ನಿಮ್ಮ ಹತ್ರ ಡೇಂಜರಸ್ ಪುರುಷರಿದ್ರೆ ನನ್ನ ಹತ್ರ ಡೇಂಜರಸ್ ಮಹಿಳೆಯರಿದ್ದಾರೆ: ರಾಜಮೌಳಿಗೆ RGV ಟಾಂಗ್!
ಆರ್‌ಆರ್‌ಆರ್ ಸಿನಿಮಾ ನೋಡಿ ಮೆಚ್ಚಿದ ಆರ್‌ಜಿವಿ. ನನ್ನ ಬಳಿ ನಿಮಗಿಂತ ಡೇಂಜರಸ್ ಹೆಂಗಸರಿದ್ದಾರೆ ಎಂದು ನಿರ್ದೇಶಕ.
ಟಾಲಿವುಡ್ ಕಾಂಟ್ರವರ್ಷಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಅಕ್ಟೀವ್. ಸಿನಿಮಾ ಪ್ರಚಾರಕ್ಕಿಂತ ಹೆಚ್ಚಾಗಿ ಕಾಂಟ್ರವರ್ಸಿ ಕ್ರಿಯೇಟ್ ಮಾಡಿಕೊಳ್ಳುವ ನಿರ್ದೇಶಕ ಈಗ ಸ್ಟಾರ್ ಡೈರೆಕ್ಟರ್ ಎಸ್‌ಎಸ್ ರಾಜಮೌಳಿಗೆ ಟಾಂಗ್ ಕೊಟ್ಟಿದ್ದಾರೆ. ಒಂದು ದಿನ ಸಿನಿಮಾ ಸೂಪರ್ ಆಗಿದೆ ಎಂದು ಹೇಳುವ ನಿರ್ದೇಶಕ ಮತ್ತೊಂದು ದಿನ ನಿಮಗಿಂತ ಸೂಪರ್ ಆಗಿರುವವರು ನನ್ನ ಜೊತೆಗಿದ್ದಾರೆ ಎಂದಿದ್ದಾರೆ. ಇದು ಹೇಗೆಂದರೆ ಸುದ್ದಿನೂ ಆಗಬೇಕು ಕಾಂಟ್ರವರ್ಸಿನೂ ಆಗಬೇಕು.........
ಹೌದು! ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್‌ಟಿಆರ್ ಒಟ್ಟಾಗಿ ನಿಂತಿರುವ ಫೋಟೋ ಹಾಗೂ ಆರ್‌ಜಿವಿ, ನೈನಾ ಮತ್ತು ಅಪ್ಸರಾ ರಾಣಿ ಒಟ್ಟಾಗಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. 'ರಾಜಮೌಳಿ ಸರ್ ನಿಮ್ಮ ಹತ್ತಿರ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ರೀತಿ ಡೇಂಜರಸ್ ಗಂಡಸರಿದ್ದರೆ ನನ್ನ ಹತ್ತಿರುವೂ ಡೇಂಜರಸ್ ಮಹಿಳೆಯರು ಅಂದ್ರೆ ನೈನಾ ಮತ್ತು ಅಪ್ಸರಾ ಇದ್ದಾರೆ ಗೊತ್ತಾ' ಎಂದು ಟ್ಟೀಟ್ ಮಾಡಿದ್ದಾರೆ.
ಆರ್‌ಜಿವಿ ಮಾತುಗಳಿಂದ ಕೆಲವರು ಗರಂ ಆಗಿದ್ದಾರೆ ಇನ್ನೂ ಕೆಲವರು ಕನ್ಫ್ಯೂಸ್ ಆಗಿದ್ದಾರೆ. 'ನೀವು ರಾಜಮೌಳಿಗಿಂತ 10,000 ಕಿಲೋಮೀಟರ್ ದೂರದಲ್ಲಿದ್ದೀರ.ರಾಜಮೌಳಿ ಜನರಿಗೆ ಸಿನಿಮಾ ಮಾಡುತ್ತಾರೆ ಅದರೆ ನೀವು ನಿಮ್ಮ ನಿರ್ಮಾಣ ಸಂಸ್ಥೆ ಸುದ್ದಿಯಲ್ಲಿರಬೇಕು ಎಂದು ಸಿನಿಮಾ ಮಾಡ್ತೀರ. ರಾಜಮೌಳಿ ದೇಶಾದ್ಯಂತ ವೀಕ್ಷಕರಿದ್ದಾರೆ ನಿಮ್ಮ ಸಿನಿಮಾ ನೋಡುವುದಕ್ಕೆ ಯಾರು ಬರುತ್ತಾರೆ? 100 ಅಂಕದಲ್ಲಿ ರಾಜಮೌಳಿ 98 ಪಡೆದುಕೊಂಡರೆ ನೀವು ಕೇವಲ 39 ಪಡೆಯುತ್ತೀರ. ನಿಮಗೂ ಮಹಾರಾಜಮೌಳಿಗೂ ವ್ಯತ್ಯಾಸವಿದೆ ಗುರು' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!
ಆರ್‌ಆರ್‌ಆರ್ ಅಪ್ಡೇಟ್:
ಆರ್ ಆರ್ ಆರ್ ಸಿನಿಮಾ ಹಿಂದಿಯಲ್ಲಿ ಈಗಾಗಲೇ 100 ಕೋಟಿ ರೂಪಾಯಿ(100 crore) ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾಗಿ 5ನೇ ದಿನವೂ ಕಲೆಕ್ಷನ್ ಅಬ್ಬರ ಮುಂದುರೆದಿದೆ. ಹೀಗೆ ಮುಂದುವರೆದರೆ ಬಾಹುಬಲಿ ಕಲೆಕ್ಷನ್ ಬೀಟ್ ಮಾಡಲಿದೆ ಎನ್ನಲಾಗುತ್ತಿದೆ. ಹಿಂದಿಯ ಕಲೆಕ್ಷನ್ ಮಾಹಿತಿಯನ್ನು ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶನ್ ಶೇರ್ ಮಾಡಿದ್ದಾರೆ. ಹಿಂದಿಯಲ್ಲಿ ಒಟ್ಟು 107.59 ಕೋಟಿ ರೂ. ಕಲೆಕ್ಷನ್ ಮಾಡಿದೆ. ಶುಕ್ರವಾರ 20.07 ಕೋಟಿ, ಶನಿವಾರ 24 ಕೋಟಿ ರೂ, ಭಾನುವಾರ 31.50 ಕೋಟಿ ರೂ, ಸೋಮವಾರ 17 ಕೋಟಿ ರೂ, ಮಂಗಳವಾರ 15.02 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ತರಣ್ ಆದರ್ಶ್ ತಿಳಿಸಿದ್ದಾರೆ.
ಹಿಂದಿ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ದಾಟಿದ ರಾಜಮೌಳಿ ಅವರ 3ನೇ ಸಿನಿಮಾ ಇದಾಗಿದೆ. ಬಾಹುಬಲಿ 1 ಮತ್ತು 2 ಬಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಆರ್ ಆರ್ ಆರ್ ಸಿನಿಮಾ ಕೂಡ 100 ಕೋಟಿ ಕ್ಲಬ್ ಸೇರಿದೆ. ಇನ್ನು ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಬಾಲಿವುಡ್ ನಲ್ಲಿ ಇದು ಮೊದಲ ಶತಕವಾಗಿದೆ. ಮಾಹಿತಿಗಳ ಪ್ರಕಾರ ಆರ್ ಆರ್ ಆರ್ ಇದುವರೆಗೂ 600 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.
RGV ನಿರ್ದೇಶನದ ಲೆಸ್ಬಿಯನ್ ಸಿನಿಮಾದ ಬಿಸಿಬಿಸಿ ಟ್ರೇಲರ್ ರಿಲೀಸ್ಆರ್ಜಿವಿ ಸಿನಿಮಾ:
ರಾಮ್ ಗೋಪಾಲ್ ವರ್ಮಾ (Ramgopal Varma) ನಿರ್ದೇಶನದ 'ಖತ್ರಾ ಡೇಂಜರಸ್' ಸಿನಿಮಾ ನಮ್ಮ ದೇಶದ ಮೊದಲ ಲೆಸ್ಬಿಯನ್ ಕ್ರೈಮ್ ಆಕ್ಷನ್ ಡ್ರಾಮಾ (Lesbian crime Action drama) ಸಿನಿಮಾ ಎಂದು ಹೇಳಲಾಗಿದೆ. ಲೆಸ್ಬಿಯನ್ ಪ್ರಣಯವನ್ನು ಪ್ರದರ್ಶಿಸುವ ಈ ಸಿನಿಮಾ ಪೂರ್ತಿ ಸಲಿಂಗಪ್ರೇಮದ ರೋಮ್ಯಾಂಟಿಕ್ (Romantic) ದೃಶ್ಯಗಳಿಂದ ತುಂಬಿದೆಯಂತೆ. ಅಡಲ್ಟ್ ಕಂಟೆಂಟ್ (Adult content) ನಿಂದಾಗಿ ಈ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದೆ.ಟ್ರೇಲರ್ ನೋಡಿದರೆ, ಚಿತ್ರದಲ್ಲಿ ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸುವ, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯಗಳಿರುವುದು ಕಾಣುತ್ತದೆ. ಇದೊಂದು ಅಡಲ್ಟ್ ಚಿತ್ರ.