ಮೋದಿ ಎಡವಿದ್ದಾರೆ ಎಂದಿದ್ದ ನಟನ ಮಾತೇ ಬೇರೆ ವರಸೆ ಬದಲಾಯಿಸಿದ ಬಾಲಿವುಡ್ ನಟ

​​​​​​ದೆಹಲಿ(ಮೇ.14): ನಟ ಅನುಪಮ್ ಖೇರ್ ಅವರು ಹಿಂದಿಯಲ್ಲಿ ಆರು ಸಾಲಿನ ಕವಿತೆಯನ್ನು ಟ್ವೀಟ್ ಮಾಡಿದ್ದಾರೆ. ಮೋದಿ ಕುರಿತು ಅದನ್ನು ಸರಿ ಮಾಡೋ ಸ್ಪಷ್ಟ ಪ್ರಯತ್ನವು ಈ ಹಾಡಿನಲ್ಲಿ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ರೋಗವನ್ನು ನರೇಂದ್ರ ಮೋದಿ ಸರ್ಕಾರ ನಿರ್ವಹಿಸುತ್ತಿರುವುದನ್ನು ಟೀಕಿಸಿದ್ದ ನಟ ಈಗ ಹಠಾತ್ತನೆ ಹೊಗಳಲಾರಂಭಿಸಿದ್ದಾರೆ. ಕೆಲಸ ಮಾಡುವವರು ಮಾತ್ರ ತಪ್ಪುಗಳನ್ನು ಮಾಡುತ್ತಾರೆ. ಇತರರಲ್ಲಿ ಕೆಟ್ಟದ್ದನ್ನು ಹುಡುಕುತ್ತಾ ಸಮಯವನ್ನು ಕಳೆಯುವವರ ಜೀವನ ಬೇಗ ಕೊನೆಗೊಳ್ಳುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರತಿ ಬಾರಿ ಮೋದಿಯನ್ನು ಹೊಗಳೋ ಅನುಪಮ್ ಖೇರ್‌ನಿಂದ ಸರ್ಕಾರಕ್ಕೆ ತೀವ್ರ ತರಾಟೆ

ಎಲ್ಲೋ ಅವರು ಎಡವಿದ್ದಾರೆ. ಇಮೇಜ್ ಕ್ರಿಯೇಟ್ ಮಾಡುವುದಷ್ಟೇ ಅಲ್ಲ ಎಂದು ಅವರು ಅರ್ಥಮಾಡಿಕೊಳ್ಳುವ ಸಮಯ ಇದು ಎಂದು ಹೇಳಿದ್ದರು ಅನುಪಮ್. ನಾವು ಸಾಮಾನ್ಯರಂತೆ ಕೋಪಗೊಳ್ಳಬೇಕು ... ಏನಾಗಿದೆಯೋ ಅದಕ್ಕೆ ಸರ್ಕಾರ ಹೊಣೆ ಎಂದಿದ್ದರು.