ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗೇಂದ್ರಬಾಬು ಪುತ್ರಿ ನಿಹಾರಿಕಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಈ ಹಿಂದೆ ನಿಹಾರಿಕಾ ಪ್ರಭಾಸ್‌ ಅಥವಾ ವಿಜಯ್ ದೇವರಕೊಂಡ ಅವರನ್ನು  ಮದುವೆಯಾಗುತ್ತಾರೆಂಬ ಸುದ್ದಿ ಹರಿದಾಡುತ್ತಿತ್ತು. ಆ ಗಾಸಿಪ್‌ಗೆ ತಲೆ ಕೆಡಿಸಿಕೊಳ್ಳದ ನಿಹಾರಿಕಾ ಈಗ ಎಲ್ಲರಿಗೂ ಸ್ಪಷ್ಟನೇ ನೀಡಿದ್ದಾರೆ.

ಹೌದು! ಇನ್‌ಸ್ಟಾಗ್ರಾಂನಲ್ಲಿ ನಿಹಾರಿಕಾ ಹುಡುಗನೊಬ್ಬನನ್ನು ತಬ್ಬಿಕೊಂಡು ಮುತ್ತಿಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ ನಿಹಾರಿಕಾ ಮುಖ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಿತು. ಅನೇಕ ಸಿನಿಮಾ ನಟ-ನಟಿಯರು ಹುಡುಗ ಯಾರೆಂದು ಗೆಸ್ ಮಾಡಲು ಆರಂಭಿಸಿದ್ದರು. ಕಾಮೆಂಟ್‌ನಲ್ಲೂ ಅಭಿಮಾನಿಗಳು ಫೋಟೋದಲ್ಲಿರುವುದು ಪ್ರಭಾಸ್‌ ಎನ್ನುತ್ತಿದ್ದರು. ಇದೀಗ ನಿಹಾರಿಕಾ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

 ಗುಂಟೂರಿನ ಐಜಿಪಿ ಜೆ ಪ್ರಭಾಕರ್‌ ಅವರ ಪುತ್ರ ಚೈತನ್ಯ ಜೆ ಅವರನ್ನು ನಿಹಾರಿಕಾ ವರಸಿಲಿದ್ದಾರೆ. ಚೈತನ್ಯ ಅವರು ವೃತ್ತಿಯಲ್ಲಿ ಬ್ಯುಸಿನೆಸ್‌ ಸ್ಟ್ರಾಟಜಿಸ್ಟ್‌ ಆಗಿದ್ದಾರೆ. ಪೊಲೀಸ್ ಅಧಿಕಾರಿ ಪ್ರಭಾಕರ್‌ ಹೇಳುವಂತೆ ಇದು ಅರೇಂಜ್ ಮ್ಯಾರೇಜ್‌ ಆಗಿದ್ದು ನಿಹಾರಿಕಾ ಹಾಗೂ ಚೈತನ್ಯ ಇಬ್ಬರು ಕುಟುಂಬದವರ ಒಪ್ಪಿಗೆಯಿಂದಲೇ ಈ ಮದುವೆ ಮಾತುಕತೆ ನಡೆದಿದೆ. ಕಳೆದ ವಾರ ಎರಡೂ ಕುಟುಂಬದವರು ಮಾತುಕತೆ ನಡೆಸಿ ನಿಶ್ಚಿತಾರ್ಥವನ್ನು ಆಗಸ್ಟ್‌ನಲ್ಲಿ ಹಾಗೂ ಮದುವೆಯನ್ನು ಮುಂದಿನ ವರ್ಷ ಫೆಬ್ರವರಿಯಲ್ಲಿ ಮಾಡುವುದಕ್ಕೆ  ನಿರ್ಧರಿಸಿದ್ದಾರೆ.

ಅನುಷ್ಕಾ ಅಲ್ವಂತೆ ಪ್ರಭಾಸ್‌ ಕೈ ಹಿಡಿಯಲಿರುವ ನಟಿ ! ಯಾರಪ್ಪಾ ಈ ಅದೃಷ್ಟ ದೇವತೆ ?

ಖಾಸಗಿ ಪತ್ರಿಕೆಯೊಂದರಲ್ಲಿ ಮಾತನಾಡಿದ ನಿಹಾರಿಕಾ 'ನಾನು  ಜೀವನ ಪೂರ್ತಿ ಸಂತೋಷದಿಂದ ಇರಲು ಬಯಸುತ್ತಿದ್ದ ಹುಡುಗನನ್ನು ಹುಡುಕಿಕೊಂಡಿದ್ದೇನೆ.  ನಾವಿಬ್ಬರು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಆದರೆ ಅಭಿಮಾನಿಗಳಿಗೋಸ್ಕರ ಪೋಟೋ ಹಾಕಿ ಅಧಿಕೃತ ಮಾಡಿರುವುದು. ಹುಡುಗನ ಬಗ್ಗೆ ಜಾಸ್ತಿ ಏನೂ ಹೇಳುವುದಿಲ್ಲ ಆದರೆ ಈ ಕ್ಷಣದಲ್ಲಿ ನಾನು ತುಂಬಾನೇ ಥ್ರಿಲ್ ಆಗಿರುವೆ' ಎಂದು ಮಾತನಾಡಿದ್ದಾರೆ.