ಅಲ್ಲು ಕುಟುಂಬದ ನಾಲ್ಕನೇ ಜನರೇಷನ್ ಚಿತ್ರರಂಗಕ್ಕೆ ಎಂಟ್ರಿ. ನಟಿ ಸಮಂತಾ ಅಕ್ಕಿನೇನಿ ಜೊತೆ 10 ದಿನಗಳ ಕಾಲ ಚಿತ್ರೀಕರಣ.

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಚಿತ್ರರಂಗದ ಬಹು ಬೇಡಿಕೆಯ ನಟ. ಒಂದು ಸಿನಿಮಾ ಮಾಡುವುದಕ್ಕೆ ಸುಮಾರು 3-5 ಕೋಟಿ ಸಂಭಾವನೆ ಪಡೆಯುವ ಈ ನಟ ಅರ್ಜುನ್ ಅವರ ಪುತ್ರಿ ಇದೀಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅರ್ಜುನ್ ಪತ್ನಿ ಸ್ನೇಹಾ ಸೋಷಿಯಲ್ ಮೀಡಿಯಾದಲ್ಲಿ ಅರ್ಹಾ ಪೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡಿ, ಚಿಕ್ಕ ವಯಸ್ಸಿಗೆ ಸ್ಟಾರ್ ಗಿರಿ ತಂದಿದ್ದಾರೆ. ಇದೀಗ ಅರ್ಹಾ ಸಿನಿ ಎಂಟ್ರಿ ಬಗ್ಗೆ ಇಡೀ ಟಾಲಿವುಡ್ ಮಂದಿ ಸಂತಸ ವ್ಯಕ್ತ ಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗಳ ಹುಟ್ಟು ಹಬ್ಬಕ್ಕೆ ಅಲ್ಲು ಅರ್ಜುನ್‌ ಕೊಟ್ಟ ವಿಶೇಷ ಉಡುಗೊರೆ ಇದು!

'ಆರ್ಹಾ ಶಕುಂತಲಂ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ನಾವು ಹೆಮ್ಮೆ ಪಡುವಂತೆ ಮಾಡುತ್ತಾಳೆ ಎಂದು ನನಗೆ ಗೊತ್ತಿದೆ,' ಎಂದು ಅಲ್ಲು ಸಿರೀಶ್ ಬರೆದರೆ. 'ಟೇಕ್‌ ಇಲ್ಲದೇ ಮೊದಲ ಶಾಟ್ ತೆಗೆದುಕೊಂಡಳು. ಆಕೆ ಡೈಲಾಗ್ ಹೇಳುವ ರೀತಿ ಅದ್ಭುತ. ಸೂಪರ್ ಸ್ಟಾರ್ ಆಗುವುದರಲ್ಲಿ ಅನುಮಾವಿಲ್ಲ. ದೇವರು ಒಳ್ಳೆಯದು ಮಾಡಲಿ,' ಎಂದು ಸಮಂತಾ ಬರೆದಿದ್ದಾರೆ.

ಅಲ್ಲು ರಾಮಾಲಿಂಗಯ್ಯ ಸುಮಾರು 1000ಕ್ಕೂ ಹೆಚ್ಚು ಸಿನಿಮಾ ಅಭಿನಯಿಸಿದ್ದಾರೆ. ಅವರ ಪುತ್ರ ಅಲ್ಲು ಅರವಿಂದ್ ಟಾಲಿವುಡ್ ನಿರ್ಮಾಪಕ. ಅವರ ಮೊಮ್ಮಗ ಅಲ್ಲು ಅರ್ಜುನ್ ಬಹು ಬೇಡಿಕೆಯ ನಟ, ಇದೀಗ ಅವರ ಮೊಮ್ಮಗಳು ಅಲ್ಲು ಅರ್ಹಾ ಬಾಲನಟಿ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರೀಕರಣದಲ್ಲಿ ಅರ್ಹಾರಿಗೆ ನಟಿ ಸಮಂತಾ ಸಪೋರ್ಟಿವ್ ಆಗಿರುವ ಕಾರಣ ಅಲ್ಲು ಕುಟುಂಬ ಸೋಷಿಯಲ್ ಮೀಡಿಯಾದಲ್ಲಿ ಧನ್ಯವಾದಗಳನ್ನು ತಿಳಿಸಿದೆ.

View post on Instagram