ಸದಾ ಒಂದಲ್ಲೊಂದು ಹೇಳಿಕೆ ನೀಡುವ ಮೂಲಕ ವಿವಾದಾ ಸೃಷ್ಟಿಸುವ ನಟ ಹಾಗೂ ಸಮಾಜ ಕಾರ್ಯಕರ್ತ ಪ್ರಕಾಶ್‌ ರಾಜ್‌ ಯಾವುದಾದರೂ ಒಂದು ವಿವಾದದಲ್ಲಿ ಸಿಲುಕಿಕೊಂಡು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅದೇ ನಟ ಮತ್ತೊಬ್ಬ ಕಲಾವಿದನ ನೆರವಿಗೆ ಧಾವಿಸಿದ್ದು, ಚಿತ್ರರಂಗದಲ್ಲಿ ದೊಡ್ಡ ಸುದ್ದಿಯಾಗಿದೆ. 

ಪ್ರಕಾಶ್‌ ರಾಜ್‌ ಮಾಡಿರುವ ಸಹಾಯದ ಬಗ್ಗೆ ತೆಲುಗು ಕಲಾವಿದ ರಾಜ ರವೀಂದ್ರ ಕೃತಜ್ಞತೆ ಹೇಳಿದ್ದಾರೆ. ಇತ್ತೀಚಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರವೀಂದ್ರ, ನಟ ಪ್ರಕಾಶ್‌ ರಾಜ್‌ ಅವರ ಸಹಾಯದ ಬಗ್ಗೆ ಮಾತನಾಡಿದ್ದಾರೆ. ಅವರ ಒಳ್ಳೆತನದ ಬಗ್ಗೆ ಸಂದರ್ಶನದಲ್ಲಿ ಮನಸಾರೆ ಹೊಗಳಿದ್ದಾರೆ.

ನಿರ್ಭಯಾ ಹಂತಕರ Hangmanಗೆ 1 ಲಕ್ಷ ರೂ; ನುಡಿದಂತೆ ನಡೆದ ಜಗ್ಗೇಶ್!

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡ ತೆಲುಗು ಖ್ಯಾತ ನಟನೊಬ್ಬ ಆತ್ಮಹತ್ಯೆಗೂ ಯತ್ನಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಕಾಶ್‌ ರವೀಂದ್ರ ಅವರನ್ನು ಸಂಪರ್ಕಿಸಿ, ಆ ಕಲಾವಿದನನ್ನು ಭೇಟಿ ಮಾಡಿದ್ದಾರೆ. ಆ ನಟ ಸುಮಾರು 50 ಲಕ್ಷ ರೂ. ಸಾಲ ಮಾಡಿಕೊಂಡು ಹಿಂದಿರುಗಿಸಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಇದರ ಬಗ್ಗೆ ತಿಳಿದು ಪ್ರಕಾಶ್‌ ತಕ್ಷಣವೇ 50 ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ.  

ಈಗ ಪ್ರಕಾಶ್‌ ನೀಡಿದ ಹಣದಿಂದ ಸಾಲಾ ತೀರಿಸಿಕೊಂಡು, ಹಿರಿಯ ಕಲಾವಿದರು ಆರಾಮ ಆಗಿದ್ದಾರಂತೆ. ಆದರೆ ಪ್ರಕಾಶ್‌ ಅವರಿಂದ 1 ರೂ.ವನ್ನೂ ವಾಪಸ್‌ ಪಡೆದಿಲ್ಲವಂತೆ.