ಈ ಬಾಲಿವುಡ್‌ ಹೀರೋ ನಟಿಸಿದ 16 ಸಿನಿಮಾಗಳು ಸತತವಾಗಿ ಫ್ಲಾಪ್ ಆದವು. ನಿರ್ಮಾಪಕರಿಂದ ಅವಮಾನಕ್ಕೊಳಗಾದ. ಅಂಥ ನಟ ಈಗ ತನ್ನ ಪ್ರತಿ ಚಿತ್ರಕ್ಕೆ 80 ಕೋಟಿ ರೂ. ಚಾರ್ಜ್ ಮಾಡುತ್ತಾರೆ. ಅವರು ಯಾರು ಮತ್ತು ಅವರ ಕತೆ ಏನು? ಇಲ್ಲಿ ನೋಡೋಣ. 

ಪರಿಶ್ರಮವಿಲ್ಲದೇ ಬಾಲಿವುಡ್‌ನಲ್ಲಿ ಯಾರೂ ಮೇಲೆ ಬರುವುದಿಲ್ಲ. ಶಾರುಖ್ ಖಾನ್‌ನಂಥವರೇ ಇಲ್ಲಿ ಸಾಕಷ್ಟು ಸೈಕಲ್‌ ಹೊಡೆದಿದ್ದಾರೆ. ಮೊದಮೊದಲು ಸಾಕಷ್ಟು ಸೋಲುಗಳನ್ನೂ ಕಾಣಬೇಕಾಗುತ್ತದೆ. ಕೆಲವರು ನಿರ್ಮಾಪಕರಿಂದ ಅವಮಾನ, ನಿಂದನೆ ಅನುಭವಿಸುತ್ತಾರೆ. ಇದು ಅಂಥ ಒಬ್ಬ ನಟನ ಕತೆ. ಆ ಹೀರೋ ಬೇರೆ ಯಾರೂ ಅಲ್ಲ, ಅವರ ಹೆಸರು ಅಕ್ಷಯ್‌ ಕುಮಾರ್.‌ 

ಅಕ್ಷಯ್‌ ಕುಮಾರ್‌ನ ಕಠಿಣ ಪರಿಶ್ರಮ, ದೃಢತೆ ಮತ್ತು ಸರಿಯಾದ ಯೋಜನೆಗಳನ್ನು ಸರಿಯಾದ ಕಾಲಕ್ಕೆ ಆಯ್ಕೆ ಮಾಡುವ ಕೌಶಲ್ಯವು ಅವರನ್ನು ಮೇಲಕ್ಕೆ ತಂದಿತು. ಮೊದಮೊದಲು ಕಂಡ ವೈಫಲ್ಯಗಳು ಅವರ ಬದುಕಿನ ತಾತ್ಕಾಲಿಕ ಹಂತಗಳಾಗಿದ್ದವು. ರಾಜೀವ್ ಹರಿ ಓಂ ಭಾಟಿಯಾ ಎಂಬುದು ಅಕ್ಷಯ್‌ ಕುಮಾರ್‌ನ ಮೊದಲ ಹೆಸರು. ಜನವರಿ 25, 1991ರಂದು ಬಿಡುಗಡೆಯಾದ ʼಸೌಗಂಧ್ʼ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇಂದು ಅವರು ಉದ್ಯಮದಲ್ಲಿ 34 ವರ್ಷಗಳ ತುಂಬು ಪ್ರಯಾಣ ಮಾಡಿದ್ದಾರೆ. ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ಸ್ಥಿರವಾದ ತಾರೆಗಳಲ್ಲಿ ಒಬ್ಬರಾಗಿದ್ದಾರೆ. 

ಅಕ್ಷಯ್ ʼಖಿಲಾಡಿʼಯೊಂದಿಗೆ ಆರಂಭಿಕ ಯಶಸ್ಸನ್ನು ಸಾಧಿಸಿದರು. ಆದರೆ 1990ರ ದಶಕ ಅವರಿಗೆ ಅತ್ಯಂತ ಕಠಿಣವಾಗಿತ್ತು. ಅಲ್ಲಿಯವರೆಗೂ ಅಕ್ಷಯ್ ಸತತ 16 ಫ್ಲಾಪ್‌ಗಳನ್ನು ಕಾಣಬೇಕಾಯಿತು. ಚಿತ್ರ ವಿಮರ್ಶಕರು ಇವನಿಗೆ ಭವಿಷ್ಯವೇ ಇಲ್ಲ ಎಂದು ಬರೆದರು. ಪ್ರೇಕ್ಷಕರು ಉದ್ಯಮದಲ್ಲಿ ಅವರ ಕೈಹಿಡಿಯಲಿಲ್ಲ. ಆದರೂ ಅಕ್ಷಯ್ ಛಲ ಬಿಡಲಿಲ್ಲ. 

ಈ ಸವಾಲಿನ ಅವಧಿಯಲ್ಲಿಯೇ ನಿರ್ಮಾಪಕರೊಬ್ಬರು ಅಕ್ಷಯ್‌ ಅವರನ್ನು ಅವಮಾನಿಸಿದರು. ನಿರ್ಮಾಪಕ ಸುನೀಲ್ ದರ್ಶನ್ ಅವರು, ಅಕ್ಷಯ್‌ಗೆ, "ನಿನ್ನ ಫಿಲಂನ ಬ್ಯಾನರ್‌ ಹಾಕಿದ್ದೇವೆ. ಆದರೆ ಅದು ನಿನ್ನ ಕೆಪಾಸಿಟಿ ನಂಬಿ ಅಲ್ಲ" ಎಂದು ಬೇರೊಬ್ಬ ನಿರ್ಮಾಪಕರು ಹೇಳಿ ಅವಮಾನಿಸಿದ ಕ್ಷಣವನ್ನು ವಿವರಿಸಿದರು. ಆದರೂ ಈ ಅವಮಾನ, ನಿರಾಕರಣೆ ಅಕ್ಷಯ್‌ ಅವರನ್ನು ಹತಾಶಗೊಳಿಸಲಿಲ್ಲ. ಬದಲಾಗಿ ಇದು ಅವರ ಪುನರಾಗಮನಕ್ಕೆ ಉತ್ತೇಜನ ನೀಡಿತು. ಅಕ್ಷಯ್‌ ಮತ್ತೆ ಅವಕಾಶಗಳನ್ನು ಪಡೆದರು. ದರ್ಶನ್‌ ಅವರು ʼಧಡ್ಕನ್‌ʼನಲ್ಲಿ ಅಕ್ಷಯ್‌ಗೆ ಪ್ರಮುಖ ಪಾತ್ರವನ್ನು ನೀಡಿದರು. ಇದು ಅವರ ವೃತ್ತಿಜೀವನಕ್ಕೆ ಬ್ರೇಕ್‌ ನೀಡಿತು. 

ಹಿನ್ನಡೆಗಳ ಹೊರತಾಗಿಯೂ ಅಕ್ಷಯ್ ಅವರ ವೃತ್ತಿಜೀವನ ʼಹೇರಾಫೆರಿʼ ಸಿನಿಮಾದೊಂದಿಗೆ ಗಮನಾರ್ಹ ಪುನರುತ್ಥಾನವನ್ನು ಕಂಡಿತು. ಆ ಫಿಲಂ ಒಂದು ಕಲ್ಟ್ ಕ್ಲಾಸಿಕ್ ಎನಿಸಿತು. ಅಕ್ಷಯ್ ಅವರ ಕಠಿಣ ಪರಿಶ್ರಮ, ದೃಢತೆ ಮತ್ತು ಸರಿಯಾದ ಯೋಜನೆಗಳನ್ನು ಆಯ್ಕೆ ಮಾಡುವ ಕೌಶಲ್ಯವು ಅವರನ್ನು ಮೇಲಕ್ಕೆ ತಂದಿತು. ಹೋರಾಟಗಾರನಿಗೆ ವೈಫಲ್ಯ ಕೇವಲ ತಾತ್ಕಾಲಿಕ ಹಂತ ಎಂದು ಸಾಬೀತುಪಡಿಸಿತು. 

ಮೇಕಪ್ ಇಲ್ಲದ ತಮನ್ನಾ ಫೋಟೋ ವೈರಲ್, 'ಅಯ್ಯೋ ಇವಳೇನಾ ಮಿಲ್ಕಿ ಬ್ಯೂಟಿ ಎಂದ ನೆಟಿಜನ್ಸ್

ಈಗ ಮಾಧ್ಯಮ ವರದಿಗಳ ಪ್ರಕಾರ ಅಕ್ಷಯ್ ಕುಮಾರ್ ಆಸ್ತಿಯ ನಿವ್ವಳ ಮೌಲ್ಯ ಸುಮಾರು 2700 ಕೋಟಿ ರೂ. ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸಿದರು. ಸಾಮ್ರಾಟ್ ಪೃಥ್ವಿರಾಜ್ ಮತ್ತು ಬಡೇ ಮಿಯಾ ಚೋಟೆ ಮಿಯಾ ಚಿತ್ರಗಳು ಉತ್ತಮವಾಗಿ ಗಳಿಕೆ ಮಾಡಲಿಲ್ಲ. ಆದರೂ ಅಕ್ಷಯ್‌ನ ಇತ್ತೀಚಿನ ಸಿನಿಮಾ ಸ್ಕೈ ಫೋರ್ಸ್, ಅವರ ಅದೃಷ್ಟವನ್ನು ಪುನರುಜ್ಜೀವನಗೊಳಿಸಿದೆ. 15 ಕೋಟಿಗಳ ಆರಂಭಿಕ ಗಳಿಕೆ ಮತ್ತು ಸಕಾರಾತ್ಮಕ ವಿಮರ್ಶೆ ದಕ್ಕಿದೆ. ಈ ಚಿತ್ರ ಅಕ್ಷಯ್ ಕುಮಾರ್ ಅವರ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಸಿದ್ಧವಾಗಿದೆ.

ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಅವರ ಪಯಣ ಅವರ ದೃಢತೆ, ಅಚಲವಾದ ಮನೋಭಾವ ಮತ್ತು ಯಾವುದೇ ಸೋಲಿನ ಸಮ್ಮುಖದಲ್ಲಿಯೂ ಪುಟಿದೇಳುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ವೈಯಕ್ತಿಕ ಮತ್ತು ವೃತ್ತಿಪರ ಹಿನ್ನಡೆಗಳನ್ನು ಎದುರಿಸುವುದರಿಂದ ಹಿಡಿದು ಪ್ರಬಲವಾಗಿ ಹೊರಹೊಮ್ಮುವವರೆಗೆ, ಉದ್ಯಮದಲ್ಲಿ ಅವರ 34 ವರ್ಷಗಳ ಪ್ರಯಾಣವು ಸ್ಫೂರ್ತಿದಾಯಕವಾಗಿದೆ.

300 ಕೋಟಿ ಮನೆ, 3 ಕೋಟಿ ಕಾರು, ಗಂಡನಿಗಿಂತ ಜಾಸ್ತಿ ಸಂಪಾದನೆ ಮಾಡೋ ನಟಿ ಯಾರು?