Asianet Suvarna News Asianet Suvarna News

ಕತ್ತು ಉಳುಕಿಸಿಕೊಂಡ ಉರ್ಫಿ.... ಇದೂ ಫ್ಯಾಷನ್ನಾ ಅಂತ ಕೇಳಿದ ನೆಟ್ಟಿಗರು

ಉರ್ಫಿ ಜಾವೇದ್ ಯಾರಿಗೆ ತಾನೇ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈಕೆ ಬಾಲಿವುಡ್‌ ನಟಿಯರಿಗಿಂತಲೂ ಹೆಚ್ಚು ಖ್ಯಾತಿ ಗಳಿಸಿರುವ ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್, ತನ್ನ ಚಿತ್ರ ವಿಚಿತ್ರ ಫ್ಯಾಷನ್ ಸ್ಟೇಟ್‌ಮೆಂಟ್‌ನಿಂದಾಗಿ ಸದಾ ಇಂಟರ್‌ನೆಟ್‌ನಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿರುವ ಈ ಉರ್ಫಿಗೀಗ ಕತ್ತು ಉಳುಕಿದೆ. 

Unique Fashion Icon Actress Urfi Javed suffering from neck Pain akb
Author
First Published Oct 21, 2023, 3:45 PM IST

ಉರ್ಫಿ ಜಾವೇದ್ ಯಾರಿಗೆ ತಾನೇ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈಕೆ ಬಾಲಿವುಡ್‌ ನಟಿಯರಿಗಿಂತಲೂ ಹೆಚ್ಚು ಖ್ಯಾತಿ ಗಳಿಸಿರುವ ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್, ತನ್ನ ಚಿತ್ರ ವಿಚಿತ್ರ ಫ್ಯಾಷನ್ ಸ್ಟೇಟ್‌ಮೆಂಟ್‌ನಿಂದಾಗಿ ಸದಾ ಇಂಟರ್‌ನೆಟ್‌ನಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿರುವ ಈ ಉರ್ಫಿಗೀಗ ಕತ್ತು ಉಳುಕಿದೆ. 

ಉರ್ಫಿ ಕತ್ತಿಗೆ ಪಟ್ಟಿ ಹಾಕಿಕೊಂಡು ಓಡಾಡುತ್ತಿರುವ ವೀಡಿಯೋವನ್ನು ಪಪಾರಾಜಿ ವೈರಲ್‌ ಭಯಾನಿ ಪೋಸ್ಟ್ ಮಾಡಿದ್ದು ಬೇಗ ಗುಣಮುಖರಾಗುವಂತೆ ವಿಶ್ ಮಾಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಸುಮ್ಮನೇ ಕೂತಿಲ್ಲ, ಆಕೆಗೆ ಇದೂ ಕೂಡ ಏನಾದ್ರೂ ಫ್ಯಾಷನ್ನೋ ಹೇಗೆ ಅಂತ ಆಕೆಯನ್ನು ಆಕೆಯನ್ನ ಕೆಣಕಿದ್ದಾರೆ. ಆದರೆ ಉರ್ಫಿ ಜಿಮ್‌ಗೆ ಧರಿಸುವ ಧಿರಿಸಿನಲ್ಲಿ ಕತ್ತಿಗೆ ಪಟ್ಟಿಯೊಂದನ್ನು ಹಾಕಿಕೊಂಡು ಕಾಣ ಸಿಕ್ಕಿದ್ದು, ಇದನ್ನು ನೋಡಿದ ಕೆಲವರು ಈಕೆಗೆ ಕತ್ತು ಉಳುಕಿದ್ರು ಜಿಮ್ ಮಾಡ್ಬೇಕಾ, ಇದ್ರಲ್ಲೇ ಈಕೆ ದೊಡ್ಡ ಫೇಕ್ ಅಂತ ಗೊತ್ತಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈಕೆಯನ್ನು ಸಾಮಾನ್ಯವೆನಿಸುವ ಧಿರಿಸಿನಲ್ಲಿ ಇವತ್ತೇ ನೋಡಿದ್ದು, ಅಂತ ಕಾಮೆಂಟ್ ಮಾಡಿದ್ದಾರೆ. 

 

ಇದಾದ ಎರಡೇ ದಿನಕ್ಕೆ ಉರ್ಫಿ ನವರಾತ್ರಿಯ ಧಿರಿಸು ಅಂತ ಸಂಪ್ರದಾಯಿಕ ಉದ್ದ ಲಂಗ ಹಾಗೂ ಭುಜ ಹಾಗೂ ಕೈಗಳಿಲ್ಲದ ಮೇಲ್ದಿರಿಸನ್ನು ತೊಟ್ಟು ತಲೆಗೊಂದು ಶಾಲನ್ನು ಸುತ್ತಿಕೊಂಡು ದೇವ ಕನ್ನಿಕೆಯಂತೆ ಕಾಣಿಸಿಕೊಂಡಿದ್ದಾಳೆ. ಏರ್‌ಪೋರ್ಟ್‌ನಲ್ಲಿ ಈ ಅವತಾರದಲ್ಲಿ ಈಕೆಯನ್ನು ನೋಡಿದ ಜನ ಮತ್ತೆ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಈಕೆ ನಿಕವಾಗಿಯೂ ದಿನ ಎಲ್ಲಾದರೂ ಹೋಗುತ್ತಾಳೋ ಅಥವಾ ಫ್ಯಾಷನ್‌ ಶೋ ಮಾಡುವುದಕ್ಕೆಯೇ ಏರ್‌ಪೋರ್ಟ್‌ಗೆ ಬರುತ್ತಾಳೋ, ಯಾರಾದರೂ ಈ ಅವತಾರದಲ್ಲಿ ಹೋಗುತ್ತಾರೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಇಲ್ಲ ಆಕೆ ಫೋಟೋಗಾಗಿಯೇ ಬರುವುದು ಎಂದು ಪ್ರತಿಕ್ರಿಯಿಸಿದ್ದಾರೆ. 

ಈ ವೀಡಿಯೋವನ್ನು ಕೂಡ ವೈರಲ್ ಭಯಾನಿ ಶೇರ್ ಮಾಡಿದ್ದು,  ಸದಾ ಆಕೆಯ ಧಿರಿಸಿನ ಕಾರಣಕ್ಕೆ ಆಕೆಯನ್ನು ಬೈಯುತ್ತಿದ್ದ ಕಾಮೆಂಟಿಗರು, ಇಂದು ಆಕೆಯ ಡ್ರೆಸ್ ಬಹಳ ಚೆನ್ನಾಗಿದೆ. ಮೊದಲ ಬಾರಿ ಆಕೆಯನ್ನು ಹೊಗಳುವ ಮನಸ್ಸಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈಕೆ ಈ ಧಿರಿಸು ಧರಿಸಿ ದಾಂಡಿಯಾ ಆಡಲು ಬಂದಿದ್ದಾಳೆಯೇ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಉರ್ಫಿಯ ನವರಾತ್ರಿ ಡ್ರೆಸ್‌ಗೆ ಬಹುತೇಕ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Uorfi (@urf7i)

 

ಕೆಲ ದಿನಗಳ ಹಿಂದೆ ಉರ್ಫಿ ಬರೀ ಬಾಳೆಹಣ್ಣಿನ ಸಿಪ್ಪೆಯಿಂದ  ನಿರ್ಮಿಸಿದ ಧಿರಿಸು ಧರಿಸಿ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಳು, ಈಕೆಯ ಧಿರಿಸು ನೋಡಿದ ನೆಟ್ಟಿಗರು ಉರ್ಫಿ ಮುಂದೆ ಹಸು ಮೇಕೆಗಳು ಬಂದರೆ ಕಷ್ಟ ಎಂದು ಕಾಮೆಂಟ್ ಮಾಡಿದ್ದರು.  ಬರೀ ಇಷ್ಟೇ ಅಲ್ಲದೇ ಉರ್ಫಿ ಬಾಚಾಣಿಕೆ ಕಬ್ಬಿಣದ ಸರಳು, ನಟ್ಟು ಬೋಲ್ಟ್‌ , ಕುರು ಕುರೆಯ ಸ್ಯಾಚೆಟ್ ಮುಂತಾದವುಗಳಿಂದ ತಯಾರಿಸಿದ ವಿಭಿನ್ನ ಫ್ಯಾಷನ್‌ನಿಂದ ಗಮನ ಸೆಳೆದಿದ್ದರು. 

Follow Us:
Download App:
  • android
  • ios