'ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೇಳುತ್ತಾರೆ ಒಬ್ಬ ನಟನ 25ನೇ ಸಿನಿಮಾ ಅಂದ್ರೆ ತುಂಬಾ ಸ್ಪೆಷಲ್‌ ಅಂತ ಆದರೆ ನನ್ನ ಲೈಫ್‌ನಲ್ಲಿ ಇದು ಡಿಫರೆಂಟ್ ಆಗಿದೆ' ಎಂದು ನಗುತ್ತಾ ಮಾತು ಶುರು ಮಾಡಿದ ನಟ ನಾನಿ ತಮ್ಮ ಚಿತ್ರದ ಬಗ್ಗೆ ಅಭಿಮಾನಿಗಳಿಗಿರುವ ಕುತೂಹಲದ ಬಗ್ಗೆ ಮಾತನಾಡಿದ್ದಾರೆ.

ಬೆಸ್ಟ್ ವಿಲನ್ ಆಗೋಕು ಸೈ ಎಂದು ಕಿಚ್ಚ ಪ್ರೂವ್ ಮಾಡಿದ ಸಿನಿಮಾಗಳಿವು

ಇಂದ್ರಗಾಂತಿ ಮೋಹನ್ ಕೃಷ್ಣ ನಿರ್ದೇಶನದ 'ವಿ' ಸಿನಿಮಾ ಇದೇ ವರ್ಷ ಮಾರ್ಚ್‌ನಲ್ಲಿ ರಿಲೀಸ್‌ ಆಗಬೇಕಿತ್ತು ಆದರೆ ಕೊರೋನಾ ಲಾಕ್‌ಡೌನ್‌ ನಿಂದ ಚಿತ್ರಮಂದಿರಗಳು ಬಂದ್ ಆಗಿರುವ ಕಾರಣ ರಿಲೀಸ್‌ ಆಗಲು ತಡವಾಗಿತ್ತು. ಅಭಿಮಾನಿಗಳನ್ನು ಹೆಚ್ಚು ದಿನ ಕಾಯಿಸಬಾರದು ಎಂದು ಚಿತ್ರತಂಡ ನಿರ್ಧರಿಸಿ ಓಟಿಟಿಯಲ್ಲಿ ರಿಲೀಸ್ ಮಾಡುವ ಮನಸ್ಸು ಮಾಡಿದೆ. 

'

ಚಿತ್ರಮಂದಿರಗಳಲ್ಲಿ ನನಗೆ ಫರ್ಸ್ಟ್ ಡೇ ಫರ್ಸ್ಟ್‌ ಶೋ ಸಿನಿಮಾ ನೋಡಬೇಕು ಹಾಗೂ ಜನರ ರಿಯಾಕ್ಷನ್ ನೋಡಬೇಕು ಎಂಬ ಆಸೆ ತುಂಬಾ ಇದೆ. ಈ ಕಾರಣಕ್ಕೆ ನಾನು ನನ್ನ ಅನೇಕ ಸಿನಿಮಾಗಳ ಮೊದಲ ಶೋ ಮಿಸ್ ಮಾಡುವುದಿಲ್ಲ. 'ವಿ' ಸಿನಿಮಾವನ್ನು ತೆರೆ ಮೇಲೆ ನೋಡಿದರೆ ಸೂಪರ್ ಆಗಿರುತ್ತದೆ ಆದರೆ ಈಗ ಬೇರೆ ದಾರಿಯಿಲ್ಲದೆ ಓಟಿಟಿಯಲ್ಲಿ ರಿಲೀಸ್ ಮಾಡುತ್ತಿದ್ದೀವಿ. ಆದರೂ ಏನೋ ಒಂದು ತರ ಹೊಸ ಅನುಭ ಆಗುತ್ತಿದೆ. ನನಗೆ ಮಾತ್ರವಲ್ಲ ನನ್ನ ಇಡೀ ತಂಡಕ್ಕೆ ಇದು ಸ್ಪೆಷಲ್‌ ಫೀಲ್. ಮುಂದೆ ನನ್ನ ವೃತ್ತಿ ಜೀವನದಲ್ಲಿ ಅತಿ ಮುಖ್ಯವಾದ 25ನೇ ಸಿನಿಮಾ ಹೇಗಿತ್ತು ಎಂದು ಹೇಳಲು ನನಗೆ ಒಂದು ಕಥೆ ಸಿಕ್ಕಿದೆ' ಎಂದು ಹೇಳಿಕೊಂಡಿದ್ದಾರೆ.

ಉದ್ಯಮಿ ಜೊತೆ ಎಂಗೇಜ್‌ ಆದ ಬಹುಭಾಷಾ ನಟಿ, ಫಿಟ್ನೆಸ್‌ ಫ್ರೀಕ್‌!

'ವಿ'ಒಂದು ಸೂಪರ್ ಕಾಪ್ ಸಿನಿಮಾ. ಆತನಿಗೆ ಎದುರಾಗುವ ಪ್ರತಿ ಚಾಲೆಂಜ್‌ಗಳನ್ನು ಹೇಗೆ ಬಗೆಹರಿಸುತ್ತಾನೆ. ಚಿತ್ರದಲ್ಲಿ ನಾನಿ ಜೊತೆ ನಿವೇದಿತಾ ಥಾಮಸ್, ಸುಧೀರ್‌ ಬಾಬು ಹಾಗೂ ಅದಿತಿ ರಾವ್‌ ಹೈದರಿ ಅಭಿನಯಿಸಿದ್ದಾರೆ.

' ಇದೊಂದು ಆಕ್ಷನ್ ಸಿನಿಮಾ ಆಗಿರುವ ಕಾರಣ ನಾನು ತುಂಬಾ ಸಾಹಸ ಸನ್ನಿವೇಶಗಳನ್ನು ಮಾಡಿರುವೆ. ತುಂಬಾ ಟ್ರ್ಯಾವಲ್ ಮಾಡಿದ್ದೀವಿ. ಸಿನಿಮಾ ನೋಡುತ್ತಿರುವ ವೀಕ್ಷಕರು ಮುಂದಿನ ಸೀನ್ ಏನಾಗಿರುತ್ತದೆ ಎಂದು ಗೆಸ್‌ ಮಾಡಬೇಕು ಅಷ್ಟರ ಮಟ್ಟಕ್ಕೆ ಕಥೆ ತಯಾರಿ ನಡೆದಿದೆ. ರಿಲೀಸ್ ಆದಮೇಲೆ ಅಭಿಮಾನಿಗಳ ರಿಯಾಕ್ಷನ್ ತಿಳಿದುಕೊಳ್ಳಲು ಕಾಯುತ್ತಿರುವೆ' ಎಂದಿದ್ದಾರೆ ಚಿತ್ರದ ನಟ.

ಚಿತ್ರರಂಗಕ್ಕೆ ಕಾಲಿಡುವ ಮುನ್ನ ನಾನಿ ಅನೇಕ ಸಿನಿಮಾಗಳಲ್ಲಿ ಸಹ ನಿರ್ದೇಶಕ ಹಾಗೂ ಆರ್‌ಜೆ ಆಗಿ ಕೆಲಸ ಮಾಡುತ್ತಿದ್ದರು. ನಂದಿನಿ ರೆಡ್ಡಿ ನಿರ್ದೇಶನ ಟಿವಿ ಜಾಹಿರಾತಿನಲ್ಲಿ ಕಾಣಿಸಿಕೊಂಡ ನಂತರ ನಾನಿಗೆ ಚಿತ್ರರಂಗದಿಂದ ಅವಕಾಶಗಳು ಹುಡುಕಿಬಂದಿದ್ದವು ಎಂದು ನಾನಿ ಅನೇಕ ಬಾರಿ ಹೇಳಿಕೊಂಡಿದ್ದಾರೆ .