ತಮಿಳು ಚಿತ್ರರಂಗದ ಯುವ ನಿರ್ದೇಶಕ ಎ.ವಿ. ಅರುಣ್ ಪ್ರಸಾದ್‌ ಅಲಿಯಾಸ್‌ ವೆಂಕಟ್‌ ಪಕ್ಕರ್ ಕೊಯಮತ್ತೂರಿನ ಮೆಟ್ಟುಪಾಳ್ಯಂ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಲಾರಿಯೊಂದಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅರುಣ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಿರಿಯ ನಟಿ ಹಾಗೂ ಜಾನಪದ ಗಾಯಕಿ ಮುನಿಯಮ್ಮ ನಿಧನ!

ಅರುಣ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆಂದು ಖ್ಯಾತ ನಿರ್ದೇಶಕ ಶಂಕರ್‌ ಅವರಿಗೆ ಸಹ ನಿರ್ದೇಶಕನಾಗಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮದೇ ಸಿನಿಮಾವೊಂದು ಮಾಡಬೇಕೆಂದು ಕಷ್ಟದಲ್ಲಿದ್ದ ನಿರ್ಮಾಪಕರನ್ನು ಹುಡುಕಿ '4G'ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದರೆ ಚಿತ್ರ  ರಿಲೀಸ್‌ಗೂ ಮುನ್ನವೇ ಅರುಣ್‌ ಇಹಲೋಕ ತ್ಯಜಿಸಿರುವುದು ತಂಡದರಿಗೆ ನೋವುಂಟು ಮಾಡಿದೆ. 

ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್‌ ಇನ್ನಿಲ್ಲ!

ಅರುಣ್ ಇನ್ನಿಲ್ಲ ಎಂಬ ವಿಚಾರವನ್ನು ನಿರ್ದೇಶಕ ಶಂಕರ್‌ ಬಹಿರಂಗ ಪಡಿಸಿದ್ದರು. ' ಈ ಸಾವಿನ ದಿಢೀರ್ ಸುದ್ದಿ ತಿಳಿದು ಹೃದಯ ಬಡಿತವೇ ನಿಂತಂತಾಗಿದೆ. ಯುವ ನಿರ್ದೇಶಕ  ಹಾಗೂ ನನ್ನ ಎಕ್ಸ್‌ - ಸಹ ನಿರ್ದೇಶಕ ಅರುಣ್‌ ಇನ್ನಿಲ್ಲ. ನೀನು ಪಾಸಿಟಿವ್‌ ಹಾಗೂ ಶ್ರಮ ಜೀವಿ. ನಿಮ್ಮ ಕುಟುಂಬದವರಿಗೆ ಆ ಭಗವಂತ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ,' ಎಂದು ಟ್ಟೀಟ್‌ ಮಾಡಿದ್ದಾರೆ.

ಪ್ರತಿಭಾವಂತ ಡಾನ್ಸ್‌ ಮಾಸ್ಟರ್‌ ಮೈಕಲ್‌ ಮಧುಗೆ ಅಕ್ಷರ ನಮನ!

4G ಸಿನಿಮಾ 2016ರಲ್ಲಿ ರಿಲೀಸ್ ಆಗಬೇಕಿತ್ತು ಆದರೆ ಆರ್ಥಿಕ ಸಮಸ್ಯೆಗಳಿಂದ ಮುಂದೂಡಲಾಗಿದ್ದು ಇದುವರೆಗೂ ರಿಲೀಸ್‌ ಮಾಡಲು ಆಗಿಲ್ಲ.