ತೆಲುಗು ಚಿತ್ರರಂಗದ ಯಂಗ್ ನಟ ನಿತಿನ್‌ ಮತ್ತು ಬಹು ದಿನಗಳ ಗೆಳತಿ ಶಾಲಿನಿ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಛಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ಮದುವೆ ಏಪ್ರಿಲ್‌ನಲ್ಲಿ ನಿಗಧಿ ಮಾಡಲಾಗಿತ್ತು ಆದರೆ ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಮುಂದೂಡಿದ್ದರು ಆದರೀಗ ದಿನಾಂಕ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.

ಯಶಸ್ಸಿನ ಜೊತೆ ಮೊದಲ ಪ್ರೀತಿಯನ್ನೇ ಮರೆತ ಪ್ರಿಯಾಂಕಾ ಚೋಪ್ರಾ

ಮದುವೆ ಪ್ಲಾನ್:

ಮದುವೆಯನ್ನು ಅದ್ಧೂರಿಯಾಗಿ ಪ್ಲಾನ್ ಮಾಡಿದ 'ಭೀಷ್ಮ' ಚಿತ್ರದ ನಟ ಲಾಕ್‌ಡೌನ್‌ ನಿಯಮಗಳಿಂದ ಸರಳವಾಗಿ ಹಸೆಮಣೆ ಏರಬೇಕಿದೆ. ಡೆಸ್ಟಿನೇಷನ್‌ ವೆಡಿಂಗ್ ಎಂದು ದುಬೈನಲ್ಲಿ ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಬೇಕೆಂದು ಇಚ್ಛಿಸಿದ್ದರು ಆದರೆ  ಈಗ ಎಲ್ಲೂ ಪ್ರಯಾಣ ಮಾಡಲಾಗದ ಕಾರಣ ತಮ್ಮ ಫಾರ್ಮ್‌ಹೌಸ್‌ಲ್ಲಿ ಮದುವೆ ಕಾರ್ಯಕ್ರಮಗಳನ್ನು ನಡೆಸುವುದಾಗಿ ತೀರ್ಮಾನ ಮಾಡಿದ್ದಾರಂತೆ.

ಆಷಾಢ ಮಾಸ ಮುಗಿದ ನಂತರ ಹೈದರಾಬಾದ್  ಫಾರ್ಮ್ಹೌಸ್ನಲ್ಲಿ ನಡೆಯುವ ಮದುವೆಯಲ್ಲಿ ಎರಡೂ ಕುಟುಂಬಕ್ಕೂ ಆಪ್ತರಾಗಿರುವವರನ್ನು ಮಾತ್ರ ಕರೆಯುವ ಯೋಚನೆಯಲ್ಲಿದೆ ನಿತಿನ್ ಕುಟುಂಬ ಇದರ ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ನನ್ನು ಬಳಸಲಾಗುತ್ತದೆ.

ಶಾರುಖ್ ಖಾನ್ ಕೊನೆ ಮಗ ಅಬ್ರಾಮ್‌ನ ಬಾಡಿಗೆ ತಾಯಿ ಒಬ್ಬ ಹಿಂದು

ರಶ್ಮಿಕಾ ಮಂದಣ್ಣ ಜೊತೆ ಭೀಷ್ಮ ಚಿತ್ರದಲ್ಲಿ ಅಭಿನಯಿಸಿದ ನಂತರ ನಿತಿನ್ 'ರಂಗ್ ದೇ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.