ಆಮ್ಲಜನಕ ಮತ್ತು ರೆಮ್‌ಡಿಸಿವರ್ ಸಹಾಯವಾಣಿ ಸಂಖ್ಯೆಗಳನ್ನು ಶೇರ್ ಮಾಡುವುದರಿಂದ ಹಿಡಿದು ವೈದ್ಯಕೀಯ ಸೌಲಭ್ಯಗಳ ಅಗತ್ಯವನ್ನು ಎತ್ತಿ ತೋರಿಸುವವರೆಗೆ ಬಾಲಿವುಡ್ ನಟ ತಾಪ್ಸಿ ಪನ್ನು ಅವರು COVID-19 ಬಿಕ್ಕಟ್ಟಿನ ಮಧ್ಯೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. 

ಟ್ವಿಟ್ಟರ್ ಬಳಕೆದಾರನೊಬ್ಬ ಟ್ವೀಟ್ ಮತ್ತು ರಿಟ್ವೀಟ್ ಮಾಡುವ ಬದಲು ಅಗತ್ಯವಿರುವವರಿಗೆ ತನ್ನ ಕಾರನ್ನು ಬಳಕೆಗೆ ನೀಡಬೇಕು ಎಂದು ತಾಪ್ಸಿಗೆ ಪ್ರತಿಕ್ರಿಯಿಸುವ ಮೂಲಕ ನಟಿಯನ್ನು ಟ್ರೋಲ್ ಮಾಡಲು ಪ್ರಯತ್ನಿಸಿದ್ದಾನೆ.

ನನ್ನ ದೇಶ ಕಷ್ಟದಲ್ಲಿದೆ, ವ್ಯಾಕ್ಸೀನ್ ಕೊಡಿ: ಅಮೆರಿಕಾಗೆ ಪ್ರಿಯಾಂಕ ಮನವಿ

ನೀವು ಎಲ್ಲಾ ಕೆಲಸಗಳನ್ನು ಟ್ವಿಟರ್‌ನಲ್ಲಿ ಮಾತ್ರ ಮಾಡುತ್ತೀರಾ? ನಿಮ್ಮ ಕಾರನ್ನು ನೀಡಿ ಎಂದು ಬರೆದಿದ್ದಾರೆ. ನೆಟ್ಟಿಗ ನಟಿಯನ್ನು 'ಸಸ್ತಿ' ಎಂದೂ ಕರೆದಿದ್ದಾನೆ. ಈ ಪದವು ನಟಿ ಕಂಗನಾ ರಣಾವತ್ ಮತ್ತು ಅವರ ಬೆಂಬಲಿಗರು ಹೆಚ್ಚಾಗಿ ತಾಪ್ಸೀ ವಿರುದ್ಧ ಬಳಸುತ್ತಿರುತ್ತಾರೆ.

ನೀವು ದಯವಿಟ್ಟು ಬಾಯಿ ಮುಚ್ಚಿಕೊಳ್ಳಿ! ಈ ದೇಶವು ಸಹಜ ಸ್ಥಿತಿಗೆ ಮರಳುವವರೆಗೆ ಇವನ್ನೆಲ್ಲಾ ಹಿಡಿದುಕೊಳ್ಳಿ. ಅಲ್ಲಿಯವರೆಗೆ ನಿಮ್ಮ ಇಂತಹ ಅನಗತ್ಯ ಅಸಂಬದ್ಧತೆಯೊಂದಿಗೆ ನನ್ನ ಸಮಯವನ್ನು ಹಾಳು ಮಾಡಬೇಡಿ. ನನ್ನ ಟೈಂಲೈನಲ್ಲಿ ನಿಮ್ಮ ನಾನ್ಸೆನ್ಸ್‌ಗಳನ್ನು ತುಂಬಿಸಬೇಡಿ ಎಂದಿದ್ದಾರೆ.