Mollywood Movies: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೀರಿ ಬೆಳೆಯುತ್ತಿದ್ದು, ಕಡಿಮೆ ಬಜೆಟ್‌ನ ಮಲಯಾಳಂ ಸಿನಿಮಾಗಳು ಉತ್ತಮ ಕಥೆಗಳಿಂದ ಪ್ರೇಕ್ಷಕರ ಮನ ಗೆಲ್ಲುತ್ತಿವೆ. ಸಸ್ಪೆನ್ಸ್-ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರು ನೋಡಲೇಬೇಕಾದ ಕೆಲವು ಮಲಯಾಳಂ ಸಿನಿಮಾಗಳ ಪಟ್ಟಿ ಇಲ್ಲಿದೆ.
Mollywood Thriller Movies: ಇಂದು ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೀರಿ ಬೆಳೆಯುತ್ತಿವೆ. ಡಬ್ಬಿಂಗ್‌ನಿಂದಾಗ ತಮ್ಮ ಸಿನಿಮಾಗಳ ವ್ಯಾಪ್ತಿಯನ್ನು ನಿರೀಕ್ಷೆಗೂ ಮೀರಿ ನೋಡುಗರ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿವೆ. ಸಲ್ಮಾನ್ ಖಾನ್ ಅಂತಹ ಸೂಪರ್ ಸ್ಟಾರ್ ಸಿನಿಮಾಗಳು ಸೋತು ಮೂಲೆಗುಂಪು ಆಗುತ್ತಿರುವ ಸಂದರ್ಭದಲ್ಲಿ ಕಡಿಮೆ ಬಜೆಟ್‌ನ ಮಲಯಾಳಂ ಸಿನಿಮಾಗಳು ಮೂರರಿಂದ ನಾಲ್ಕು ಪಟ್ಟು ಲಾಭವನ್ನು ಮಾಡಿಕೊಳ್ಳುತ್ತಿವೆ. ಬಾಕ್ಸ್ ಆಫಿಸ್‌ನ ಸುಲ್ತಾನ ಅಂತ ಕರೆಸಿಕೊಳ್ಳುತ್ತಿದ್ದ ಸ್ಟಾರ್ ಹೀರೋಗಳು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಇತರರ ಸಹಾಯ ಕೇಳುವಂತಾಗಿದೆ. ಇತ್ತ ಸೌಥ್ ಸಿನಿಮಾಗಳು ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಗಟ್ಟಿ ಕಥೆ ಮತ್ತು ಅಚ್ಚುಕಟ್ಟಾದ ನಿರೂಪಣೆಯಿಂದ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿವೆ. ಇಂದು ಸಸ್ಪೆನ್ಸ್-ಥ್ರಿಲ್ಲರ್ ಜಾನರ್ ಕಥೆಗಳನ್ನು ಇಷ್ಟಪಡುವ ಮನಸ್ಸುಗಳು ಮಿಸ್ ಮಾಡದೇ ನೋಡಬೇಕಾದ ಸಿನಿಮಾಗಳ ಪಟ್ಟಿ ಇಲ್ಲಿದೆ.
ಪ್ರತಿಯೊಬ್ಬರೂ ಉತ್ತಮ ಥ್ರಿಲ್ಲರ್ ಚಲನಚಿತ್ರವನ್ನು ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಉತ್ತಮ ಗುಣಮಟ್ಟದ ವಿಷಯಗಳನ್ನು ಹೊಂದಿರುವ ಸಿನಿಮಾಗಳನ್ನು ಮಾಲಿವುಡ್ ನೀಡುತ್ತಲೇ ಬಂದಿದೆ. ಮಲಯಾಳಂ ಭಾಷೆಯ ಕೆಲವು ಥ್ರಿಲ್ಲರ್ ಚಿತ್ರಗಳು ಇಲ್ಲಿವೆ.
1. ವೆಟ್ಟಾ (Vettah)
ಈ ಚಿತ್ರ ನೋಡುಗರನ್ನು ಆರಂಭದಿಂದ ಕೊನೆಯವರೆಗೂ ನಿಮ್ಮನ್ನ ಕರೆದುಕೊಂಡು ಹೋಗುವಂತಹ ಉತ್ತಮಾವಾದ ಕಥೆಯನ್ನು ಹೊಂದಿದೆ. ಹಾಗಾಗಿ ಥ್ರಿಲ್ಲರ್ ಸ್ಟೋರಿಯ 'ವೆಟ್ಟಾ' ಸಿನಿಮಾ ನೋಡುಗರಿಗೆ ಖಂಡಿತವಾಗಿ ಇಷ್ಟವಾಗುತ್ತದೆ. ಕುಂಚಾಕೋ ಬೋಬನ್ ಅಭಿನಯದ 'ವೆಟ್ಟಾ' ಎಲ್ಲರೂ ಮೆಚ್ಚುವಂತಹ ಕ್ಲೈಮ್ಯಾಕ್ಸ್‌ನೊಂದಿಗೆ ಅಂತ್ಯವಾಗುತ್ತದೆ. ಮಂಜು ವಾರಿಯರ್ ಮತ್ತು ಇಂದ್ರಜಿತ್ ಸುಕುಮಾರನ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ. 6.8 ರೇಟಿಂಗ್ ಹೊಂದಿರುವ ವೆಟ್ಟಾ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ.
2. ಮೆಮೊರೀಸ್ (Memories)
ಜೀತು ಜೋಸೆಫ್ ನಿರ್ದೇಶನದ ಅವರ ಥ್ರಿಲ್ಲರ್ ಕಥಾನಕವುಳ್ಳ 'ಮೆಮೊರೀಸ್' ಎಲ್ಲಾ ವರ್ಗದವರನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. ಪೃಥ್ವಿರಾಜ್ ಸುಕುಮಾರನ್ ಅಭಿನಯದ 'ಮೆಮೊರೀಸ್' ತುಂಬಾ ವಿಭಿನ್ನವಾದ ಸಿನಿಮಾವಾಗಿದೆ. 2013ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಐಎಂಡಿಬಿ 8 ಪಾಯಿಂಟ್ಸ್ ನೀಡಿದೆ. ಈ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದಾಗಿದೆ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ , ಎಸ್ಪಿ ಶ್ರೀಕುಮಾರ್ , ಮೇಘನಾ ರಾಜ್ , ಮಿಯಾ ಜಾರ್ಜ್ , ವಿಜಯರಾಘವನ್ , ಸುರೇಶ್ ಕೃಷ್ಣ , ರಾಹುಲ್ ಮಾಧವ್ ಮತ್ತು ವನಿತಾ ಕೃಷ್ಣಚಂದ್ರನ್ ನಟಿಸಿದ್ದಾರೆ.
ಇದನ್ನೂ ಓದಿ: ದೇವರಕೊಂಡ ಜೊತೆ ಬರ್ತ್‌ಡೇ ಆಚರಿಸಿದ್ರಾ ರಶ್ಮಿಕಾ ಮಂದಣ್ಣ? ಇಬ್ಬರ ಬೀಚ್ ಫೋಟೋ ವೈರಲ್
3.ಇರಟ್ಟಾ (Iratta)
2023ರಲ್ಲಿ ಬಿಡುಗಡೆಯಾದ 'ಇರಟ್ಟಾ' ಸಿನಿಮಾದಲ್ಲಿ ಜೋಜು ಜಾರ್ಜ್, ಅಂಜಲಿ, ಆರ್ಯ ಸಲೀಂ ಮತ್ತು ಶ್ರೀಕಾಂತ್ ಮುರಳಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಹಿತ್ ಜಿ. ಕೃಷ್ಣನ್ ನಿರ್ದೇಶನದ ಇರಟ್ಟಾ ಸಿನಿಮಾ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾದ ರೋಮಾಂಚಕಾರಿ ಕ್ಲೈಮ್ಯಾಕ್ಸ್ ಮಾತ್ರ ನಿಮ್ಮನ್ನು ದೀರ್ಘ ಸಮಯದವರೆಗೆ ಕಾಡುತ್ತದೆ. 7.7 ರೇಟಿಂಗ್ ಹೊಂದಿರುವ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.
4. ಆಫಿಸರ್ ಆನ್ ಡ್ಯೂಟಿ (Officer On Duty)
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದ್ದು, ಕುಂಚಾಕೋ ಬೋಬನ್, ಪ್ರಿಯಾಮಣಿ, ವಿಶಾಖ್ ನಾಯರ್, ಜಗದೀಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ನೋಡುವಾಗ ಒಂದೊಂದೇ ಸಸ್ಪೆನ್ಸ್‌ಗಳು ನೋಡುಗರಿಗೆ ಇಷ್ಟವಾಗುತ್ತದೆ. ಕುಂಚಾಕೋ ಬೋಬನ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಫೆಬ್ರವರಿ 2025ರಲ್ಲಿ ಬಿಡುಗಡೆಯಾದ ಆಫಿಸರ್ ಆನ್ ಡ್ಯೂಟಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.
ಇದನ್ನೂ ಓದಿ: ಮೋಹನ್‌ಲಾಲ್-ಪೃಥ್ವಿರಾಜ್ ಕಮಾಲ್.. ಮಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'L2: ಎಂಪುರಾನ್'
1. ವೆಟ್ಟಾ ಸಿನಿಮಾದ ಟ್ರೈಲರ್ (Vettah)

2.ಮೆಮೊರೀಸ್ ಸಿನಿಮಾದ ಟ್ರೈಲರ್ (Memories)

3.ಇರಟ್ಟಾ ಸಿನಿಮಾದ ಟ್ರೈಲರ್ (Iratta)

4. ಆಫಿಸರ್ ಆನ್ ಡ್ಯೂಟಿ ಸಿನಿಮಾದ ಟ್ರೈಲರ್ (Officer On Duty)

