ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಶ್ರಮಿ ಮೀರಿ, ಹೋರಾಡುತ್ತಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬಗ್ಗೆ ಪದೇ ಪದೇ ವೈಯಕ್ತಿಕವಾಗಿ ಹಾಗೂ ಸಮುದಾಯದ ವಿರುದ್ಧ ಟೀಕಿಸುತ್ತಿರುವ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಸಂಸದ ರಘುರಾಮ್‌ ಕೃಷ್ಣನ್ ರಾಜು ವಿರುದ್ಧ ನಟಿ ಶ್ರೀರೆಡ್ಡಿ ತಿರುಗಿ ಬಿದ್ದಿದಾರೆ. 

ಮಾಫಿಯಾ ಬಗ್ಗೆ ಮಾತಾಡ್ತೀನಿ ಎಂದ ಶ್ರೀರೆಡ್ಡಿ: ಯಾವಾಗಲೋ ಡ್ರಗ್ಸ್ ತಗೊಂಡೋರಿಗೆ ಈಗ ಢವಢವ 

ಜಗನ್‌ ಮೋಹನ್‌ ಬಗ್ಗೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಅದೆಷ್ಟೋ ಮಂದಿಗೆ ಕೋಪ ಬರುತ್ತದೆ. ಜಗನ್‌ರನ್ನು ದೇವರೆಂದು ಅನೇಕರು ಪೂಜಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಜಗನ್ ಮಾಡುತ್ತಿರುವ ಕೆಲಸಗಳನ್ನು ಪ್ರತಿಯೊಬ್ಬರೂ ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿ ಬಗ್ಗೆ ನೀವು ಮಾತನಾಡುವುದು ಸರಿ ಅಲ್ಲ, ಎಂದು ವಿಡಿಯೋ ಮೂಲಕ ನಟಿ ಶ್ರೀರೆಡ್ಡಿ ಸಂಸದರಿಗೆ ಉತ್ತರ ನೀಡಿದ್ದಾರೆ. 

ಶ್ರೀರೆಡ್ಡಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಂಸದ ರಘುರಾಮ್‌ 'ಒಂದು ಸಮುದಾಯಕ್ಕೆ ಬೆಂಬಲ ನೀಡುತ್ತಾ ನನ್ನನ್ನು ನಿಂದಿಸುತ್ತಿರುವ ಬ್ಲೂಫಿಲಂ ನಟಿ ಶ್ರೀರೆಡ್ಡಿ, ನೀನೆಂಥವಳು ಎಂಬುದು ಎಲ್ಲರಿಗೂ ಗೊತ್ತಿದೆ, ' ಎಂದಿದ್ದಾರೆ.  ಇದಕ್ಕೆ ತಿರುಗೇಟು ನೀಡಲೇ ಬೇಕು ಎಂದು ಶ್ರೀರೆಡ್ಡಿ ಸಂಸದರ ವಿರುದ್ಧ ಸರಣಿ ಪೋಸ್ಟ್‌ ಹಾಕಿದ್ದಾರೆ. 'ಆತ ರಾಜದ್ರೋಹಿ, ನಂಬಿಕೆ ದ್ರೋಹಿ, ಕಳ್ಳ, ಹುಡುಗಿಯರ ಬ್ರೋಕರ್. ಜಗನ್ ಅಣ್ಣನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾ ನಿಮ್ಮ ಸರ್ವನಾಶವನ್ನು ನೀವೇ ಬರ ಮಾಡಿಕೊಂಡಿದ್ದೀರಾ,' ಎಂದು ಬರೆದಿದ್ದಾರೆ.