ಲಸಿಕೆ ಪಡೆದು ಸೋಷಿಯಲ್ ಮೀಡಿಯಾ ಮೂಲಕ ಅದರ ಮಹತ್ವ ತಿಳಿಸಿಕೊಟ್ಟ ನಟ ಮಹೇಶ್ ಬಾಬು.

ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಟ-ನಟಿಯರು ಲಸಿಕೆ ಪಡೆದು ಅದರ ಮಹತ್ವದ ಬಗ್ಗೆ ಸಂದೇಶ ಸಾರುತ್ತಿದ್ದಾರೆ. ಅದರಂತೆ ಟಾಲಿವುಡ್‌ ಹ್ಯಾಂಡ್ಸಮ್ ಮಹೇಶ್ ಬಾಬು ಕೋವಿಡ್‌19 ಲಸಿಕೆ ಪಡೆದಿದ್ದಾರೆ. ಟ್ಟಿಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹೇಶ್ ಬಾಬು ನುಡಿದ ಭವಿಷ್ಯ; ವಾಟ್ಸ್‌ ಆ್ಯಪ್‌ ಚಾಟ್ ವೈರಲ್! 

ಮಹೇಶ್ ಟ್ಟೀಟ್:
'ಕೋವಿಡ್ ಲಸಿಕೆ ಪಡೆದಿರುವೆ. ದಯವಿಟ್ಟು ನೀವೂ ಲಸಿಕೆ ಪಡೆಯಿರಿ. ಕೋವಿಡ್‌19 ಎರಡನೇ ಅಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿದೆ. ಈ ಸಮಯದಲ್ಲಿ ಲಸಿಕೆ ಪಡೆಯುವುದು ಉತ್ತಮ. ಮೇ 1ರಿಂದ 18 ವಯಸ್ಸಿನ ಮೇಲ್ಪಟ್ಟವರು ಲಸಿಕೆ ಪಡೆಯಬಹುದು. ಎಲ್ಲವೂ ಜಾಗೃತರಾಗಿರಿ,' ಎಂದು ಮಹೇಶ್ ಬರೆದಿದ್ದಾರೆ.

ತಿಂಗಳ ಮಗುವಿನ ಪ್ರಾಣ ಉಳಿಸಿದ ನಟ ಮಹೇಶ್ ಬಾಬು 

ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಬಿದಿದ್ದು ಮಹೇಶ್ ಬಾಬು ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಪುತ್ರಿ ಸಾರಿಕಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಕಾರಣ ಡ್ಯಾಡಿ ಜೊತೆ ಮನೆಯಲ್ಲಿ ಏನೆಲ್ಲಾ ಮಾಡುತ್ತಾಳೆ ಎಂದು ಶೇರ್ ಮಾಡಿಕೊಳ್ಳುತ್ತಾಳೆ. ಇನ್ನು ಸರ್ಕಾರು ಪಾರಿ ಪಾಟು' ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ವಿದೇಶದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. ಮಹೇಶ್‌ಗೆ ಮೊದಲ ಬಾರಿ ಕೀರ್ತಿ ಸುರೇಶ್ ಜೋಡಿಯಾಗಿಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Scroll to load tweet…