಾನ್ಸ್​ ತಿರುಗುತ್ತಿತ್ತು. ಅದೂ ಸಾಲದು ಎಂಬಂತೆ ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು.  ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು,  ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು.  ನಟಿ ಬಟ್ಟೆಯ ಮೇಲೆ ಹೂವು, ಎಲೆಗಳನ್ನು ಇರಿಸಿಕೊಂಡು, ಅದು ಮ್ಯಾಜಿಕ್​ ರೀತಿಯಲ್ಲಿ ಉದುರುವ ಹಾಗೆ ಮಾಡಿದ್ದಂತೂ ನೋಡಿ  ಉರ್ಫಿ ಜಾವೇದ್​ ಫ್ಯಾನ್ಸ್​ ಫಿದಾ ಆಗಿದ್ದು, ನಿಮಗೆ ನೀವೇ ಸಾಟಿ ಎಂದಿದ್ದರು.

ಅಷ್ಟಕ್ಕೂ ಉರ್ಫಿ ಬಗ್ಗೆ ಬೇರೆ ಹೇಳುವುದೇ ಬೇಡ ಬಿಡಿ.  ಉರ್ಫಿ ಎಂದರೆ, ಚಿತ್ರ ವಿಚಿತ್ರ ಡ್ರೆಸ್​ಗಳಿಂದಲೇ ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆದವರು.  ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ.

ಉರ್ಫಿ ಮೈ ತುಂಬಾ ನೀರೂರಿಸುವ ಚೈನೀಸ್​ ಡಿಷಸ್​: ಅಲ್ಲೇ ತಿನ್ಬೋದಾ ಕೇಳ್ತಿದ್ದಾರೆ ತರ್ಲೆ ನೆಟ್ಟಿಗರು!

ಆದರೆ ಇದೀಗ ಆಗಿದ್ದೇ ಬೇರೆ. ಊದಿಕೊಂಡಿರೋ ಮುಖ , ಕೆಂಪು ಕೆಂಪಾಗಿರುವ ಕಣ್ಣು, ಮುಖದ ಮೇಲೆ ಅಲರ್ಜಿಯ ಗುರುತು... ಅಬ್ಬಾ ಉರ್ಫಿಯ ಗುರುತೇ ಸಿಗದಷ್ಟು ಚೇಂಜ್​ ಆಗಿಬಿಟ್ಟಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಅರೆರೆ. ಉರ್ಫಿಗೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ಇದೀಗ ನಟಿ, ತಮಗಾಗಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ. ಇದು ತಮಗೆಮಾಮೂಲಾಗಿ ಆಗುತ್ತಲೇ ಇರುತ್ತದೆ ಎಂದಿದ್ದಾರೆ. 

ನನ್ನ ಮುಖ ನೋಡಿದ ಹಲವರು ವಿವಿಧ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ.  ನನಗೆ ದೊಡ್ಡ ಅಲರ್ಜಿ ಇದೆ, ನನ್ನ ಮುಖವು ಹೆಚ್ಚಾಗಿ ಊದಿಕೊಳ್ಳುತ್ತದೆ. ಪ್ರತಿ ಎರಡು ದಿನಕ್ಕೊಮ್ಮೆ ಹೀಗೆ ಆಗುತ್ತಲೇ ಇರುತ್ತದೆ. ಇದು ನನಗೆ ಮಾಮೂಲಾಗಿ ಹೋಗಿದೆ. ಏಳುವ ಸಮಯದಲ್ಲಿ ಮುಖ ಸದಾ ಊದಿಕೊಂಡಿರುತ್ತದೆ . ನಾನು ಯಾವಾಗಲೂ ತೀವ್ರ ಅಸ್ವಸ್ಥತೆಯಲ್ಲಿದ್ದೇನೆ ಎಂದಿದ್ದಾರೆ ನಟಿ. ನಾನು ಇದಕ್ಕಾಗಿ ಇಮ್ಯುನೊಥೆರಪಿ ನಡೆಸುತ್ತಲೇ ಇದ್ದೇನೆ. ಆದರೂ ಇದು ಇನ್ನೂ ಪೂರ್ತಿ ವಾಸಿಯಾಗಿಲ್ಲ.  ಅಂತಹ ಕೆಟ್ಟ ಅಲರ್ಜಿಯನ್ನು ನಾನು ಎದುರಿಸುತ್ತಿದ್ದೇನೆ.  ನಾನು 18 ವರ್ಷ ವಯಸ್ಸಿನಿಂದಲೂ ನನ್ನ ಸಾಮಾನ್ಯ ಫಿಲ್ಲರ್‌ಗಳು ಮತ್ತು ಬೊಟೊಕ್ಸ್ ಅನ್ನು ಹೊರತುಪಡಿಸಿ ನಾನು ಏನನ್ನೂ ಮಾಡುತ್ತಿಲ್ಲ. ಆದರೂ ಈ ಸಮಸ್ಯೆ ಆಗಿದೆ ಎಂದಿದ್ದಾರೆ. ನನ್ನ ಮುಖ ನೋಡಿ ಟೀಕೆ ಮಾಡುವುದು, ಸಜೆಷನ್​ ಕೊಡುವುದು ಬೇಡ,  ಸಹಾನುಭೂತಿ ತೋರಿ  ಮುಂದುವರಿಯಿರಿ ಎಂದಿದ್ದಾರೆ. ನೀವು ಮೊದಲು ಬೊಟೊಕ್ಸ್​ ಮಾಡಿಕೊಳ್ಳುವುದನ್ನು ಬಿಡಿ ಎಂಬ ಸಜೆಷನ್​ ಬರುತ್ತಿದೆ. 

 

ಡ್ರೆಸ್​ನಿಂದ ಉದುರಿದ ಹೂವು, ಎಲೆಗಳು... ಅಬ್ಬಬ್ಬಾ ಉರ್ಫಿಗೆ ಉರ್ಫಿನೇ ಸಾಟಿ ಕಣ್ಲಾ ಅಂತಿದ್ದಾರೆ ಫ್ಯಾನ್ಸ್​..

 

 
 
 
 
 
 
 
 
 
 
 
 
 
 
 

A post shared by Uorfi (@urf7i)

Latest Videos
Follow Us:
Download App:
  • android
  • ios