ಪ್ರಧಾನಿ ನರೇಂದ್ರ ಮೋದಿಯವರನ್ನು ಸಾರ್ವಜನಿಕವಾಗಿ ಹೊಗಳಿದ್ದ ನಟ ಅನುಪಮ್ ಇತ್ತೀಚೆಗೆ ಕೋವಿಡ್ -19 ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಟೀಕಿಸಿದ್ದಾರೆ.

ಏನಾಯಿತು ಎಂಬುದಕ್ಕೆ ಸರ್ಕಾರವೇ ಹೊಣೆ. ಎಲ್ಲೋ ಅವರು ಎಡವಿದ್ದಾರೆ. ಈಗ ಇಮೇಜ್  ನಿರ್ಮಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಕೆಲಸ ಆಗಬೇಕಿದೆ ಎಂದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ನಾವು ಉಳಿದ ಜನರಂತೆ ಕೋಪಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನಿವಾಸಕ್ಕೆ ಟೀಕೆ: ವಿಸ್ಟಾ ಸೈಟ್‌ನಲ್ಲಿ ಫೋಟೋ ವಿಡಿಯೋ ನಿಷೇಧ

ಆಸ್ಪತ್ರೆಯ ಹಾಸಿಗೆಗಳಿಗಾಗಿ ಭಿಕ್ಷೆ ಬೇಡುವ, ಪವಿತ್ರ ನದಿಗಳಲ್ಲಿ ತೇಲುತ್ತಿರುವ ಶವಗಳು ಮತ್ತು ಹೆಣಗಾಡುತ್ತಿರುವ ರೋಗಿಗಳ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿ, ಈ ಟೀಕೆ ಸಾಕಷ್ಟು ಸಂದರ್ಭಗಳಲ್ಲಿ ಮಾನ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಸಂದರ್ಭಕ್ಕೆ ಕೊರೋನಾ ಏರಿಕೆಯನ್ನು ಸರಿದೂಗಿಸುವುದು ಮತ್ತು ಈ ದೇಶದ ಜನರ ಪರವಾದ ಕೆಲಸಗಳನ್ನು ಮಾಡುವುದು ಸರ್ಕಾರಕ್ಕೆ ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ದೇಹಗಳು ತೇಲುವುದನ್ನು ನೋಡಿ ಸುಮ್ಮನಿರುವುದು ಅಮಾನವೀಯ ವ್ಯಕ್ತಿಗೆ ಸಾಧ್ಯ. ಆದರೆ ಇನ್ನೊಂದು ರಾಜಕೀಯ ಪಕ್ಷವು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ಕೂಡ ಸರಿಯಲ್ಲ ಎಂದಿದ್ದಾರೆ.