ಒಂದಲ್ಲ, ಎರಡಲ್ಲ ಆರು ಬಾರಿ ಗರ್ಭಪಾತ ಆಯ್ತು; ನೋವಿನ ಕಥೆ ಹಂಚಿಕೊಂಡ ನಟಿ
ಖ್ಯಾತ ನಟಿ, ಮೊದಲ ಸಿನಿಮಾದಲ್ಲಿ ನಂದಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ ಖ್ಯಾತ ನಟಿ ಅಮಾನಿ ಸಂದರ್ಶನದಲ್ಲಿ ತಾಯ್ತನಕ್ಕಾಗಿ ತಾವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
ಹೈದರಾಬಾದ್: ತೆರೆಯ ಮೇಲೆ ಕಾಣಿಸಿಕೊಳ್ಳುವ ಚೆಂದದ ಮುಖಗಳ ಹಿಂದೆಯೂ ಕಣ್ಣೀರಿನ ಕಥೆ ಇರುತ್ತದೆ. ಕಲಾವಿದರ ಬದುಕು ತೆರೆಯ ಮೇಲೆ ಕಾಣುವಷ್ಟು ಸುಂದರವಾಗಿರಲ್ಲ ಅನ್ನೋದು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹೇಳುವ ಮಾತು. ನಾವು ಸಹ ಸಾಮಾನ್ಯರಂತೆಯೇ ಇರುತ್ತೇವೆ. ಆದ್ರೆ ಜನರಿಗೆ ಮಾತ್ರ ಇವರು ಲಕ್ಷ ಲಕ್ಷ ಸಂಪಾದನೆ ಮಾಡ್ತಾರೆ, ಇವರಿಗೇನು ಕಷ್ಟ ಎಂದು ಮಾತನಾಡುತ್ತಾರೆ ಎಂದು ಹಲವು ಕಲಾವಿದರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ಹೇಳುತ್ತಿರುತ್ತಾರೆ. ಇದೀಗ ಟಾಲಿವುಡ್ ಅಂಗಳದ ಖ್ಯಾತ ನಟಿ, ಮೊದಲ ಸಿನಿಮಾದಲ್ಲಿ ನಂದಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ ಖ್ಯಾತ ನಟಿ ಅಮಾನಿ ಸಂದರ್ಶನದಲ್ಲಿ ತಾಯ್ತನಕ್ಕಾಗಿ ತಾವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
90ರ ದಶಕದಲ್ಲಿ ಅಮಾನಿ ಬಹುಬೇಡಿಕೆಯ ನಟಿಯಾಗಿದ್ದರು. ಇವರು ಸಿನಿಮಾದಲ್ಲಿ ನಟಿಸಿದ್ರೆ ಚಿತ್ರ ಯಶಸ್ಸು ಎಂಬ ಟಾಕ್ ಟಾಲಿವುಡ್ ಅಂಗಳದಲ್ಲಿತ್ತು. ಹಾಗಾಗಿ ನಿರ್ಮಾಪಕರ ಆಯ್ಕೆಯ ಪಟ್ಟಿಯಲ್ಲಿ ನಟಿ ಅಮಾನಿ ಹೆಸರು ಮೊದಲಿಗೆ ಇರುತ್ತಿತ್ತಿ. 1993ರಲ್ಲಿ ಜಂಬಲಕಿಡಿ ಸಿನಿಮಾ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟ ಅಮಾನಿ, ಮುಟ್ಟಿದೆಲ್ಲಾ ಚಿನ್ನ ಎಂಬಂತಾಗಿತ್ತು. ಮೊದಲ ಚಿತ್ರದ ಅಮೋಘ ನಟನೆಗೆ ನಂದಿ ಪ್ರಶಸ್ತಿ ವಿಜೇತರಾಗಿದ್ದರು. ಜಂಬಲಕಿಡಿ ಬಳಿಕ ಮಿಸ್ಟರ್ ಪೆಲ್ಲಂ, ಕನ್ನಯ್ಯ ಕಿಟ್ಟಯ್ಯ, ಶುಭ ಲಗ್ನಂ, ಶುಭ ಸಂಕಲ್ಪಂ ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ.
ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಬಾರಿ ಗರ್ಭಪಾತವಾಯ್ತು
ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿರುವಾಗಲೇ ಬ್ರೇಕ್ ತೆಗೆದುಕೊಂಡ ಅಮಾನಿ, ವೈಯಕ್ತಿಕ ಬದುಕಿನತ್ತ ಗಮನ ನೀಡಿದರು. ಆದರೆ ಅಮಾನಿ ಅವರಿಗೆ ತಾಯಿ ಆಗೋದು ಅಷ್ಟು ಸುಲಭವಾಗಿರಲಿಲ್ಲ. ಗರ್ಭ ಧರಿಸಿದರೂ ನಿಲ್ಲುತ್ತಿರಲಿಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಬಾರಿ ಗರ್ಭಪಾತವಾಯ್ತು ಎಂಬ ನೋವಿನ ವಿಷಯವನ್ನು ಅಮಾನಿ ಹೇಳಿಕೊಂಡಿದ್ದಾರೆ. ನಟಿಯಾಗಿರೋ ಕಾರಣ ನಾನು ಆರೋಗ್ಯ ಮತ್ತು ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದೆ. ಆದರೂ ನನ್ನ ದೇಹದಲ್ಲಿ ರಕ್ತದ ಕೊರತೆ ಉಂಟಾಗಿತ್ತು ಎಂದಿದ್ದಾರೆ.
ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ
ಪದೇ ಪದೇ ಗರ್ಭಪಾತ ಆಗುತ್ತಿರುವ ಹಿನ್ನೆಲೆ ವೈದ್ಯರನ್ನು ಬದಲಾಯಿಸಿದೆ. ದೇಹದಲ್ಲಿ ರಕ್ತದ ಕೊರತೆಯ ಕಾರಣ ಗರ್ಭಪಾತ ಆಗುತ್ತಿದೆ ಎಂದು ಹೇಳಿದರು. ಏಳನೇ ಬಾರಿ ಗರ್ಭ ಧರಿಸಿದಾಗ ವೈದ್ಯರ ಸಲಹೆ ಮೇರೆಗೆ ಜೇವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡೆ. ಕೊನೆಗೆ ಏಳನೇ ಬಾರಿ ಗರ್ಭ ಧರಿಸಿದ ನಂತರ ನಾನು ತಾಯಿಯಾದೆ ಎಂಬ ವಿಚಾರವನ್ನು ನಟಿ ಅಮಾನಿ ಹಂಚಿಕೊಂಡಿದ್ದಾರೆ.
ಬ್ರೇಕ್ ಬಳಿಕ ಪೋಷಕ ನಟಿಯಾಗಿ ಕಮ್‌ಬ್ಯಾಕ್
ಮದುವೆ, ಮಕ್ಕಳಿಗಾಗಿ ಸಿನಿಮಾದಿಂದ ಹಲವು ವರ್ಷ ಬ್ರೇಕ್ ತೆಗೆದುಕೊಂಡಿದ್ದ ಅಮಾನಿ ಈಗ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಇದೀಗ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ನಟಿಸುತ್ತಿದ್ದಾರೆ. ಅಮಾನಿಯವರ ಕಥೆ ಕೇಳಿದ ಬಳಿಕ ನೀವು ತುಂಬಾ ಗಟ್ಟಿಗಿತ್ತಿ ಎಂದು ಹೇಳಿದ್ದು, ಮುಂದಿನ ಸಿನಿ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಪ್ರೀತಿಗಾಗಿ ಸಾಯುವತನಕವೂ ಹೋರಾಡ್ತಾರಂತೆ ಮಲೈಕಾ! 1,2,3... ಯಾರ ಜೊತೆ ಕೇಳ್ತಿದ್ದಾರೆ ನೆಟ್ಟಿಗರು!