ಹೈದರಾಬಾದ್‌[ಮಾ.09]: ತನ್ನ ಮಗಳನ್ನು ಮದುವೆ ಆಗಿದ್ದ ದಲಿತ ವ್ಯಕ್ತಿಯನ್ನು ಮರ್ಯಾದಾ ಹತ್ಯೆ ಮಾಡಿಸಿದ್ದ ಆರೋಪ ಹೊತ್ತಿದ್ದ ತೆಲಂಗಾಣದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಾರುತಿ ರಾವ್‌, ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಇಲ್ಲಿನ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಲಿತ ಕ್ರೈಸ್ತ ಯುವಕ ಕುಮಾರ್‌ ಎಂಬಾತ ರಾವ್‌ ಪುತ್ರಿಯನ್ನು ಪ್ರೀತಿಸಿ ವಿವಾಹ ಆಗಿದ್ದ. ಆದರೆ, ಈ ಮದುವೆಗೆ ವಿರೋಧ ವ್ಯಕ್ತಿಪಡಿಸಿದ್ದ ರಾವ್‌ ಬಾಡಿಗೆ ಹಂತಕರಿಗೆ 1 ಕೋಟಿ ರು. ಸುಪಾರಿ ನೀಡಿ 2018 ಸೆ.14ರಂದು ಅಳಿಯನನ್ನು ಕೊಲೆ ಮಾಡಿಸಿದ್ದ. ಆದರೆ, ಈ ಪ್ರಕರಣದಲ್ಲಿ ಮಗಳೇ ತಂದೆಯ ವಿರುದ್ಧ ದೂರು ನೀಡಿದ್ದಳು.

ಹಣ, ಉದ್ಯೋಗ ಏನೂ ಬೇಡ, ತಂದೆಯನ್ನು ಗಲ್ಲಿಗೇರಿಸಿ ಸಾಕು

ಪ್ರಕರಣದಲ್ಲಿ ತಾನು ದೋಷಿ ಆಗುತ್ತೇನೆ ಎಂದು ತಿಳಿದು ಮಗಳು ಮತ್ತು ಪತ್ನಿಗೆ ಕ್ಷಮಾಪಣೆ ಪತ್ರ ಬರೆದು ರಾವ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರುತಿ ರಾವ್‌ ಗುಜರಾತ್‌ ಮಾಜಿ ಗೃಹ ಸಚಿವ ಹರೆನ್‌ ಪಾಂಡ್ಯಾ ಕೊಲೆ ಪ್ರಕರಣದ ಆರೋಪಿ ಆಗಿದ್ದರು.