ಜಾತಿ ರಟ್ನಾಲು ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಭಾಸ್ ಭಾಗವಹಿಸಿದ್ದರು. ಇದು ನಾಗ್ ಅಶ್ವಿನ್ ನಿರ್ದೇಶಿಸಿ ನಿರ್ಮಿಸುತ್ತಿರುವ ಸಿನಿಮಾ. ಇದರಲ್ಲಿ ಯುವ ಮುಖಗಳಾದ ನವೀನ್ ಪೊಲಿಶೆಟ್ಟಿ, ಪ್ರಿಯದರ್ಶಿನಿ, ರಾಹುಲ್ ರಾಮಕೃಷ್ಣ ಮೊದಲಾದವರನ್ನು ಪ್ರೋತ್ಸಾಹಿಸಿ ತೆರೆ ಮೇಲೆ ತರಲಾಗಿದೆ.

ಇದರಲ್ಲಿ ಹೊಸ ಮುಖ ಫರಿಯಾ ಅಬ್ದುಲ್ಲ ಕೂಡಾ ಇದ್ದಾರೆ. ಆದ್ರೆ ಈಗ ಸುದ್ದಿಯಾಗಿರೋದು ಫರಿಯಾ ಅಬ್ದುಲ್ಲ ಅವರ ಹೈಟ್. ಫರಿಯಾ ಹೈಟ್ ನೋಡಿ ಅಚ್ಚರಿಗೊಳಗಾಗಿದ್ದಾರೆ ಪ್ರಭಾಸ್.

ನಟಿ ಕೃತಿ ಶೆಟ್ಟಿ ಟ್ರೆಂಡ್ : ವೈರಲ್ ಆಗ್ತಿರೋ ದಾವಣಿ ಹುಡುಗಿ ಇವಳೇ

ಎಷ್ಟುದ್ದ ಇದ್ದಾಳೆ ಈಕೆ.. ಇದು ನಿಜವಾ ಅಥವಾ ಶೂಸ್ ಅಥವಾ ಹೀಲ್ಸ್ ಹಾಕಿದ್ದಾಳಾ ಎಂದು ಕೇಳಿದ್ದಾರೆ. ಬಾಹುಬಲಿ ನಟ ಎದ್ದು ನಿಂತು ನಟಿಯ ಜೊತೆ ತಮ್ಮ ಹೈಟ್ ಮ್ಯಾಚ್ ಆಗುತ್ತಾ ಎಂದು ಚೆಕ್ ಮಾಡಿದ್ದಾರೆ.

ಅಂತೂ ಪ್ರಭಾಸ್ ಹೈಟ್ ಮಾಡೋ ಹುಡುಗಿ ಸಿಕ್ಕಳು ನೋಡಿ. ಇಲ್ಲಿ ತನಕ ಅನುಷ್ಕಾ ಮಾತ್ರ ಪ್ರಭಾಸ್ ಹೈಟ್ ಮ್ಯಾಚ್ ಮಾಡ್ತಾಳೆ ಎಂದುಕೊಂಡಿದ್ದರು ಎಲ್ಲರೂ.