ಕಾಲಿವುಡ್ ವರ್ಸಟೈಲ್‌ ಆ್ಯಕ್ಟರ್‌, ಡೈರೆಕ್ಟರ್‌ ಹಾಗೂ ಪ್ರೊಡ್ಯೂಸರ್‌ ರಾಘವ್‌ ಲಾರೆನ್ಸ್‌ ಕಿರಿಯ ಸಹೋದರ ಎಲ್ವಿನ್ ಅಲಿಯಾಸ್ ವಿನೋದ್ ಮೇಲೆ ಲೈಂಗಿಕ ಕಿರುಕುಳ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.

ಎರಡು ವರ್ಷಗಳ ಹಿಂದೆ ಚಿತ್ರೀಕರಣದ ವೇಳೆ ಕಿರುತೆರೆ ಹಾಗೂ ಕಿರಿಯ ಕಲಾವಿದೆಯನ್ನು ಭೇಟಿ ಮಾಡಿದ ಎಲ್ವಿನ್ಸ್ 'ನನ್ನನು ಪ್ರೀತಿಸು' ಎಂದು ಪೀಡಿಸುತ್ತಿದ್ದರಂತೆ. ಎಲ್ವಿನ್‌ ನೀಡುತ್ತಿದ್ದ ಮಾನಸಿಕ ಕಾಟದಿಂದ ನೊಂದ ನಟಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರ ಜೊತೆ ವಿನೋದ್ ಕೈ ಜೋಡಿಸಿ, ನಟಿ ವಿರುದ್ಧ ಪ್ರತಿ ದೂರು ದಾಖಲಿಸಿ, ಕಂಬಿ ಎಣಿಸುವಂತೆ ಮಾಡಿದ್ದರು.

1 ಕೋಟಿ ಕೊಟ್ಟು ಅಳಿಯನ ಮರ್ಯಾದಾ ಹತ್ಯೆ ಮಾಡಿಸಿದ್ದ ಉದ್ಯಮಿ ರಾವ್‌ ಆತ್ಮಹತ್ಯೆ!

ಅನ್ಯಾಯವಾಗಿ 21 ದಿನಗಳ ಕಾಲ ಕಸ್ಟಡಿಯಲ್ಲಿ ಕಾಲ ಕಳೆದ ನಟಿ ಪೊಲೀಸರಿಂದಲೂ ಕಿರುಕುಳ ಅನುಭವಿಸಿದ್ದೇನೆ, ಜೈಲಿನಿಂದ ಹೊರ ಬಂದ ನಂತರವೂ ರಾಘವ್‌ ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.