ಸುಮಾರು 16 ವರ್ಷಗಳಿಂದ ನಟ ನವದೀಪ್‌ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಅನುಭವಿಸಿದ್ದಾರೆ. ಮಿಡಲ್ ಕ್ಲಾಸ್ ಮನೆತನದ ಇವರಿಗೆ ನಿಜಕ್ಕೂ ಹೀರೋ ಆಗುವ ಕನಸು ಇರಲಿಲ್ಲವಂತೆ. ಆದರೆ ಆ ಒಂದು ದಿನ ಆ ಒಬ್ಬ ವ್ಯಕ್ತಿ ಹೇಳಿದ ಮಾತುಗಳು ಇಲ್ಲಿಗೆ ತಂದು ನಿಲ್ಲಿಸಿದೆ ಎಂದಿದ್ದಾರೆ.

ನಿಹಾರಿಕಾ ಡೆಸ್ಟಿನೇಷನ್ ವೆಡ್ಡಿಂಗ್; ಉದಯ್‌ಪುರದಲ್ಲಿ ನಟಿಯ ಐಷಾರಾಮಿ ಮದುವೆ? 

ತಮ್ಮ ನೆಚ್ಚಿನ ನಟನ ಸಿನಿಮಾಗಳನ್ನು ಫಸ್ಚ್ ಡೇ ಫಸ್ಟ್ ಶೋ ನೋಡುತ್ತಿದ್ದ ನವದೀಪ್‌ ಪಲ್ಲಪೋಲು ಅಪ್ಪಟ ಸಿನಿ ಪ್ರೇಮಿ. ಒಮ್ಮೊಮ್ಮೆ ಫಸ್ಟ್ ಶೋನಲ್ಲಿ ಕುಣಿದು ಕುಪ್ಪಳಿಸಿ ಶರ್ಟ್‌ ಹರಿದುಕೊಂಡು ಮನೆಗೆ ಬಂದಿರುವ ಹಿಸ್ಟರಿ ಕೂಡ ಇದೆಯಂತೆ. ಹೀಗೆ ಒಂದು ದಿನ ಸಿನಿಮಾ ನೋಡಿ ಮನೆಗೆ ಹಿಂದಿರುಗುವಾದ ಆಟೋ ಡ್ರೈವರ್‌ ಒಬ್ಬ 'ಸರ್‌ ನೀವು ಏಕೆ ನಟನಾಗಬಾರದು? ನಿಮಗೆ ಎಲ್ಲಾ ಕ್ವಾಲಿಟೀಸ್‌ ಇವೆ,' ಎಂದು ಹೇಳಿದ್ದರಂತೆ.

ಆಟೋ ಡ್ರೈವರ್ ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿದ ನವದೀಪ್ ವರ್ಕೌಟ್‌ ಶುರು ಮಾಡಿ ಕೆಲವೇ ದಿನಗಳಲ್ಲಿ ಫೋಟೋ ಶೂಟ್‌ ಮಾಡಿಸಿದರಂತೆ. ಈ ಸಮಯದಲ್ಲಿ ಅವರಿಗೆ ಸಿಕ್ಕ ಸಿನಿಮಾವೇ 'ಜೈ'.  2004ರಲ್ಲಿ ತೆರೆ ಕಂಡ ಜೈ ಸಿನಿಮಾ ನವದೀಪ್‌ ವೃತ್ತಿಯಲ್ಲಿ ಬಿಗ್ ಬ್ರೇಕ್‌ ಕೊಟ್ಟಿತ್ತು. ಅಲ್ಲಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುವ ಮೂಲಕ ಹಿಟ್ ನಟರಾಗಿ ಗುರುತಿಸಿಕೊಂಡರು. ನವದೀಪ್‌ ಸಿನಿಮಾ ಮಾತ್ರವಲ್ಲ,  ಹಲವು ಟಿವಿ ರಿಯಾಲಿಟಿ ಶೋಗಳನ್ನೂ ನಿರೂಪಣೆ ಮಾಡುತ್ತಾರೆ.  

ಪೋಟೋಗಳು : ಬಾಲಿವುಡ್‌ನ ಫೇಮಸ್‌ ಅತ್ತೆ ಸೊಸೆ ಜೋಡಿ ನೋಡಿ! 

ಸುಮಾರು 16 ವರ್ಷಗಳಿಂದ ಸಿನಿಮಾ ಜಗತ್ತಿನಲ್ಲಿ ನವದೀಪ್ ಮಿಂಚುತ್ತಿರುವುದಕ್ಕೆ ಆ ಆಟೋ ಡ್ರೈವರ್‌ಗೆ ಕ್ರೆಡಿಟ್ ನೀಡುತ್ತಾರಂತೆ.