ಗಾಂಜಾವನ್ನು ಪ್ರಾಸೆಸ್ ಮಾಡಿರುವ ಆರೋಪದಲ್ಲಿ ಎನ್‌ಸಿಬಿ ಕಿರುತೆರೆ ನಟಿ ಪ್ರೀತಿಕಾ ಚೌಹಾಣ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದೆ.  ಮುಂಬೈನ ವರ್ಸೋವಾದಲ್ಲಿ ಘಟನೆ ನಡೆದಿದೆ.

ಪ್ರೀತಿಕಾ ಮತ್ತು ಫೈಸಲ್ ಎಂಬಾತನಿಂದ 99 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ಅರೆಸ್ಟ್ ಮಾಡಲಾಗಿದೆ. ಪ್ರಸಿದ್ಧ ಕಿರುತೆರೆ ನಟಿಯಾಗಿರುವ ಪ್ರೀತಿಕಾ ಸಾವ್‌ಧಾನ್ ಇಂಡಿಯಾ, ಸಿಐಡಿ, ಸಂಕಟ್ ಮೋಚನ್ ಮಹಾಬಲಿ ಹನುಮಾನ್ ಸೀರಿಯಲ್‌ನಲ್ಲಿ ತಾಯಿ ಸರಸ್ವತಿ ಪಾತ್ರವನ್ನು ಮಾಡಿದ್ದರು.

ಕರಣ್ ಆಪ್ತನ ಮನೆಯಲ್ಲಿ ಸಿಕ್ತು ಗಾಂಜಾ..! 4 ಟಾಪ್ ನಟರ ಹೆಸರು ಬಾಯ್ಬಿಟ್ಟ ರಾಕುಲ್

ಮೂಲತಃ ಹಿಮಾಚಲ ಪ್ರದೇಶದ ಪ್ರೀತಿಕಾ 2015ರಿಂದ ಸೀರಿಯಲ್‌ಗಳಲ್ಲಿ ನಟಿಸಲು ಆರಂಭಿಸಿದ್ದರು. ಅರ್ಜುನ್ ರಾಂಫಲ್‌ನ ಪಾರ್ಟ್‌ನರ್ ಸಹೋದರನಿಗೆ ಕೊಕೇನ್ ಒದಗಿಸಿದ್ದ ಸಾಹಿಲ್ ಅಲಿ ಎಂಬಾತನನ್ನು ಎನ್‌ಸಿಬಿ ಬಂಧಿಸಿತ್ತು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಡ್ರಗ್ಸ್ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಎನ್‌ಸಿಬಿಯೂ ಎಚ್ಚೆತ್ತುಕೊಂಡಿದ್ದು ಈ ವಿಚಾರವಾಗಿ ಬಹಳಷ್ಟು ಜನರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದೆ.