ಸಾಮಾಜಿಕ ಜಾಲತಾಣದಿಂದ  ದೂರ ಉಳಿದಿದ್ದ ನಟಿ ತ್ರಿಷಾ ಒಂದು ಪೋಟೋ ಶೇರ್ ಮಾಡುವ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ .ಆದರೆ ಅವರ ಫೋಟೋಗೆ ಬಂದ ಕಮೆಂಟ್ಸ್ ನೋಡಿ ನಟಿ ಶಾಕ್ ಆಗಿದ್ದಾರೆ.  

ದಕ್ಷಿಣಭಾರತ ಚಿತ್ರಂಗದ ಪ್ರತಿಭಾನ್ವಿತ ನಟಿ ತ್ರಿಷಾಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಪೋಟೋ, ವಿಡಿಯೋ ಪೋಸ್ಟ್‌ಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಆದರೆ ತಿಂಗಳ ಹಿಂದೆ ಇದಕ್ಕಿದ್ದಂತೆ ಯಾವ ಆಪ್‌ ಬಳಸುವುದಿಲ್ಲ ಎಂದು ಸೋಷಿಯಲ್ ಮೀಡಿಯಾಗೆ ಗುಡ್‌ ಬೈ ಹೇಳಿದ್ದ ಇವರು ಈಗ ಸೆಲ್ಫಿ ಪೋಟೋ ಮೂಲಕ ಮತ್ತೆ ಪ್ರತ್ಯಕ್ಷರಾಗಿದ್ದಾರೆ. 

ಪೋಟೋ ವೈರಲ್:

ತ್ರಿಷಾ ಅವರು ಬಹುಭಾಷಾ ನಟಿಯಾಗಿದ್ದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೋಷಿಯಲ್ ಮೀಡಿಯಾಗೆ ಕಮ್ ಬ್ಯಾಕ್ ಮಾಡುವಂತೆ ಸಾಕಷ್ಟು ಜನರು ಮನವಿ ಮಾಡಿಕೊಂಡಿದ್ದರು ಅಭಿಮಾನಿಗಳ ಮನವಿಗೆ ಸ್ಪಂದಿಸಿರುವ ತ್ರಿಷಾ ಯಾವುದೇ ಸೂಚನೆ ನೀಡದೆ ಕಮ್ ಬ್ಯಾಕ್ ಮಾಡಿದ್ದಾರೆ.

ರಾಣಾ ಎಂಗೇಜ್‌ ಆದ್ರೂ Ex-ಗರ್ಲ್‌ಫ್ರೆಂಡ್‌ ಸುಮ್ಮನಿಲ್ಲ; ತ್ರಿಷಾ 'ಸೈಕೋಪಾತ್' ಪೋಸ್ಟ್‌!

'Eternal sunshine of the spotless mind! ಎಂಬ ಇಂಗ್ಲೀಷ್ ವಾಕ್ಯ ರಚಿಸಿ ನಿಮ್ಮ ಮೂಡ್‌ ಯಾವುದು' ಹೇಳಿ ಎಂದು ಬರೆದುಕೊಂಡಿದ್ದರು. ಇದಕ್ಕೆ ಉತ್ತರವಾಗಿ ಅಭಿಮಾನಿಗಳು ವೆಲ್ಕಂ ಬ್ಯಾಕ್ ಕ್ವೀನ್ ಎಂದು ಕಾಮೆಂಟ್ ಮಾಡಿ ಸ್ವಾಗತಿಸಿದ್ದರೆ ಇನ್ನೂ ಕೆಲವರು ಫೋಟೋ ನೋಡಿ ಕ್ಲಾಸ್ ತೆಗೆದುಕೊಂಡಿದ್ದಾರೆ.

View post on Instagram

ಸೋಷಿಯಲ್ ಮೀಡಿಯಾಗೆ ವಾಪಸ್ 'ಬರುವುದು ಬಂದಿದ್ದೀರಾ ಸ್ವಲ್ಪ ಒಳ್ಳೆ ಬಟ್ಟೆನೋ ಅಥವಾ ಬೇರೆ ಫೋಟೋನೋ ಹಾಕಬಾರದೆ?' ಎಂದು ಕಾಮೆಂಟ್ ಮಾಡಿದ್ದಾರೆ. 

ಡಿಟಾಕ್ಸ್‌:

ಲಾಕ್‌ಡೌನ್‌ ಪ್ರಾರಂಭದಿಂದಲೂ ತಮ್ಮ ಅಭಿಮಾನಿಗಳ ಜೊತೆ ಉತ್ತಮ ಸಂಪರ್ಕ ಹೊಂದಿರಲು ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಆದರೆ ಇದರಿಂದ ಮಾನಸಿಕ ನೆಮ್ಮದಿ ಇಲ್ಲವೆಂದೋ ಅಥವಾ ಹೆಚ್ಚಾಗಿ ಫೋನ್ ಬಳಸುತ್ತಿದ್ದೀವಿ ಅಂತಲೋ ಒಬ್ಬೊಬ್ಬರಾಗಿಯೇ Social media detox ಮಾಡುತ್ತಿದ್ದಾರೆ. ಈ ಹಿಂದೆ ಕಣ್ಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಕೂಡ ಎರಡು ತಿಂಗಳುಗಳ ಕಾಲ ಜಾಲತಾಣಗಳಿಂದ ವಿರಾಮ ತೆಗೆದುಕೊಂಡಿದ್ದರು.