ಕೋವಿಡ್‌19ನಿಂದಾಗಿ ಇಷ್ಟು ದಿನಗಳ ಕಾಲ ಮನೆಯಲ್ಲಿ ಟೈಂ ಕಳೆಯುತ್ತಿದ್ದ ಮೆಗಾ ಸ್ಟಾರ್ ಚಿರಂಜೀವಿ ಈಗ ಶೂಟಿಂಗ್‌ಗೆ ಮರಳಿದ್ದಾರೆ. 65 ವರ್ಷದ ನಟನನ್ನು ಡಿಫರೆಂಟ್‌ ಲುಕ್‌ನಲ್ಲಿ ನೋಡಿ ಶಾಕ್‌ ಆಗಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಉತ್ತರ.

"

ಮೆಗಾ ಸ್ಟಾರ್‌ ಚಿರಂಜೀವಿ ಫ್ಯಾಮಿಲಿಯ ಒಂದು ಝಲಕ್‌

ಚಿರು ಪೋಸ್ಟ್:
'ಅರ್ಬನ್ ಮಾಂಕ್. ನಾನು ಸನ್ಯಾಸಿ ರೀತಿಯಲ್ಲಿ ಚಿಂತಿಸುತ್ತಿದ್ದೀನಾ?' ಎಂದು ಚಿರಂಚೀವಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ನಟ ಸುಧಾಕರ್‌ 'ಹೌದು ಸರ್ ಸೂಪರ್ ಲುಕ್' ಎಂದರೆ, ಕನ್ನಡದ ಹೆಬ್ಬುಲಿ ನಟಿ ನಿಶ್ವಿಕಾ 'ಸೂಪರ್' ಎಂದಿದ್ದಾರೆ. ಆದರೆ ಪುತ್ರ ರಾಮ್‌ಚರಣ್ ಮಾತ್ರ 'ಅಪ್ಪ, ನಾನು ಏನ್ ನೋಡ್ತಿದ್ದೀನಿ. ಇದು ನಿಜಾನಾ?'ಎಂದು ಬರೆದು ಹೊಸ ಲುಕ್ ನೋಡಿ ಶಾಕ್ ಆಗಿದ್ದಾರೆ.

 

 
 
 
 
 
 
 
 
 
 
 
 
 

#UrbanMonk Can I think like a monk?

A post shared by Chiranjeevi Konidela (@chiranjeevikonidela) on Sep 10, 2020 at 7:25am PDT

ಆದರೆ, ಚಿರಂಜೀವಿ ಈ ಲುಕ್ ಪರ್ಮನೆಂಟ್‌ ಅಲ್ಲ. ತನ್ನ ಮುಂದಿನ ಚಿತ್ರ 'ಆಚಾರ್ಯ'ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂನ 'ಲೂಸಿಫರ್' ರಿಮೇಕ್‌ ಎನ್ನಲಾಗಿದೆ. ಚಿತ್ರದ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ.

"