ರೆಬಲ್ ಸ್ಟಾರ್ ಪ್ರಭಾಸ್ ಸೋಮವಾರ ಸುಮಾರು 1650 ಎಕರೆ ಅರಣ್ಯ ಭೂಮಿ ದತ್ತು ಪಡೆದಿದ್ದಾರೆ.  ತೆಲಂಗಾಣದ ನಗರ ಪ್ರದೇಶದ ಕಾಝಿಪಳ್ಳಿಯಲ್ಲಿ ಈ ಅರಣ್ಯ ಪ್ರದೇಶವಿದೆ.

ದುಂಡಿಗಲ್‌ನ ಹೊರ ರಿಂಗ್ ರೋಡ್‌ನಲ್ಲಿರುವ ಕಾಝಿಪಳ್ಳಿ ಮೀಸಲು ಅರಣ್ಯದ ಅಭಿವೃದ್ಧಿಗಾಗಿ 2 ಕೋಟಿ ರೈಪಾಯಿಯ ಚೆಕ್‌ನ್ನು ಪ್ರಭಾಸ್ ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ. ರಾಜ್ಯಸಭಾ ಸಂಸದ ಜೋಗಿನಪಳ್ಳಿ ಸಂತೋಷ್ ಕುಮಾರ್ ಹಾಗೂ ಅಣ್ಯ ಸಚಿವ ಅಲ್ಲೋಲ ಇಂದ್ರಕರಣ್ ರೆಡ್ಡಿ ಉಪಸ್ಥಿತರಿದ್ದರು. ರಾಜಕೀಯ ಮುಖಂಡರ ಜೊತೆ ನಗರ ಅರಣ್ಯ ಉದ್ಯಾನಕ್ಕಾಗಿ ಪ್ರಭಾಸ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ್ದಾರೆ.

ಜಿಮ್ ಟ್ರೈನರ್‌ಗೆ ದುಬಾರಿ ರೇಂಜ್ ರೋವರ್‌ ಕಾರು ಉಡುಗೊರೆ ನೀಡಿದ ನಟ ಪ್ರಭಾಸ್!

ಸಂತೋಷ್ ಕುಮಾರ್ ಅವರ ಗ್ರೀನ್ ಇಂಡಿಯಾ ಚಾಲೆಂಜ್ ಭಾಗವಾಗಿ ನಟ ಈ ಸವಾಲು ಸ್ವೀಕರಿಸಿ ಅರಣ್ಯ ಭೂಮಿ ದತ್ತು ಸ್ವೀಕರಿಸಿದ್ದಾರೆ. ಅರಣ್ಯ ಇಲಾಖೆ ಮೀಸಲು ಅರಣ್ಯದ ಸಣ್ಣ ಭಾಗವನ್ನು ನಗರ ಅರಣ್ಯ ಪಾರ್ಕ್ ಆಗಿ ಬದಲಾಯಿಸಲಿದೆ.

ಕಾಝಿಪಳ್ಳಿ ಮೀಸಲು ಅರಣ್ಯ:

ಕಾಝಿಪಳ್ಳಿ ಮೀಸಲು ಅರಣ್ಯ ಅಲ್ಲಿನ ಔಷಧ ಸಂಪತ್ತಿಗಾಗಿ ಫೇಮಸ್. ಇದು ಮೂರು ಕಂಪಾರ್ಟ್‌ಮೆಂಟ್ ರೀತಿಯಲ್ಲಿ ವಿಭಾಗಿಸಲಾಗಿದೆ. ಶೀಘ್ರದಲ್ಲಿಯೇ 1650 ಎಕರೆ ಭೂಮಿಯಲ್ಲಿ ಪರಿಸರ ಸ್ನೇಹಿ ಪಾರ್ಕ್ ನಿರ್ಮಾಣವಾಗಲಿದೆ. ಪಾರ್ಕ್ ಗೇಟ್‌ನಲ್ಲಿ ಟ್ರಾಕ್, ವ್ಯೂ ಪಾಯಿಂಟ್, ಮೆಡಿಕಲ್ ಪ್ಲಾಂಟ್ ಸೆಂಟರ್ ಇರಲಿದೆ.  ಇದು ಮೊದಲ ಹಂತದಲ್ಲಿ ನಿರ್ಮಾಣವಾಗಲಿದೆ.

I've taken the initiative to adopt and develop 1650 acres of Kazipalli Reserve Forest Block near Hyderabad. Having...

Posted by Prabhas on Monday, September 7, 2020