Asianet Suvarna News Asianet Suvarna News

ಟಾಲಿವುಡ್‌ ಚಿತ್ರ ಜಗತ್ತಿನ ಶ್ರೀಮಂತ ನಟನಾದ ಮೆಗಾಸ್ಟಾರ್, ಚಿರಂಜೀವಿ ಆಸ್ತಿ ಬಗ್ಗೆ ವ್ಯಾಪಕ ಚರ್ಚೆ!

ಟಾಲಿವುಡ್ ನಟ ಚಿರಂಜೀವಿ ಅವರ ಆಸ್ತಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.   ಚಿರಂಜೀವಿ ಅವರು ಹಲವಾರು ರಿಯಲ್ ಎಸ್ಟೇಟ್ ಹೂಡಿಕೆಗಳು, ಐಷಾರಾಮಿ ಕಾರುಗಳು ಮತ್ತು ಒಂದು ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ.

Tollywood richest actor chiranjeevi net worth and assets gow
Author
First Published Aug 23, 2024, 5:17 PM IST | Last Updated Aug 23, 2024, 5:23 PM IST

ಟಾಲಿವುಡ್‌ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಇಡೀ ಟಿಟೌನ್ ಜಗತ್ತು ಸಾವಿರ ಕೋಟಿಗೊಬ್ಬ ಚಿರಂಜೀವಿ ಅಂತ ಕರೀತಿದ್ದಾರೆ. ಯಾಕೆ ಗೊತ್ತಾ?  ನಟ ಚಿರಂಜೀವಿ ಆಸ್ತಿ ವಿಷ್ಯ ಈಗ ತೆಲುಗು ಚಿತ್ರ ಜಗತ್ತಿನಲ್ಲಿ ಭಾರಿ ಸುದ್ದಿಯಾಗ್ತಿದೆ. ಹಾಗಾದ್ರೆ ಮೆಗಾ ಸ್ಪಾರ್ ಸಂಪಾದಿಸಿರೋ ಮೆಗಾ ಆಸ್ತಿ ಎಷ್ಟು ? ಚಿರಂಜೀವಿ ಅಷ್ಟೊಂದು ಶ್ರೀಮಂತನಾ?

ಟಾಲಿವುಡ್‌ನ ಶ್ರೀಮಂತ ನಟ ಹೆಗ್ಗಳಿಕೆ ಪಡೆದ ಚಿರಂಜೀವಿ..!
ಚಿರಂಜೀವಿ ಟಾಲಿವುಡ್‌ ಮೆಗಾ ಫ್ಯಾಮಿಲಿಯ ಹೆಮ್ಮೆ.  ಅಪಾರ ಅಭಿಮಾನಿಗಳನ್ನು ಹೊಂದಿರೋ ಸ್ಟಾರ್ ನಟ ಚಿರಂಜೀವಿಗೆ 69 ವರ್ಷ ವಯಸ್ಸು. 35 ವರ್ಷಗಳಿಂದ ಬಣ್ಣದ ಜಗತ್ತಿನಲ್ಲಿರುವ ನಟ 25 ವರ್ಷದಿಂದ ತೆಲುಗು ಚಿತ್ರರಂಗವನ್ನು ಆಳುತ್ತಿದ್ದು, ಇದುವರೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.

ಶಾರುಖ್ ಖಾನ್ ನಿಂದ ಅಮಿತಾಬ್ ಬಚ್ಚನ್ ವರೆಗೆ: ಸಾವಿನ ವದಂತಿಗೆ ಒಳಗಾದ ಸೆಲೆಬ್ರಿಟಿಗಳು

ಭರತನಾಟ್ಯದಲ್ಲಿ ಪರಿಣತಿ ಹೊಂದಿದ್ದ ಚಿರಂಜೀವಿ ತೆಲುಗು ಪ್ರೇಕ್ಷಕರಿಗೆ ಬ್ರೇಕ್ ಡ್ಯಾನ್ಸ್ ಪರಿಚಯಿಸಿದರು. ಹಂತ ಹಂತವಾಗಿ ಮುನ್ನಡೆದ ಚಿರಂಜೀವಿ ಸೂಪರ್ ಸ್ಟಾರ್ ನಟ ಆ ಬಳಿಕ ಮೆಗಾಸ್ಟಾರ್ ಆದರು. ಭಾರತದಲ್ಲಿ ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಟ ಚಿರಂಜೀವಿ. ಗ್ಯಾಂಗ್ ಲೀಡರ್ ಚಿತ್ರದ ಯಶಸ್ಸಿನ ನಂತರ ಚಿರಂಜೀವಿ ಸಂಭಾವನೆ ಕೋಟಿ ರೂಪಾಯಿ ದಾಟಿತು. ಅಮಿತಾಭ್ ಬಚ್ಚನ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಎಂದು ವರದಿ ಪ್ರಕಟವಾಗಿತ್ತು.

ಈ ವೃತ್ತಿಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿರುವುದು ಮಾತ್ರವಲ್ಲ, ತೆಲುಗಿನ ಜನತೆಗೆ ರಕ್ತನಿಧಿ ಮತ್ತು ನೇತ್ರನಿಧಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ.  ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಮತ್ತು ವೆಂಕಟೇಶ್ ದಶಕಗಳ ಕಾಲ ಟಾಪ್ ಸ್ಟಾರ್ಸ್ ಆಗಿ ಮೆರೆದರು. ಈಗಿನ ಸ್ಟಾರ್ ನಟರಿಗೆ ಪೈಪೋಟಿ ನೀಡುತ್ತಿರುವ ಏಕೈಕ ಹಿರಿಯ ನಟ ಚಿರಂಜೀವಿ ಮಾತ್ರ. ಅವರು ಒಂದು ಸಿನಿಮಾಗೆ ರೂ. 45 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಚಿರಂಜೀವಿ ದೇಶದಲ್ಲೇ ಅತ್ಯಂತ ಶ್ರೀಮಂತ ನಟ ಎನ್ನಲಾಗುತ್ತದೆ. ಅಭಿಮಾನಿಗಳ ಜೊತೆಗೆ ನೂರಾರು ಕೋಟಿ ಹಣವನ್ನೂ ಜೇಬಿಗಿಳಿಸಿಕೊಂಡಿದ್ದಾರೆ. ಇಂತಹ ಚಿರಂಜೀವಿ ಈಗ ಟಾಲಿವುಡ್ ಚಿತ್ರ ಜಗತ್ತಿನ ಶ್ರೀಮಂತ ನಟ ಅನ್ನೋ ಹೆಗ್ಗಳಿಕೆ ಪಡೆದಿದ್ದಾರೆ.

 ಐಶ್ವರ್ಯಾ ರೈಗೆ ಮೊಂಡುತನವಿದೆ ಎಂದ ಸಹೋದರ ಆದಿತ್ಯ ರೈ!

ಮೆಗಾ ಸ್ಟಾರ್ ಈಗ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?
ಚಿರಂಜೀವಿಗೆ 69 ವರ್ಷ ವಯಸ್ಸಾದ್ರು ಚಾರ್ಮ್, ಖದರ್ ಮಾತ್ರ ಕಮ್ಮಿಯಾಗಿಲ್ಲ. ದಕ್ಷಿಣ ಭಾರತದ ನಟರಾದ ರಜನಿಕಾಂತ್, ಕಮಲ್ ಹಾಸನ್, ಮೋಹನ್‌ಲಾಲ್, ಮಮ್ಮುಟ್ಟಿಯಂತ ದಿಗ್ಗಜರಂತೆ ಚಿರಂಜೀವಿ ಕೂಡ ಗಳಿಕೆಯಲ್ಲಿ ಟಾಪ್‌ಗೆ ಬಂದಿದ್ದಾರೆ. ಇತ್ತೀಚಿನವರಗೆ ಚಿರಂಜೀವಿ ಒಟ್ಟು  ಆಸ್ತಿ  ಬರೋಬ್ಬರಿ 1650 ಕೋಟಿ ಎಂದು ವರದಿಯಾಗಿತ್ತು. ಆದರೆ ಈಗ  ಅಂದಾಜಿನ ಪ್ರಕಾರ ಚಿರಂಜೀವಿ ಆಸ್ತಿ ಮೌಲ್ಯ ರೂ. 2 ಸಾವಿರ ಕೋಟಿ ಎನ್ನಲಾಗುತ್ತಿದೆ. ಹಲವು ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಫಾರ್ಮ್ ಹೌಸ್:
ಚಿರಂಜೀವಿ ಬಳಿ ಪ್ರೈವೆಟ್ ಜೆಟ್ ಇದೆ. ಐಶಾರಾಮಿ ಬಂಗಲೆಗಳಿಗೆ ಫಾರ್ಮ್ ಹೌಸ್‌ ಇದೆ. ಕೋಟಿ ಕೋಟಿ ಬೆಲೆ ಬಾಳೋ ಕಾರುಗಳಿದೆ. ಇದರ ಜೊತೆಗೆ ಚಿನ್ನ ಬೆಳ್ಳಿ ವಜ್ರ ವೈಡೂರ್ಯವಿದೆ. ಮೆಗಾ ಸ್ಟಾರ್ 100 ಕೋಟಿ  ಬೆಲೆ ಬಾಳು ಮನೆಯಲ್ಲಿ ವಾಸವಾಗಿದ್ದಾರೆ. ತೆಲುಗು  ಸಿನಿ ದಿಗ್ಗಜರ ತಾಣವಾಗಿರುವ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ 28 ಕೋಟಿ ರೂಪಾಯಿ ಮೌಲ್ಯದ ಬಂಗಲೆಯೊಂದನ್ನ ಹೊಂದಿದ್ದಾರೆ.  ಚಿರಂಜೀವಿ ಕೇವಲ ಹೈದರಾಬಾದ್‌ನಲ್ಲಿ ಮಾತ್ರ ಆಸ್ತಿ ಹೊಂದಿಲ್ಲ.  ಬೆಂಗಳೂರಿನಲ್ಲೂ ಫಾರ್ಮ್ ಹೌಸ್ ಹೊಂದಿದ್ದಾರೆ. ದೇವನಹಳ್ಳಿ ಸಮೀಪ ಹಲವು ವರ್ಷಗಳ ಹಿಂದೆ ಫಾರ್ಮ್ ಹೌಸ್ ಖರೀದಿಸಿದ್ದಾರೆ. ಆಗಾಗ ಫ್ಯಾಮಿಲಿ ಸಮೇತ ಭೇಟಿ ಮಾಡುತ್ತಾರೆ. ಇಲ್ಲಿ ಇಡೀ ಫ್ಯಾಮಿಲಿ ಸೇರಿ ಹಬ್ಬಗಳನ್ನು ಸೆಲೆಬ್ರೆಟ್ ಮಾಡುತ್ತಾರೆ. ಅವರ ಮಗಳ ಎರಡನೇ ಮದುವೆಯನ್ನು ಇಲ್ಲೇ ಮಾಡಿದ್ದರು. ಇನ್ನು ಚೆನ್ನೈನಲ್ಲಿ ಕೂಡ ಮನೆಗಳು ಇವೆ.

ದುಬಾರಿ ಕಾರುಗಳ ಒಡೆಯ ಮೆಗಾ ಕುಟುಂಬದ ದೊರೆ!
ಚಿರಂಜೀವಿ ಬಳಿ ದುಬಾರಿ ಕಾರುಗಳಿವೆ. 9 ಕೋಟಿ ರೂಪಾಯಿ ಮೊತ್ತದ ರಾಲ್ಸ್ ರಾಯ್ಸ್ ಫಾಂಟಮ್, 1.2 ಕೋಟಿ ರೂಪಾಯಿ ವೆಚ್ಚದ ರೇಂಜ್ ರೋವರ್,  2.5 ಕೋಟಿ ರೂಪಾಯಿ ವೆಚ್ಚದ ಮರ್ಸಿಡೀಸ್ ಬೆನ್ ಎಎಂಜಿ, 90 ಲಕ್ಷ ಮೌಲ್ಯದ ಟೊಯೋಟಾ ಲಾಂಡ್ ಕೂಸರ್  ಇದೆ. ಇವಿಷ್ಟೇ ಅಲ್ಲಿ 190 ಕೋಟಿ ರೂಪಾಯಿ ವೆಚ್ಚದ ಪ್ರೈವೆಟ್ ಜೆಟ್ ಕೂಡ ಇವರ ಬಳಿಯಿದೆ. ಒಟ್ಟಿನಲ್ಲಿ 1650 ಕೋಟಿ ಒಡೆಯನಾಗೋ ಮೂಲಕ ಚಿರಂಜೀವಿ ಸೌತ್ ಸಿನಿ ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

Latest Videos
Follow Us:
Download App:
  • android
  • ios