ಟಾಲಿವುಡ್ ಚಿತ್ರರಂಗದ ಮಾಸ್ಟರ್ ಕಿಸರ್‌, ಲವರ್ ಬಾಯ್ ವಿಜಯ್ ದೇವರಕೊಂಡ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನ  ಹೇಗಿರಬೇಕೆಂದು ರಿವೀಲ್‌ ಮಾಡಿದ್ದಾರೆ ಅದರೆ ಅಲ್ಲಿ ಮೆಚ್ಯೂರಿಟಿ ಬಗ್ಗೆ ಮಾತನಾಡಿರುವುದು ಹಲವರಿಗೆ ಕನ್ಫೂಸ್ ಆಗಿದೆ..

ಆರ್ಜುನ್‌ ರೆಡ್ಡಿ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ವಿಜಯ್ ದೇವರಕೊಂಡ ತಮ್ಮ ಪ್ರತಿಯೊಂದು ಸಿನಿಮಾದಲ್ಲೂ ಕಿಸ್ಸಿಂಗ್ ಸೀನ್ ಮಾಡುವ ಮೂಲಕ ಅನೇಕ ಅಡ್ಡ ಹೆಸರುಗಳನ್ನು ಗಳಿಸಿದ್ದಾರೆ. ಆದರೆ ಧಿಡೀರನೆ  ನಾನು ಲವ್ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ನೀಡಿದ ಹೇಳಿಕೆ ಹಲವರಿಗೆ ಶಾಕ್ ನೀಡಿದೆ. 

ದೇವರಕೊಂಡ-ರಶ್ಮಿಕಾರದ್ದು ಬೆಸ್ಟ್ ಜೋಡಿ, ನಿಮಗೂ ಹಾಗೆ ಅನಿಸಿದ್ಯಾ?

'ನನ್ನ ಮನಸ್ಸಿಗೆ ಅನಿಸಿದನ್ನು ನಾನು ಮಾಡುತ್ತೇನೆ. ಆದರೆ ಅದರ ಬಗ್ಗೆ ಹೆಚ್ಚಾಗಿ ಚಿಂತಿಸಿಲ್ಲ.  ನನ್ನ ಲೈಫ್‌ ತುಂಬಾ ಬ್ಯೂಟಿಪುಲ್‌ ಆಗಿದೆ ನಾನು ವಿಭಿನ್ನವಾಗಿ  ಕಲರ್‌ಫುಲ್‌  ಬಟ್ಟೆ ಹಾಕಬೇಕು ಎಂದುಕೊಳ್ಳುವ  ಹಾಗೆ ಲವ್‌ ಸ್ಟೋರಿಗಳು ಸಾಕು ಇನ್ನು ಎಕ್ಸಸೈಟಿಂಗ್‌ ಕಥೆಗಳು ಇದೆ ಅದನ್ನು ಪ್ರಯತ್ನ ಮಾಡೋಣ' ಎಂದು ಯೋಚಿಸಿದ್ದೇನೆ ಎಂದು  ಸ್ಪಷ್ಟನೆ ನೀಡಿದ್ದಾರೆ.

ತೆಲುಗು  ಹಿಟ್‌ ಅರ್ಜುನ್ ರೆಡ್ಡಿ ಸಿನಿಮಾವನ್ನು ಹಿಂದಿಯಲ್ಲಿ ಕಬೀರ್‌ ಸಿಂಗ್‌ ಆಗಿ  ರಿಮೇಕ್ ಮಾಡಲಾಯಿತ್ತು. ಕಬೀರ್ ಪಾತ್ರದಲ್ಲಿ ಕಾಣಿಸಿಕೊಂಡ  ಶಾಹಿದ್ ಕಪೂರ್ ಸಿನಿಮಾವನ್ನು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎತ್ತರಕ್ಕೆ ಮುಟ್ಟಿಸಿದ್ದಾರೆ.

LockDown ಇದ್ದರೂ ಹೊರಗೆ ಕಾಲಿಟ್ಟ ದೇವರಕೊಂಡ, ಪೊಲೀಸ್‌ ಠಾಣೆಯಲ್ಲಿ?

ವಿಜಯ್ ದೇವರಕೊಂಡ ಮದುವೆ ಆಗ್ತಾರಾ?

'ತುಂಬಾ ದಿನಗಳಿಂದ ನನ್ನ ತಂದೆ -ತಾಯಿ ನನ್ನ ಮದುವೆ ವಿಚಾರದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ನನಗೂ ಮದುವೆಯಾಗಿ ಮಕ್ಕಳೊಟ್ಟಿಗೆ ಕಾಲ ಕಳಿಯುವುದಕ್ಕೆ ಇಷ್ಟ ಆದರೆ ಮದುವೆ ಫೇಸ್‌ಗೆ ಕಾಲಿಡಲು ತುಂಬಾ ಮೆಂಟಲ್‌ ಮೆಚ್ಯುರಿಟಿ ಬೇಕು, ನಾನು ಇನ್ನು ಬೆಳೆಯಬೇಕು ಸೆಟ್‌ ಆಗುತ್ತಿದ್ದಂತೆ ಮದುವೆ ಆಗುವೆ. ಈಗ ನಾನು ಚಿಕ್ಕ ಹುಡುಗನಂತೆ ಇರುವೆ ನನಗೆ ಏನು ಬೇಕೋ ಅದನ್ನ ಮಾಡಿಕೊಂಡು. ಮದುವೆಯನ್ನು ಗ್ರ್ಯಾಂಟೆಡ್‌ ಆಗಿ ತೆಗೆದುಕೊಳ್ಳಬಾರದು ಅಂದರೆ ನಾವು  ಒಬ್ಬರನೊಬ್ಬರು ಗೌರವಿಸ ಬೇಕು' ಎಂದು ಹೇಳುತ್ತಾ ತಮ್ಮ ಕನಸಿನ ರಾಣಿ ಬಗ್ಗೆ ಹೇಳಿಕೊಂಡಿದ್ದಾರೆ.

ದೇವರಕೊಂಡ-ರಶ್ಮಿಕಾರದ್ದು ಬೆಸ್ಟ್ ಜೋಡಿ, ನಿಮಗೂ ಹಾಗೆ ಅನಿಸಿದ್ಯಾ?

'ನನ್ನ ಹುಡುಗಿ  ತುಂಬಾ ತಮಾಷೆ ಮಾಡಿಕೊಂಡಿರುವ  ವ್ಯಕ್ತಿಯಾಗಿದ್ದು ಕೈಂಡ್‌ ಆಗಿರಬೇಕು. ಲಾಕ್‌ಡೌನ್‌ ನಂತ ಪರಿಸ್ಥಿತಿ ಎದುರಾದರೂ ನಿರಾಶೆ ಆಗಬಾರದು. ಆಕೆ ಜೊತೆ ಇದ್ದರೆ ಹಾಲಿಡೆ ತರ ಫೀಲ್‌ ಆಗಬೇಕು. ಆಂತ ಗುಣ ಇರುವ ಹುಡುಗಿಯನ್ನು ನಾನು ಲೈಫ್‌ನಲ್ಲಿ ಮೀಟ್‌ ಮಾಡಿದ್ದೀನಿ' ಎಂದು ಮಾತನಾಡಿದ್ದಾರೆ.