ಟೈಗರ್ ಶ್ರಾಫ್ ಅವರ ಸಹೋದರಿ ಕೃಷ್ಣ ಶ್ರಾಫ್ ಎಲ್ಲ ರೀತಿಯಿಂದಲೂ ಫ್ಯಾನ್ಸ್‌ಗಳಿಗೆ ಸರ್ಪೈಸ್ ಕೊಡುತ್ತಿರುತ್ತಾರೆ. ತಮ್ಮ ಪ್ರಾಕ್ಟೀಸ್ ಫಿಟ್ನೆಸ್‌ನಿಂದ ಎಲ್ಲೆಡೆ ಸುದ್ದಿ ಮಾಡುತ್ತಾರೆ ಈಕೆ.

ತನ್ನ ಸಹೋದರ ಟೈಗರ್ನಂತೆಯೇ, ಕೃಷ್ಣ ಭಿನ್ನ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರ ಇತ್ತೀಚಿನ ವೀಡಿಯೊ ನೋಡುಗರನ್ನು ಆಶ್ಚರ್ಯ ಪಡುವಂತೆ ಮಾಡುತ್ತದೆ, ಆಕೆ ನೆಲದ ಮೇಲೆ ಸ್ಪರ್ಶಿಸಿ 70 ಕಿ.ಗ್ರಾಂ ತೂಕವನ್ನು ಅವಳ ಭುಜದ ಮೇಲೆ ಕೇಕ್ ತುಂಡುಗಳಂತೆ ಎತಿದ್ದಾಳೆ.

ಬಿಗ್‌ಬಾಸ್ ಸ್ಟೇಜ್‌ನಲ್ಲಿ ಕೆಜಿಎಫ್ ಹಾಡಿಗೆ ಡ್ಯಾನ್ಸ್ ಮಾಡಿದ ಬಾಲಿವುಡ್ ನಟಿ

ವೀಡಿಯೊದಲ್ಲಿ ಆಕೆ ಭುಜದ ಮೇಲೆ ಹೆವಿವೇಯ್ಟ್ ತೆಗೆದುಕೊಳ್ಳುವುದನ್ನು ಕಾಣಬಹುದು ಮತ್ತು ಆಕೆಯ ಗೆಳತಿ ನಟಿ ದಿಶಾ ಪಟಾನಿ ಇದನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ವರ್ಕೌಟ್ ನಂತರ ಕೃಷ್ಣ ಭಾರ ಎತ್ತಿದಾಗ ಎಲ್ಲರೂ ಚಪ್ಪಾಳೆ ತಟ್ಟಿದ್ದಾರೆ. ಇದರಲ್ಲಿ ನಟಿ ದಿಶಾ ಪಠಾಣಿ ಕೂಡಾ ಇದ್ದರು. ಟೈಗರ್ ಶ್ರಾಫ್ ಜೊತೆ ಡೇಟ್ ಮಾಡ್ತಿರೋ ದಿಶಾ ಆತನ ಸಹೋದರಿ ಕೃಷ್ಣಾ ಜೊತೆಗೆ ಕ್ಲೋಸ್ ಇದ್ದಾಳೆ.