ಟಾಲಿವುಡ್‌ ನಟ ಮೋಹನ್ ಬಾಬು ಅವರ ಶಂಶಾಬಾದ್‌ ವಿಮಾನ ನಿಲ್ದಾಣದ ಬಳಿ ಇರುವ ನಿವಾಸಕ್ಕೆ ಶನಿವಾರ ದುಷ್ಕರ್ಮಿಗಳು ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. 

ಕೊರೋನಾ ವಿರುದ್ಧ ಹೋರಾಟಲು ನಟ ಮೋಹನ್‌ ಬಾಬು ಸಾಥ್! 

ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬಂದ ದುಷ್ಕರ್ಮಿಗಳು ಮೋಹನ್‌ ಬಾಬು ಅವರ ಮನೆಯ ಸೆಕ್ಯುರಿಟಿ ಗಾರ್ಡ್‌ಗೆ ನಟ ಎಲ್ಲಿದ್ದಾರೆ ಎಂದು ವಿಚಾರಣೆ ಮಾಡುವ ವೇಳೆ ಮಾಹಿತಿ ನೀಡುವ ಮೊದಲು ಅವರ ಪರಿಚಯ ಬಗ್ಗೆ  ವಿಚಾರಿಸಲು ಮುಂದಾದಾಗ  ಗಾರ್ಡ್‌ ಜೊತೆ ಅಸಭ್ಯವಾಗಿ ವರ್ತಿಸಿದ್ದಾರಂತೆ.

ಶನಿವಾರ ರಾತ್ರಿ AP 31 AN 0004 ಕಾರಿನಲ್ಲಿ ಅಪರಿಚಿತರ ಗುಂಪು ಬಂದಿರುವುದು ತಿಳಿದು ಬಂದಿದೆ. ತಕ್ಷಣವೇ ನಟನಿಗೆ ಸೆಕ್ಯುರಿಟಿ ಮಾಹಿತಿ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ವಿಜಯಲಕ್ಷ್ಮಿ ಎಂಬ ಮಹಿಳೆಯ ಹೆಸರಿನಲ್ಲಿ ನೋಂದಣಿ ಆಗಿರುವುದಾಗಿ ತಿಳಿದು ಬಂದಿದೆ. 

ಅವರು ಯಾರು? ಯಾವ ಕಾರಣಕ್ಕೆ ರಾತ್ರಿ ಇವರ ಮನೆಗೆ ನುಗ್ಗಿದ್ದರು  ಇದರ ಹಿಂದೆ ಹಳೇ ದ್ವೇಷ ಏನಾದರೂ ಇದ್ಯಾ ಎಂಬ ಮಾಹಿತಿಯನ್ನು ಪಡೆಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಟ ಮೋಹನ್‌ ಬಾಬು ಈ ವಿಚಾರದ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ.